ಬೆಂಗಳೂರು: ಬೇರೆ ಬೇರೆ ವ್ಯಕ್ತಿತ್ವದ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಸಾಗುವ ಮನ ಮಿಡಿಯ ಧಾರಾವಾಹಿ ʻನಿನನಾಗಿʼ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ʻನಿನಗಾಗಿ’ ಧಾರಾವಾಹಿಯಲ್ಲಿ ಕಥಾನಾಯಕನಾಗಿ ರಿತ್ವಿಕ್ ಮಠದ್ ಅಭಿನಯಿಸುತ್ತಿದ್ದಾರೆ. ಇದೀಗ ಮುಂಗಾರು ಮಳೆ’ (Mungaru Male) ನಟಿ ಪೂಜಾ ಗಾಂಧಿ (Pooja Gandhi) ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ‘ನಿನಗಾಗಿ’ ಎನ್ನುತ್ತಾ ಪೂಜಾ ಗಾಂಧಿ (Ninagagi Kannada Serial) ಟಿವಿ ಪರದೆಗೆ ಎಂಟ್ರಿ ಕೊಟ್ಟಿದ್ದಾರೆ.
ಸಿನಿಮಾ ನಟಿಯ ಕಥೆ ಹೊಂದಿರುವ ‘ನಿನಗಾಗಿ’ ಸೀರಿಯಲ್‌ನಲ್ಲಿ ಸೂಪರ್ ಸ್ಟಾರ್ ರಚನಾ ಎಂಬ ಪಾತ್ರದಲ್ಲಿ ‘ಬಿಗ್ ಬಾಸ್’ ಖ್ಯಾತಿಯ ದಿವ್ಯಾ ಉರುಡುಗ (Divya Uruduga) ನಟಿಸುತ್ತಿದ್ದಾರೆ. ಸಾಕಷ್ಟು ತಿರುವು ಪಡೆದು ಮುನ್ನುಗ್ಗುತ್ತಿರುವ ಈ ಸೀರಿಯಲ್‌ಗೆ ಪೂಜಾ ಗಾಂಧಿ ವಿಶೇಷ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.
ಪೂಜಾ ಗಾಂಧಿ ಜೊತೆಗಿನ ಸುಂದರ ಫೋಟೋಗಳನ್ನು ದಿವ್ಯಾ ಉರುಡುಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಮುದ್ದು ಕನ್ನಡತಿ’ ಎಂದು ದಿವ್ಯಾ ಕ್ಯಾಪ್ಷನ್ ನೀಡಿದ್ದಾರೆ. ಈ ಸೀರಿಯಲ್‌ನಲ್ಲಿ ನಟಿಸುತ್ತಿರುವ ಸಹಕಲಾವಿದರು ಕೂಡ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ದಿವ್ಯಾ ಉರುಡುಗ ಇದೀಗ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ರಚನಾ ಪಾತ್ರದಲ್ಲಿ ದಿವ್ಯಾ ನಟಿಸುತ್ತಿದ್ದಾರೆ. ‘ನಿನಗಾಗಿ’ ಧಾರಾವಾಹಿಯ ಕಥೆ ಸೂಪರ್ ಸ್ಟಾರ್ ರಚನಾ ಸುತ್ತ ಸುತ್ತಲಿದೆ. ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿರುವ ರಚನಾಗೆ ಕೋಟ್ಯಂತರ ಅಭಿಮಾನಿಗಳ ಪ್ರೀತಿ, ಆಶೀರ್ವಾದ ಇದೆ. ಆದರೆ, ಅದ್ಯಾಕೋ ರಚನಾಗೆ ಅಮ್ಮನ ಪ್ರೀತಿ ಇಲ್ಲ. ಸೂಪರ್ ಸ್ಟಾರ್ ಆಗಿದ್ದರೂ, ಅಮ್ಮನ ಪ್ರೀತಿ ಕಾಣದ ನಟಿಯ ಕಥೆ ‘ನಿನಗಾಗಿ’.
ಇದನ್ನೂ ಓದಿ: Ninagagi Kannada Serial: ʻನಿನಗಾಗಿʼ ಸೀರಿಯಲ್‌ನಲ್ಲಿ ದಿವ್ಯಾ ಉರುಡುಗ ಜತೆ ‘ಗಿಣಿರಾಮ’ ಧಾರಾವಾಹಿಯ ನಟ ನಟನೆ
ನಿನಗಾಗಿ’ ಧಾರಾವಾಹಿಯಲ್ಲಿ ಕಥಾನಾಯಕನಾಗಿ ರಿತ್ವಿಕ್ ಮಠದ್ ಅಭಿನಯಿಸುತ್ತಿದ್ದಾರೆ. ತಾರಾಗಣದಲ್ಲಿ ಪ್ರಿಯಾಂಕ ಕಾಮತ್, ಕಿಶನ್ ಬೆಳಗಲಿ, ವಿಜಯ್ ಕೌಂಡಿನ್ಯ, ಸಿರಿ ಸಿಂಚನ ಮುಂತಾದವರಿದ್ದಾರೆ.
ನಮ್ಮನೆ ಯುವರಾಣಿಯನ್ನು ನಿರ್ದೇಶಿಸಿದ್ದ ಸಂಪೃಥ್ವಿ ‘ನಿನಗಾಗಿʼಯ ಸೂತ್ರಧಾರಿ. ಭಾಗ್ಯಲಕ್ಷ್ಮಿ, ನಮ್ಮನೆ ಯುವರಾಣಿ, ಕನ್ನಡತಿಯಂಥ ಸುಪರ್ ಹಿಟ್ ಧಾರಾವಾಹಿಗಳನ್ನು ನಿರ್ಮಿಸಿದ ಜೈ ಮಾತಾ ಕಂಬೈನ್ಸ್ ‘ನಿನಗಾಗಿʼಯ ನಿರ್ಮಾಣದ ಹೊಣೆ ಹೊತ್ತಿದೆ.