Site icon Vistara News

Niveditha Gowda : ಡಿವೋರ್ಸ್‌ ಬಳಿಕ ಒಟ್ಟಾಗಿ ಸುದ್ದಿಗೋಷ್ಠಿ ಕರೆದ ಚಂದನ್-ನಿವೇದಿತಾ!

Niveditha Gowda Chandan Shetty Joint Pressmeet For The First Time

ಬೆಂಗಳೂರು: ಚಂದನ್‌ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ (Niveditha Gowda) ಡಿವೋರ್ಸ್‌ ಪಡೆದುಕೊಂಡಿರುವುದು ಗೊತ್ತೇ ಇದೆ. ಇನ್‌ಸ್ಟಾದಲ್ಲಿ ಪೋಸ್ಟ್‌ ಮೂಲಕ ಜೋಡಿ ಈ ಬಗ್ಗೆ ಅಧಿಕೃತ ಮಾಹಿತಿ ಕೂಡ ಹಂಚಿಕೊಂಡಿದೆ. ಈಗ ಇಬ್ಬರೂ ಒಟ್ಟಾಗಿ ಸುದ್ದಿಗೋಷ್ಠಿ ಕರೆದಿದ್ದಾರೆ. ಈ ಮೂಲಕ ಹಲವು ವದಂತಿಗೆ ಇವರು ತೆರೆ ಎಳೆಯಲಿದ್ದಾರೆ. ಬೆಂಗಳೂರಿನ ಜಿಟಿ ಮಾಲ್​ನಲ್ಲಿರುವ ಎಂಬಿ ಲೆಗಸಿಯಲ್ಲಿ ಸುದ್ದಿಗೋಷ್ಠಿ ಆಯೋಜನೆ ಮಾಡಲಾಗಿದೆ. ಮಧ್ಯಾಹ್ನ 3:30ಕ್ಕೆ ಸುದ್ದಿಗೋಷ್ಠಿ ಆರಂಭ ಆಗಲಿದೆ. ಈ ವೇಳೆ ಯಾವೆಲ್ಲ ವಿಚಾರ ಮಾತನಾಡುತ್ತಾರೆ ಎನ್ನುವ ಕುತೂಹಲ ಅವರ ಫ್ಯಾನ್ಸ್‌ನಲ್ಲಿ ಹೆಚ್ಚಾಗಿದೆ.

ಡಿವೋರ್ಸ್‌ ಅನೌನ್ಸ್‌ ಮಾಡಿದ ಬಳಿಕ ನಿವೇದಿತಾ ಬಗ್ಗೆ ಹಲವು ಗಾಸಿಪ್‌ಗಳು ಕೇಳಿ ಬಂದವು. ಮಗು ಪಡೆಯಲು ಒಪ್ಪದ್ದಕ್ಕೆ ನಿವೇದಿತಾ ವಿಚ್ಛೇದನ ಪಡೆದರು, ನಟಿಯಾಗಿ ಮುಂದುವರಿಯಬೇಕು ಎಂಬುದಕ್ಕೆ ಗಂಡನಿಂದ ದೂರ ಆಗುತ್ತಿದ್ದಾರೆ, ಹಣದ ಆಸೆಗೆ ನಿವೇದಿತಾ ಈ ರೀತಿ ನಿರ್ಧಾರ ತೆಗೆದುಕೊಂಡರು ಎಂದು ವದಂತಿಗಳು ಹಬ್ಬಿದವು. ಇದೀಗ ಸ್ವತಃ ಜೋಡಿಯೇ ಮುಂದೆ ಬಂದು ಈ ಎಲ್ಲ ವದಂತಿಗೆ ತೆರೆ ಎಳೆಯಲಿದೆ.

ದುಡ್ಡಿನ ಹಿಂದೆ ಹೋದವರು ಯಾರಂತ ಗೊತ್ತಾಗುತ್ತೆ!

ಬಿಗ್‌ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ “ಜೊತೆಯಾಗಿರಲು ಗಟ್ಟಿಯಾದ ಭರವಸೆ ಬೇಕು, ದೂರಾಗಲು ಚಿಕ್ಕದಾದ ಸಂಶಯ ಸಾಕು’ಎಂದು ಚಂದನ್‌ ಕುರಿತಾಗಿ ಬರೆದುಕೊಂಡಿದ್ದರು. ʻʻದುಡ್ಡಿನ ಹಿಂದೆ ಹೋಗಿರುವಂತಹವರು ಅಥವಾ ಅವಕಾಶಗಳ ಹಿಂದೆ ಹೋಗಿರುವಂತಹವರು ಯಾರು ಎಂದು ಕರ್ನಾಟಕದ ಜನತೆಗೆ ಮುಂದೆ ಗೊತ್ತಾಗುತ್ತೆʼʼ ಎಂದು ಸಂದರ್ಶನದಲ್ಲಿಯೂ ಹೇಳಿದ್ದಾರೆ.

