ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪುಣ್ಯವತಿ ಧಾರಾವಾಹಿ (Punyavathi Serial) ಪ್ರಸಾರವಾಗುತ್ತಿದೆ. ಕಿರುತೆರೆಯಲ್ಲಿ 2013 ರಿಂದ 2020ರವರೆಗೆ ಪ್ರಸಾರವಾಗುವ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದಿದ್ದ ಧಾರಾವಾಹಿ ಎಂದರೆ ಅದುವೇ ಲಕ್ಷ್ಮೀ ಬಾರಮ್ಮ (Lakshmi Baramma). ಈ ಸೀರಿಯಲ್ ಮೂಲಕ ಜನರಿಗೆ ಹತ್ತಿರವಾಗಿದ್ದ ನಟಿಯರು ಎಂದರೆ ಚಿನ್ನು ಮತ್ತು ಗೊಂಬೆ. ಗೊಂಬೆ ಪಾತ್ರದಲ್ಲಿ ನೇಹಾ ರಾಮಕೃಷ್ಣ (Kavitha Gowda and Neha Ramkrishna), ಮೊದಲಿಗೆ ಚಿನ್ನು ಪಾತ್ರದಲ್ಲಿ ಕವಿತಾ ಗೌಡ ನಟಿಸಿದ್ದರು. ಇದೀಗ ಮತ್ತೆ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ. ‘ಪುಣ್ಯವತಿ’ (Punyavathi Serial) ಸೀರಿಯಲ್‌ನಲ್ಲಿ ಅತಿಥಿ ಪಾತ್ರ (punyavathi serial colours kannada) ಮಾಡುವ ಮೂಲಕ ಹೀರೊ ನಂದನ್‌ಗೆ ಸಾಥ್ ನೀಡ್ತಿದ್ದಾರೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ ಬಳಿಕ ಇದೇ ಮೊದಲ ಬಾರಿಗೆ ನೇಹಾ ಮತ್ತು ಕವಿತಾ ಜತೆಯಾಗಿ ನಟಿಸಿದ್ದಾರೆ. ʻʻ ನಾವು ಮತ್ತೆ ಜತೆಯಾಗಿದ್ದೇವೆ. ನಮ್ಮ ಲಕ್ಷ್ಮೀ ಬಾರಮ್ಮದ ಮೊದಲ ನಿರ್ದೇಶಕ ಮತ್ತು ಚಿನ್ನು ಜತೆ ಮತ್ತೆ ಬಂದಿದ್ದೇನೆ. ನಮ್ಮ ಮೂವರ ಕಾಂಬಿನೆಷನ್ ನೀವು ಇಷ್ಟಪಡುತ್ತೀರಿ ಎಂದು ನಂಬಿದ್ದೇನೆ. ಪುಣ್ಯವತಿಯಲ್ಲಿ ಲಕ್ಷ್ಮೀ ಬಾರಮ್ಮ ಚಿನ್ನು ಮತ್ತು ನಿಮ್ಮ ಪ್ರೀತಿಯ ಗೊಂಬೆʼʼ ಎಂದು ನೇಹಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Kaveri Kannada Medium: `ಸ್ವಾಭಿಮಾನʼ ಸಿನಿಮಾ ಖ್ಯಾತಿಯ ನಟಿ ಮಹಾಲಕ್ಷ್ಮೀ ಕನ್ನಡ ಕಿರುತೆರೆಗೆ ಎಂಟ್ರಿ!
ಟ್ರೈಯಾಂಗಲ್ ಲವ್ ಸ್ಟೋರಿಗೆ ಚಿನ್ನು ಗೊಂಬೆ ಸಾಥ್
ಲಕ್ಷ್ಮಿ ಬಾರಮ್ಮ (Lakshmi Baramma) ಸೀರಿಯಲ್‌ನಲ್ಲಿ ಚಂದನ್ ಮಡದಿಯರಾಗಿದ್ದರು ಚಿನ್ನು ಗೊಂಬೆ. ಈಗ ಅಂತಹದ್ದೇ ಟ್ರೈಯಾಂಗಲ್ ಲವ್ ಸ್ಟೋರಿ ಪುಣ್ಯವತಿ ಕಥೆ ನಡೆಯುತ್ತಿದೆ. ನಂದನ್-ಪದ್ಮಿನಿ ಮತ್ತು ಪೂರ್ವಿ ಕಥೆ ನೋಡುಗರಿಗೆ ಥ್ರಿಲ್ ಕೊಡುತ್ತಿದೆ. ಪುಣ್ಯವತಿ ಕಥೆ ಕೂಡ ಅಕ್ಕ-ತಂಗಿಯಾಗಿದ್ದಾಗಿದ್ದು, ಅಕ್ಕ ಪದ್ಮಿನಿ ಮದುವೆ ಆಗಬೇಕಾದ ಹುಡಗನನ್ನ ಪರಿಸ್ಥಿತಿಗೆ ಕಟ್ಟು ಬಿದ್ದು ತಂಗಿ ಪೂರ್ವಿ ಮದುವೆ ಆಗಿದ್ದಾಳೆ. ಮೂವರ ಜೀವನ ಅತಂತ್ರ ಸ್ಥಿತಿಗೆ ತಲುಪುತ್ತೆ. ಎಲ್ಲ ಸರಿ ಮಾಡುವ ಪ್ರಯತ್ನದಲ್ಲಿದ್ದ ನಾಯಕ ನಂದನ್‌ನ ಮೇಲೆ ಅಕ್ಕ-ತಂಗಿ ಇಬ್ಬರಿಗೂ ಲವ್ ಆಗಿದೆ. ನಂದನ್ ಬದುಕು ಯಾರ ಜತೆ ಎಂಬ ನಿರ್ಧಾರಕ್ಕೆ ಚಿನ್ನು ಮತ್ತು ಗೊಂಬೆ ಸಾಥ್ ನೀಡುತ್ತಿದ್ದಾರೆ.ಸದ್ಯ ಪದ್ಮಿನಿ-ಪೂರ್ವಿ ಇರುವ ಪರಿಸ್ಥಿತಿಯಲ್ಲಿ ಲಕ್ಷ್ಮೀ ಬಾರಮ್ಮ ಚಿನ್ನು-ಗೊಂಬೆ ಇದ್ದರು. ಹೀಗಾಗಿ ಪರಿಸ್ಥಿತಿಯನ್ನ ಅರಿತು ಇಬ್ಬರಿಗೂ ದಾರಿ ತೋರಿಸಲಿದ್ದಾರಂತೆ. ಈಗ ಪುಣ್ಯವತಿಯಲ್ಲಿ ತಾಳಿ ಸಂಬಂಧ ಗೆಲ್ಲುತ್ತಾ, ಪ್ರೀತಿ ಸಂಬಂಧ ಗೆಲ್ಲುತ್ತಾ ನೋಡಬೇಕಿದೆ.