Site icon Vistara News

Ninagagi Serial: ‘ಬೃಂದಾವನ’ ಧಾರಾವಾಹಿ ಅಂತ್ಯ; ದಿವ್ಯಾ ಉರುಡುಗ ಜತೆ ‘ನಿನಗಾಗಿ’ ಎಂದ ʻಗಿಣಿರಾಮʼನಟ!

Ninagagi Serial Ritvvikk Mathad Divya Uruduga On May 27

ಬೆಂಗಳೂರು: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಈಗಾಗಲೇ ಬೃಂದಾವನ ಧಾರಾವಾಹಿ ಅಂತ್ಯ ಕಂಡಿದೆ. ಹೊಸದೊಂದು ಧಾರಾವಾಹಿ ಬರುತ್ತಿದೆ. ‘ಗಿಣಿರಾಮ’ ಧಾರಾವಾಹಿಯಲ್ಲಿ (Ninagagi Serial) ಹಳ್ಳಿ ಸೊಗಡಿನ ಪಾತ್ರವನ್ನು ಮಾಡಿದ ನಟ ರಿತ್ವಿಕ್ ಮಠದ್ (Ritvvikk Mathad ) ಹಾಗೂ ನಟಿ ದಿವ್ಯಾ ಉರುಡುಗ (Actress Divya Uruduga) , ‘ನಿನಗಾಗಿ’ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನಿನಗಾಗಿ’ ಧಾರಾವಾಹಿ ಈಗಾಗಲೇ ಪ್ರೋಮೊ ಮೂಲಕ ಬಹಳಷ್ಟು ಸದ್ದು ಮಾಡಿದೆ. ನಟ ರಿತ್ವಿಕ್ ಮಠದ್ ಈ ಧಾರಾವಾಹಿಯಲ್ಲಿ ಬಹಳ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಧಾರಾವಾಹಿಯಲ್ಲಿ ದಿವ್ಯಾ ಅವರು ನಟಿ ಆಗಿದ್ದರೆ, ಹೆಣ್ಣು ಮಗುವಿನ ತಂದೆ ಆಗಿ ಕಾಣಿಸಿಕೊಳ್ಳುವ ನಟ ರಿತ್ವಿಕ್ ಈ ಧಾರಾವಾಹಿಯಲ್ಲಿ ಸಿಂಗಲ್ ಪೇರೆಂಟ್.

ಪ್ರೋಮೊ ನೋಡಿದರೆ ಈ ಬಾರಿ ರಿತ್ವಿಕ್ ಮಠದ್ ನಿರ್ವಹಿಸುತ್ತಿರುವ ಪಾತ್ರ ಬಹಳ ಪ್ರಬುದ್ಧವಾದದ್ದು. ಇವರ ಕಥೆ ಏನು? ಧಾರಾವಾಹಿ ಕಥೆಯ ನಾಯಕಿಗೂ ಈ ನಾಯಕನಿಗೂ ಯಾವ ರೀತಿ ಪರಿಚಯವಾಗುತ್ತೆ ಸಂಬಂಧ ಯಾವ ರೀತಿ ಮುಂದುವರೆಯುತ್ತದೆ ಎಂಬ ಕುತೂಹಲ ವೀಕ್ಷಕರಿಗೆ ಕಾಡುತ್ತಿದೆ. ‘ನಿನಗಾಗಿ’ ಧಾರಾವಾಹಿ ಮೇ 27ನೇ ತಾರೀಖಿನಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗುತ್ತಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ನಿನಗಾಗಿ ಸೀರಿಯಲ್ ಪ್ರಸಾರವಾಗಲಿದೆ. ಈ ಧಾರಾವಾಹಿಗೆ ಸಂಪೃಥ್ವಿ ನಿರ್ದೇಶನವಿದೆ. ಈ ಹಿಂದೆ ಇವರು ‘ನಮ್ಮನೆ ಯುವರಾಣಿ’, ‘ಹೂಮಳೆ’, ‘ನಮ್ಮ ಲಚ್ಚಿ’ ಸೀರಿಯಲ್ ನಿರ್ದೇಶನ ಮಾಡಿದ್ದರು.

ಇದನ್ನೂ ಓದಿ: Ninagagi Kannada Serial: ʻನಿನಗಾಗಿʼ ಸೀರಿಯಲ್‌ನಲ್ಲಿ ದಿವ್ಯಾ ಉರುಡುಗ ಜತೆ ‘ಗಿಣಿರಾಮ’ ಧಾರಾವಾಹಿಯ ನಟ ನಟನೆ

ನಿನಗಾಗಿ’ ಧಾರಾವಾಹಿಯಲ್ಲಿ ಕಥಾನಾಯಕನಾಗಿ ರಿತ್ವಿಕ್ ಮಠದ್ ಅಭಿನಯಿಸುತ್ತಿದ್ದಾರೆ. ಪ್ರಿಯಾಂಕಾ ಕಾಮತ್, ಕಿಶನ್ ಬೆಳಗಲಿ, ಲೋಕೇಶ್, ವಿಜಯ್ ಕೌಂಡಿನ್ಯ, ಸಾನಿಯಾ ಪೊಣ್ಣಮ್ಮ ದೇವಿ, ಸಿರಿ ಸಿಂಚನ ಮುಂತಾದವರಿದ್ದಾರೆ.

Exit mobile version