ಬೆಂಗಳೂರು: ಬಿಗ್ ಬಾಸ್ ಜೋಡಿ, ಕ್ಯೂಟ್ ಕಪಲ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ (Niveditha Gowda) ದಂಪತಿ ವಿಚ್ಛೇದನ ಪಡೆದುಕೊಂಡಿದೆ. ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ನಿವೇದಿತಾಗೆ ಲವ್ ಪ್ರೊಪೋಸಲ್ ಮಾಡಿ ಸುದ್ದಿಯಾಗಿದ್ದರು. ಚಂದನ್ ವರ್ತನೆಗೆ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಇದೇ ವರ್ಷ ಮೇ 12 ರಂದು ನಿವೇದಿತಾ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದರು ಚಂದನ್. ಆರು ದಿನಗಳ ಹಿಂದೆಯಷ್ಟೇ ʻಕೋಟಿʼ ಸಿನಿಮಾ ಪ್ರಚಾರಕ್ಕೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೀಗ ಇಬ್ಬರೂ ಬೇರೆಯಾಗಿದ್ದಾರೆ. ಇದೀಗ ಜೋಡಿಯ ಫ್ಯಾನ್ಸ್ ಕಮೆಂಟ್ ಮೂಲಕ ಬೇಸರ ಹೊರ ಹಾಕಿದ್ದಾರೆ.
ʻಕ್ಯಾಂಡಿ ಕ್ರಶ್ʼ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಮೂರು ತಿಂಗಳ ಹಿಂದೆ ಚಿತ್ರದ ಶೂಟಿಂಗ್ ನಡೆದಿತ್ತು. ಸದ್ಯ ಸಿನಿಮಾ ರಿಲೀಸ್ ಆಗಬೇಕಿದೆ.
ಯುವ ದಸರಾ ಕಾರ್ಯಕ್ರಮದಲ್ಲಿ ಪ್ರಪೋಸ್ ಮಾಡಿದ್ದ ಚಂದನ್
ಚಂದನ್ ಶೆಟ್ಟಿ ಮತ್ತು ನಿವೇದಿತಾ ಕನ್ನಡದ ‘ಬಿಗ್ ಬಾಸ್-5’ರ ಸ್ಪರ್ಧಿಗಳು. ಈ ಕಾರ್ಯಕ್ರಮದಲ್ಲಿ ಜೊತೆಯಾದ ಇಬ್ಬರ ಪರಿಚಯ ನಂತರ ಸ್ನೇಹ ಹಾಗೂ ಪ್ರೀತಿಯಾಗಿ ಬದಲಾಗಿತ್ತು. ಯುವ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಂದನ್ ಶೆಟ್ಟಿ, ಅದೇ ವೇದಿಕೆ ಮೇಲೆ ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿದ್ದರು. ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಲು ಮುಂದಾಗಿದ್ದ ಚಂದನ್, ಮೊದಲು ಫಾರಿನ್ ಲೊಕೇಷನ್ ಆರಿಸಿಕೊಂಡಿದ್ರಂತೆ. ಆದರೆ ಆ ನಂತರ ದೇವಿ ಚಾಮುಂಡೇಶ್ವರಿ ಆಶೀರ್ವಾದದೊಂದಿಗೆ ಮೈಸೂರು ಯುವ ದಸರಾ ವೇದಿಕೆ ಮೇಲೆ ಪ್ರೇಮ ನಿವೇದನೆ ಮಾಡಲು ಮುಂದಾಗಿದ್ದರು ಎಂದು ವರದಿಯಾಗಿತ್ತು.
ಇದನ್ನೂ ಓದಿ: Niveditha Gowda: ನಿವೇದಿತಾ- ಚಂದನ್ ದಾಂಪತ್ಯದಲ್ಲಿ ಬಿರುಕು? ಡಿವೋರ್ಸ್ ಕೊಟ್ರಾ ಬಾರ್ಬಿ ಡಾಲ್?
ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಜೋಡಿ!
ನಟಿ ನಿವೇದಿತಾ ಗೌಡ (Niveditha Gowda) ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಆಗಾಗ ತಮ್ಮ ಪೋಸ್ಟ್ ಹಾಗೂ ರೀಲ್ಸ್ ಮೂಲಕ ಸುದ್ದಿಯಾಗುತ್ತಲೇ ಇರುತ್ತಿದ್ದರು. ಹಿಂದೊಮ್ಮೆ ಅಂಡರ್ ವಾಟರ್ ಶೂಟ್ ಮಾಡಿರುವ ಜೋಡಿ ಲಿಪ್ ಕಿಸ್ ಮಾಡಿದ ರೊಮ್ಯಾಂಟಿಕ್ ವಿಡಿಯೊ ಶೇರ್ ಮಾಡಿಕೊಂಡಿತ್ತು. ಸಾವಿರಾರು ಜನರು ಲೈಕ್ ಮಾಡಿದ್ದರು. ಕೆಲವರು ಈ ವಿಡಿಯೊಗೆ ಮೆಚ್ಚುಗೆ ಸೂಚಿಸಿದರೆ ಇನ್ನು ಕೆಲವರು ನೆಗೆಟಿವ್ ಕಮೆಂಟ್ ಕೂಡ ಮಾಡಿದ್ದರು.
ಬಿಗ್ ಬಾಸ್ ಕನ್ನಡ ಸೀಸನ್ 5’ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿದ್ದು. 2020ರ ಫೆಬ್ರವರಿಯಲ್ಲಿ ಹಸೆಮಣೆ ಏರಿದರು. ಗಾಯಕ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಚಂದನ್ ಶೆಟ್ಟಿ ಅವರು ಸಿನಿಮಾದಲ್ಲಿಯೂ ನಟಿಸಿದ್ದಾರೆ. ಚಂದನ್ ಶೆಟ್ಟಿ ಅವರ ಮೊದಲ ಸಿನಿಮಾದ ಶೀರ್ಷಿಕೆ ‘ಎಲ್ರ ಕಾಲೆಳೆಯುತ್ತೆ ಕಾಲ’.
ಇದೀಗ ಜೋಡಿಗೆ ಬೇರೆಯಾಗಿದ್ದು ಕಂಡು ಅವರ ಫ್ಯಾನ್ಸ್ ಬೇಸರ ಹೊರ ಹಾಕುತ್ತಿದ್ದಾರೆ. ಮತ್ತೆ ಒಂದಾಗಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ದಂಪತಿ ಇನ್ನೂ ಸ್ಪಷ್ಟನೆ ಕೊಟ್ಟಿಲ್ಲ. ಕರಿಯರ್ ದೃಷ್ಟಿಯಿಂದ ಪರಸ್ಪರ ಒಪ್ಪಿಗೆ ಮೂಲಕ ವಿಚ್ಛೇದನ ಪಡೆದುಕೊಂಡಿದ್ದಾರೆ. ಇಂದು ಶಾಂತಿನಗರ ಕೋರ್ಟ್‌ನಲ್ಲಿ ದಂಪತಿ ವಿಚ್ಛೇದನ ಪಡೆದುಕೊಂಡಿದೆ.