ಬೆಂಗಳೂರು: ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (puttakkana makkalu Serial) ಶುರುವಾಗಿ ಎರಡು ವರ್ಷಗಳು ಸಂದಿವೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದೀಗ ಪುಟ್ಟಕ್ಕನ ದೊಡ್ಡ ಮಗಳು ಸಹನಾ ದೇವಿಪುರ ಬಿಟ್ಟು ಹೊರನಡೆದಿದ್ದಾಳೆ. ಪುಟ್ಟಕ್ಕನಿಗೆ ಮಗಳು ಸಹನಾ ಗಂಡನ ಮನೆಯಲ್ಲಿ ಹಾಯಾಗಿ ಸಂಸಾರ ಮಾಡಬೇಕು ಎಂದು ಆಸೆಯಾದರೆ, ಮುರಳಿಯ ಜತೆ ಸಂಸಾರ ಮಾಡಲು ಒಲ್ಲೆ ಎನ್ನುತ್ತಿದ್ದಾಳೆ ಸಹನಾ. ಇದೀಗ ತಾಯಿಗೆ ಎಲ್ಲಿ ತಾನು ಭಾರವಾಗುತ್ತೇನೋ ಎಂದು ಸಹನಾ ಮನೆಯಿಂದ ಆಚೆ ನಡೆದಿದ್ದಾಳೆ.
ಮುರಳಿ-ಸಹನಾ ದಾಂಪತ್ಯ ಜೀವನದಲ್ಲಿ ಒಡಕು ಮೂಡಿದೆ. ಸಹನಾಗೆ ವಿಚ್ಛೇದನ ಬೇಕು, ಮುರಳಿಗೆ ತನ್ನ ತಪ್ಪಿನ ಅರಿವಾಗಿದೆ. ಎಷ್ಟೇ ಕ್ಷಮೆ ಕೇಳಿದರೂ ಕೂಡ ಸಹನಾ ಮುರಳಿಯನ್ನು ಕ್ಷಮಿಸಿ, ಅವನ ಜತೆ ಬಾಳಲು ರೆಡಿ ಇಲ್ಲ. ತವರು ಮನೆಗೆ ಭಾರ ಆಗದೆ ಬದುಕುವ ನಿರ್ಧಾರ ಮಾಡಿರುವ ಸಹನಾ, ಈಗ ಮನೆ ಬಿಟ್ಟು ಹೋಗಿದ್ದಾಳೆ.
ಸಹನಾ ಮನಸ್ಸಲ್ಲಿ ಏನಿದೆ?
ಇತ್ತ ಪುಟ್ಟಕ್ಕ ಕೂಡ ಸಹನಾಳ ಮನಸ್ಸನ್ನು ಆರ್ಥ ಮಾಡಿಕೊಳ್ಳಲು ರೆಡಿ ಇಲ್ಲ. ಸಹನಾ ಮನಸ್ಸಲ್ಲಿ ಏನಿದೆ? ಎಂದು ಪುಟ್ಟಕ್ಕ ಅರ್ಥ ಮಾಡಿಕೊಳ್ಳುತ್ತಿಲ್ಲ. ಇತ್ತ ಸಹನಾ ಕೂಡ ಏಕಾಏಕಿ ಬ್ಯಾಗ್ ಹಿಡಿದು ಮನೆಯಿಂದ ಹೊರ ಹೋಗಲು ಸಜ್ಜಾಗುತ್ತಾಳೆ. ತಂದೆ ತಾಯಿಗೆ ನಮಸ್ಕರಿಸಿ ಅಳುತ್ತಾಳೆ. ʻʻಏನೇ ಆಗಲಿ ತವರು ಮನೆಗೆ ಭಾರವಾಗಿ ನಾನು ಬದುಕಲಾರೆ. ನಾನು ಏನಾದರೂ ಸಾಧಿಸಿ ತೋರಿಸುತ್ತೇನೆ. ದಯವಿಟ್ಟು ಕ್ಷಮಿಸು ಅವ್ವ. ಅಮ್ಮ ನೀನು ನಮ್ಮೆರನ್ನು ಭದ್ರವಾಗಿ ಸಾಕು ಬಿಟ್ಟೆ. ಈಗ ನಾನು ಏನಾದರೂ ಸಾಧನೆ ಮಾಡಿಯೇ ಬರುತ್ತೇನೆʼʼಎಂದು ಸಹನಾ ಮನಸ್ಸಿನಲ್ಲಿ ಮರಗುಳತ್ತಾಳೆ. ಪುಟ್ಟಕ್ಕನಿಗೆ ಸಹನಾ ಮನೆ ಬಿಟ್ಟು ಹೋಗುತ್ತಾಳೆ ಎನ್ನುವ ಪರಿವೇ ಇಲ್ಲದೆ ಗಾಢವಾದ ನಿದ್ದೆಗೆ ಜಾರಿರುತ್ತಾರೆ.
ಇದನ್ನೂ ಓದಿ: Viral News: ಕೊಲೆಯಾಗಿದ್ದಾರೆ ಎನ್ನಲಾದ ಸಹೋದರಿಯರು ವರ್ಷದ ಬಳಿಕ ಪತ್ತೆ; ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ ಈ ಘಟನೆ
ಇಷ್ಟೂ ದಿನವೂ ಸಹನಾ ಮನವೊಲಿಸಿ,ಮುರುಳಿ ಜತೆ ಮಗಳು ಚೆನ್ನಾಗಿ ಬದುಕಬೇಕು ಎಂದು ಪುಟ್ಟಕ್ಕ ಹರಸಾಹಸ ಪಡುತ್ತಿರುತ್ತಾಳೆ. ಆದರೆ ಆ ಪ್ರಯತ್ನ ಈಗ ವ್ಯರ್ಥವಾಗಿದೆ. ಸಹನಾ ಎಲ್ಲರೂ ಮನೆಯಲ್ಲಿ ಮಲಗಿರುವಾಗ ಬಸ್ ಸ್ಟ್ಯಾಂಡಿಗೆ ಹೋಗುತ್ತಾಳೆ. ಬಸ್‌ಗೆಂದು ಕಾಯುತ್ತಿರುವಾಗ, ತಂಗಿಯ ಗಂಡ ಅಂದರೆ ಕಂಠಿ ರಸ್ತೆಯಲ್ಲಿಯೇ ಪಾಸ್ ಆಗುತ್ತಾರೆ. ಕಂಠಿಯನ್ನು ನೋಡಿದ ಸಹನಾ ಒಂದು ಮರದ ಬದಿಗೆ ಬಂದು ಅವಿತು ಕುಳಿತುಕೊಳ್ಳುತ್ತಾಳೆ. ಮಾತ್ರವಲ್ಲ ಅದೇ ಸಮಯಕ್ಕೆ ಕಾಳಿ ಕೂಡ ಅಲ್ಲಿ ಇರುತ್ತಾನೆ. ಕಾಳಿ ಕೂಡ ನಶೆಯಲ್ಲಿ ಇದ್ದ ಕಾರಣ ಅವನೂ ಸಹನಾಳನ್ನು ಪತ್ತೆ ಹಚ್ಚಲು ಆಗುವುದಿಲ್ಲ. ಆ ಬಳಿಕ ಸಹನಾ ಹೇಗೋ ಇಬ್ಬರಿಂದ ತಪ್ಪಿಸಿಕೊಂಡು ಒಬ್ಬಳೇ ನನ್ನನ್ನು ಕ್ಷಮಿಸಿಬಿಡಿ ