ಬೆಂಗಳೂರು: ಅ.8ರಂದು ಜೀ ವಾಹಿನಿಯಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗ್ರ್ಯಾಂಡ್ ಫಿನಾಲೆ (Dance Karnataka Dance 7) 6ರಿಂದ 10.30ರವರೆಗೆ ಅದ್ಧೂರಿಯಾಗಿ ಪ್ರಸಾರ ಕಂಡಿದೆ. ವಿನ್ನರ್ ಯಾರು ಆಗಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಿಗಿತ್ತು. ಅದರಂತೆ ಫಿನಾಲೆಯಲ್ಲಿ ವಿನ್ ಆದವರಿಗೆ ಪವರ್ ಸ್ಟಾರ್ ಟ್ರೋಫಿ ಸೇರಬೇಕು. ಈ ಪವರ್ ಸ್ಟಾರ್ ಟ್ರೋಫಿ ಯಾರಿಗೆ ಸಿಗಲಿದೆ ಎಂಬ ಕುತೂಹಲ ಪ್ರೆಕ್ಷಕರಲ್ಲಿ ಹೆಚ್ಚಾಗಿತ್ತು. ಇದೀಗ ಕರುನಾಡಿನ ಹೃದಯ ಗೆದ್ದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 7ರ ಡ್ಯಾನ್ಸ್ ರಾಹುಲ್ ಮಾಸ್ಟರ್ ಜೋಡಿ ನಿತಿನ್-ಡಿಂಪಲ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಕಳೆದ 22 ವಾರಗಳಿಂದ ಯಶಸ್ವಿಯಾಗಿ ನಡೆದಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7’ ಶೋ ಕೊನೆಗೂ ವಿನ್ನರ್ ಘೋಷಣೆ ಮಾಡಿದೆ.
ಡ್ಯಾನ್ಸ್ ಹಬ್ಬದಲ್ಲಿ ಫಸ್ಟ್ ರನ್ನರ್ ಅಪ್ ಸಾತ್ವಿಕ್-ಸೌಮ್ಯಾ ಜೋಡಿ ಆದರೆ ಸೆಕಂಡ್ ರನ್ನರ್ ಅಪ್ ಆಗಿ ಇಸುಬ್-ಅಕ್ಷದ ಜೋಡಿ ಆಯ್ಕೆಯಾಗಿದೆ. ಈ ಬಾರಿ ವಿಜೇತರಿಗೆ ಪವರ್ ಸ್ಟಾರ್ ಟ್ರೋಫಿ ಜತೆಗೆ 25 ಲಕ್ಷ ರೂ. ಕ್ಯಾಶ್ ಪ್ರೈಸ್ ಪಡೆದಕೊಂಡಿದೆ. ಕೆಲವರು ಪ್ರಶಸ್ತಿಯ ಬಗ್ಗೆ ಹೊಗಳಿದರೆ ಇನ್ನೂ ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ʻʻಈ ಕಾರ್ಯಕ್ರಮ ಮೇಲೆ ಬಹಳ ನಂಬಿಕೆ ಇತ್ತು. ಫೈನಲ್ಸ್ ನೋಡಿ ಬಹಳ ಬೇಜಾರ ಆಯ್ತು. ಒಳ್ಳೆ ಪ್ರತಿಭೆಗೆ ಬೆಲೆ ಇಲ್ಲದ ಹಾಗೆ ಆಯ್ತುʼʼಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ʻʻಟಿಆರ್ಪಿಗೋಸ್ಕರ ಭೇದ ಭಾವ ಮಾಡುತ್ತಾರೆʼʼಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Dance Karnataka Dance 7: ʻಪವರ್ ಸ್ಟಾರ್ʼ ಟ್ರೋಫಿ ಯಾರ ಮುಡಿಗೆ? ಇಂದು ಡಿಕೆಡಿ ಗ್ರ್ಯಾಂಡ್ ಫಿನಾಲೆ!
22ರ ವಾರಗಳವರೆಗೆ, 22 ಥೀಮ್ನೊಂದಿಗೆ, 13 ಜೋಡಿಗಳ ಜತೆ ಶುರುವಾದ ಈ ಡ್ಯಾನ್ಸ್ ರಿಯಾಲಿಟಿ ಶೋ 6 ಜೋಡಿಗಳೊಂದಿಗೆ ಫಿನಾಲೆ ಹಂತವನ್ನು ತಲುಪಿತ್ತು. ಫಿನಾಲೆಯಲ್ಲಿ ವಿನ್ ಆದವರಿಗೆ ಪವರ್ ಸ್ಟಾರ್ ಟ್ರೋಫಿ ಸೇರಲಿತ್ತು. ಪ್ರಭುದೇವ, ಶಿವರಾಜ್ಕುಮಾರ್, ವಿಜಯ ರಾಘವೇಂದ್ರ ಅವರು ನಾಟನಾಟು ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಕಾರ್ಯಕ್ರಮದಲ್ಲಿ ಜಡ್ಜ್ ಗಳಾಗಿ ಅರ್ಜುನ್ ಜನ್ಯ, ನಟಿ ರಕ್ಷಿತಾ ಪ್ರೇಮ್, ವಿಜಯ್ ರಾಘವೇಂದ್ರ, ಶಿವರಾಜ್ ಕುಮಾರ್, ಚಿನ್ನಿ ಪ್ರಕಾಶ್ ಮಾಸ್ಟರ್ ಇದ್ದರು.