ಪ್ರಶಾಂತ್‌ ಸಂಬರಗಿ ಮಾತನಾಡಿ ʻʻʻನಿನ್ನೆ ನಗ್ತಾನೇ ಬಂದು ಹೋದರು. ಆದರೆ ಚಂದನ್‌ಗೆ ನೋವಾಗಿದೆ. ಇರುವ ಸ್ವಿಫ್ಟ್ ಕಾರು ಬಿಟ್ಟು ಬೆನ್ಜ್ ಕಾರು ಬೇಕು ಅಂದರೆ ನಾವೇನು ಮಾಡುವುದಕ್ಕೆ ಆಗುವುದಿಲ್ಲ. ಬೆನ್ಜ್ ಹಿಂದೆ ಹೋಗಿರುವಂತವರು, ದುಡ್ಡಿನ ಹಿಂದೆ ಹೋಗಿರುವಂತಹವರು ಅಥವಾ ಅವಕಾಶಗಳ ಹಿಂದೆ ಹೋಗಿರುವಂತಹವರು ಯಾರು ಅಂತ ಕರ್ನಾಟಕದ ಜನತೆಗೆ ಮುಂದೆ ಗೊತ್ತಾಗುತ್ತೆ. ಚಂದನ್‌ಗೆ ನಮ್ಮ ಬ್ರದರ್ಲಿ ಸಪೋರ್ಟ್, ಎಮೋಷನಲ್ ಸಪೋರ್ಟ್ ಇದೆʼʼ ಎಂದಿದ್ದರು.

ಇದನ್ನೂ ಓದಿ: Niveditha Gowda: ದುಡ್ಡಿನ ಹಿಂದೆ ಹೋದವರು ಯಾರಂತ ಗೊತ್ತಾಗುತ್ತೆ; ಚಂದನ್‌ಗೆ ನಮ್ಮ ಸಪೋರ್ಟ್‌ ಎಂದ ಪ್ರಶಾಂತ್‌ ಸಂಬರಗಿ!

ಡಿವೋರ್ಸ್​ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದ ನಿವೇದಿತಾ ಗೌಡ

ಈ ದಿನ., ಚಂದನ್ ಶೆಟ್ಟಿ ಮತ್ತು ನಾನು, ನಮ್ಮ ದಾಂಪತ್ಯ ಜೀವನವನ್ನ ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೂಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನು ಗೌರವಿಸಲು ಕೋರುತ್ತೇವೆ. ಪ್ರತಿ ಸಂದರ್ಭದಲ್ಲಿ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲವನ್ನು ಕೋರುತ್ತೇವೆ. ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರೂ ಪರಸ್ಪರ ಒಬ್ಬರನ್ನು ಒಬ್ಬರು ಗೌರವಿಸುತ್ತೇವೆ. ಸೂಕ್ಷ್ಮ ಪರಿಗಣೆಗಾಗಿ ಎಲ್ಲರಿಗೂ ಧನ್ಯವಾದಗಳು ಎಂದು ನಿವೇದಿತಾ ಗೌಡ ಬರೆದುಕೊಂಡಿದ್ದರು.

ವಿದೇಶಕ್ಕೆ ಹೋಗುವ ಸಾರ್ಧಯತೆ

ಫ್ಯಾಮಿಲಿ ಕೋರ್ಟ್‌ನಲ್ಲಿ ಜೂನ್ 6ರಂದು ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದರು. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಮಿಡಿಯೆಟರ್ ಸಂಧಾನಕ್ಕೆ ಕೊನೆಗೂ ದಂಪತಿ ಒಪ್ಪಿಲ್ಲ. ಡಿವೋರ್ಸ್‌ ಪಡೆದುಕೊಂಡರೂ ಜೀವನಾಂಶ ಬೇಡ ಎಂದಿದ್ದಾರೆ ನಿವೇದಿತಾ. ಡಿವೋರ್ಸ್ ಸಿಕ್ಕ ನಂತರ ನಿವೇದಿತಾ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.

Exit mobile version