ಬೆಂಗಳೂರು: ಕಿರುತೆರೆ ಬಾರ್ಬಿ ಡಾಲ್ ಖ್ಯಾತಿಯ ನಿವೇದಿತಾ ಗೌಡ (Niveditha Gowda) ಆಗಾಗ ತಮ್ಮ ವಿಡಿಯೊ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ ನಿವೇದಿತಾ ನೆಟ್ಟಿಗರಿಗೆ ನಾಲ್ಕು ಪ್ರಶ್ನೆ ಕೇಳುತ್ತಾರೆ. ಜನರು ಯಾವ ಉತ್ತರ ಕೊಡುತ್ತಾರೆ ಅದರ ಪ್ರಕಾರ ಒಂದು ದಿನ ನಡೆದುಕೊಳ್ಳುವುದಾಗಿ ಹೇಳುತ್ತಾರೆ. ವಿಡಿಯೊಗೆ ಕೆಲವರು ಮೆಚುಗೆ ವ್ಯಕ್ತಪಡಿಸಿದ್ದು, ಇನ್ನೂ ಕೆಲವರು ಗರಂ ಆಗಿದ್ದಾರೆ.
ನನ್ನ ದಿನ ಹೇಗಿರಬೇಕು ಎಂದು ಇನ್‌ಸ್ಟಾಗ್ರಾಂನಲ್ಲಿ ಜನರಿಗೆ ಪ್ರಶ್ನೆ ಕೇಳಿದ್ದಾರೆ ನಿವೇದಿತಾ. ಅದರಂತೆ ಹೀಲ್ಸ್ ಧರಿಸಿ ಪ್ರಯಾಣ ಮಾಡಿದ್ದಾರೆ. ಕಾಫಿ ಜತೆ ಬಿರಿಯಾನಿ ತಿಂದಿದ್ದಾರೆ. ಮೆಟ್ರೋ ಟ್ರೈನ್ ಬರುತ್ತಿದ್ದಂತೆ ಫಿಲ್ಮಿ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಇದಾದ ಮೇಲೆ ಇಬ್ಬರಿಗೆ ಪ್ರ್ಯಾಂಕ್ ಮಾಡಿದ್ದಾರೆ. ಪ್ರ್ಯಾಂಕ್ ವೇಳೆ 500 ರೂಪಾಯಿ ಬೀಳಿಸಿ ಯಾರ ಹಣ ಎಂದು ಕೇಳಲು ಮುಂದಾಗುತ್ತಾರೆ. ಒಂದು ಜೋಡಿ ನಮ್ಮದಲ್ಲ ಎಂದು ಸತ್ಯ ಒಪ್ಪಿಕೊಂಡು ನಿವೇದಿತಾ ಜತೆ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಎಳೆನೀರು ಮಾರಾಟ ಮಾಡುವ ಮಹಿಳೆ ನನ್ನ ಹಣ ಎಂದು ಹೇಳುತ್ತಾರೆ. ಆಗ ನಿವೇದಿತಾ ಜಗಳ ಮಾಡುತ್ತಾರೆ. ಸುಮಾರು ಹೊತ್ತು ವಾದ-ವಿವಾದ ನಡೆದ ನಂತರ ಕ್ಯಾಮೆರಾ ಇದೆ ನಿಮಗೆ ತಮಾಷೆ ಮಾಡಿದ್ದೇವೆ ಎನ್ನುತ್ತಾರೆ. ನಿವೇದಿತಾ ಅವರ ಈ ತುಂಟಾಟಕ್ಕೆ ಕೆಲವರು ಖುಷಿ ಪಟ್ಟಿದ್ದಾರೆ. ಇನ್ನು ಕೆಲವರು ಮತ್ತೊಬ್ಬರ ಭಾವನೆ ಜತೆ ಆಟ ಆಡಬೇಡಿ ಎಂತಲೂ ಹೇಳಿದ್ದಾರೆ.
ಇದನ್ನೂ ಓದಿ | Niveditha Gowda | ಸೋಲೋ ಟ್ರಿಪ್‌ನಲ್ಲಿ ನಿವೇದಿತಾ ಗೌಡ: ಫೋಟೊ ವೈರಲ್!
ಕೆಲವು ದಿನಗಳ ಹಿಂದೆ ನಟಿ ನಿವೇದಿತಾ ಗೌಡ ಅವರು ಇಂಡೋನೇಷ್ಯಾದ ಬಾಲಿಯಲ್ಲಿ ಸೋಲೋ ಟ್ರಿಪ್‌ನಲ್ಲಿ ಸಖತ್ ಎಂಜಾಯ್ ಮಾಡುತ್ತಿರುವ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಪೋಸ್ಟ್‌ಗಳಿಗೆ ಕೆಟ್ಟದಾಗಿ ಕಮೆಂಟ್ ಮಾಡಿದವರಿಗೂ ಖಡಕ್ ಪ್ರತಿಕ್ರಿಯೆ ನೀಡಿದ್ದರು ನಿವೇದಿತಾ.
ಇದನ್ನೂ ಓದಿ | Niveditha Gowda | ʻʻಗಂಡನ ದುಡ್ಡಿನಲ್ಲಿ ಟ್ರಿಪ್ ಹೋದರೆ ನಿಮಗೇನು ಸಮಸ್ಯೆ?ʼʼ ನಿವೇದಿತಾ ಗೌಡ ಗರಂ ಆಗಿದ್ಯಾಕೆ?