Site icon Vistara News

Heart Attack: ಸ್ಪಂದನಾ ಮೃತಪಟ್ಟ ಬೆನ್ನಲ್ಲೇ ಕಿರುತೆರೆ ಯುವ ನಟ ಹೃದಯಾಘಾತದಿಂದ ನಿಧನ

Pawan serial actor

ಮಂಡ್ಯ; ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ (Heart Attack) ಮೃತಪಟ್ಟ ನೋವಿನ ಬೆನ್ನಲ್ಲೇ ಕಿರುತೆರೆ ನಟ ಪವನ್ (Pawan serial actor) ಹಾರ್ಟ್‌ ಅಟ್ಯಾಕ್‌ನಿಂದ ನಿಧನರಾಗಿದ್ದಾರೆ. ಈ ಕಿರುತೆರೆ ಕಲಾವಿದ‌‌ ಮುಂಬೈನಲ್ಲಿ ತಂದೆ ನಾಗರಾಜು, ತಾಯಿ ಸರಸ್ವತಿಯೊಂದಿಗೆ ನೆಲೆಸಿದ್ದರು. ಪವನ್, ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿ‌ನ ಹರಿಹರಪುರ (haripura pawan) ಗ್ರಾಮದವರು. ಹಿಂದಿ, ತಮಿಳು ಕಿರುತೆರೆಯಲ್ಲಿ ಕಲಾವಿದರಾಗಿ ಪವನ್ ಹೊರಹೊಮ್ಮುತ್ತಿದ್ದರು. ಅವರಿಗೆ ಕೇವಲ 25 ವರ್ಷ (Young Age) ವಯಸ್ಸಾಗಿತ್ತು.

ಆಗಸ್ಟ್ 18ರಂದು ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯ ಹರಿಹರಪುರ ಗ್ರಾಮದಲ್ಲಿ ಪವನ್ ಅಂತ್ಯಕ್ರಿಯೆ ನಡೆಯಲಿದೆ. ಅವರ ಕುಟುಂಬದವರು ಹಾಗೂ ಆಪ್ತರು ಅಂತ್ಯಕ್ರಿಯೆಯಲ್ಲಿ ಭಾಗಿ ಆಗುತ್ತಿದ್ದಾರೆ. ಹಿಂದಿ, ತಮಿಳು ಕಿರುತೆರೆಯಲ್ಲಿ (tollywood Industry) ಪವನ್ ನಟಿಸುತ್ತಿದ್ದರು. ಬೆಳ್ಳಿ ಪರದೆಮೇಲೆ ಮಿಂಚಬೇಕು ಎಂದು ಕನಸು ಕಂಡಿದ್ದರು.

ಇದನ್ನೂ ಓದಿ: Heart Attack : ವಿಮಾನ ಟೇಕ್​ಆಫ್​ಗೆ ಮೊದಲು ಪೈಲೆಟ್​ ಹೃದಯಾಘಾತದಿಂದ ಸಾವು

ಹುಟ್ಟೂರು ಎನ್ನುವ ಕಾರಣಕ್ಕೆ ಪವನ್ ಮೃತದೇಹವನ್ನು ಮಂಡ್ಯಕ್ಕೆ ತರಲಾಗಿದೆ. ಮಧ್ಯಾಹ್ನ 12 ಗಂಟೆ ವೇಳೆಗೆ ಅಂತ್ಯಕ್ರಿಯೆ ನೆರವೇರಲಿದೆ.

Exit mobile version