Site icon Vistara News

Nisha Ravikrishnan:ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟ ʻಗಟ್ಟಿಮೇಳ’ ನಟಿ!

Nisha Ravikrishnan in new serial annayya

‘ಗಟ್ಟಿಮೇಳ’ (Gattimela) ಸೀರಿಯಲ್ ನಾಯಕಿ ನಿಶಾ ರವಿಕೃಷ್ಣನ್ (Nisha Ravikrishnan) ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ತೆಲುಗಿನಲ್ಲಿ ಬ್ಯುಸಿಯಾಗಿದ್ದ ನಟಿ ಈಗ ಕನ್ನಡದ ಹೊಸ ಧಾರಾವಾಹಿಯನ್ನು ಒಪ್ಪಿಕೊಂಡಿದ್ದಾರೆ.

ಕಾಂತಾರ’ ಖ್ಯಾತಿಯ ಪ್ರಮೋದ್ ಶೆಟ್ಟಿ ಮತ್ತು ಅವರ ಪತ್ನಿ ಸುಪ್ರೀತಾ ಇದೀಗ ಹೊಸ ಸೀರಿಯಲ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ.

‘ಅಣ್ಣಯ್ಯ’ (Annayya) ಎಂಬ ಸೀರಿಯಲ್‌ಗೆ ನಿಶಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Duniya Vijay: ಕೋಟಿ ಸಿನಿಮಾದ ‘ದುನಿಯಾ ವಿಜಯ್’ ವಿಶೇಷ ಪಾತ್ರಕ್ಕೆ ಪ್ರೇಕ್ಷಕರು ಫಿದಾ

ಅಣ್ಣಯ್ಯ ಧಾರಾವಾಹಿಯಲ್ಲಿ ಅವರ ಪಾತ್ರ ಹೇಗಿರಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಆದರೆ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ಅಂತ್ಯ ಆಗುವ ಸಾಧ್ಯತೆ ಇದೆ. ನವೀನ್ ಕೃಷ್ಣ, ಕೃತಿಕಾ ರವೀಂದ್ರ, ಉಮೇಶ್, ಕಾರ್ತಿಕ್ ಸಾಮಗ್ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಆರೂರು ಜಗದೀಶ್ ನಿರ್ದೇಶನ, ನಿರ್ಮಾಣದ ಧಾರಾವಾಹಿ ಇದಾಗಿದೆ.
Exit mobile version