ಕನ್ನಡದ ಧಾರಾವಾಹಿ ಕಾದಂಬರಿಯಿಂದ ಹಿಡಿದು ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿವರೆಗೂ ಬಹಳಷ್ಟು ಖಳನಾಯಕಿ ಪಾತ್ರಗಳನ್ನು ನಿಭಾಯಿಸಿಕೊಂಡು ಬಂದಿದ್ದಾರೆ ಅನಿಕಾ ಸಿಂಧ್ಯ. ಇಂತಹ ಪಾತ್ರಗಳು ಮಾನಸಿಕವಾಗಿ ಬಹಳಷ್ಟು ಪರಿಣಾಮ ಉಂಟು ಮಾಡಿತ್ತು ಎಂದು ಬಹಿರಂಗಪಡಿಸಿದ್ದಾರೆ.
ಧಾರಾವಾಹಿಗಳಲ್ಲಿ ನಟಿಸಿರುವ ಅನಿಕಾ ಖಳನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದೇ ಹೆಚ್ಚು.
ಪಾತ್ರಗಳು ವೈಯಕ್ತಿಕ ಜೀವನಕ್ಕೂ ಒಂದಷ್ಟು ಪರಿಣಾಮ ಬೀರಿದ್ದು ಎಷ್ಟೋ ವರ್ಷಗಳ ಕಾಲ ಮದುವೆ ಪ್ರಸ್ತಾಪಗಳೇ ಬಂದೇ ಇಲ್ಲ ಎಂದಿದ್ದಾರೆ.
ʻʻತೆರೆ ಮೇಲೆ ನೆಗೆಟಿವ್ ಶೇಡ್‌ನಲ್ಲಿ ನೋಡಿದವರು ರಿಯಲ್ ಲೈಫ್‌ನಲ್ಲಿ ಕೂಡ ನಟಿ ಹೀಗೆ ಎಂದು ಅಂದುಕೊಂಡವರು ಹೆಚ್ಚು. ಧಾರಾವಾಹಿಗಳಲ್ಲಿ ನಾನು ಮಾಡಿರುವ ಪಾತ್ರ ನೋಡಿ ಅನೇಕ ಹಿರಿಯರು ಶಾಪ ಹಾಕಿದ್ದಾರೆʼʼ ಎಂದು ನಟಿ ಹೇಳಿಕೊಂಡಿದ್ದಾರೆ.
ಈಗಲೂ ನೆಗೆಟಿವ್ ಶೇಡ್‌ನಲ್ಲಿ ನಟಿ ಅಭಿನಯಿಸುತ್ತಿದ್ದು, ಕೆಲವರು ಪಾತ್ರಗಳಿಗೂ, ರಿಯಲ್ ಲೈಫ್‌ಗೂ ಸಂಬಂಧ ಇಲ್ಲ ಎಂದು ಅರ್ಥ ಮಾಡಿಕೊಂಡಿದ್ದಾರೆ. ಸ್ವಲ್ಪ ನಿರಾಳವಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.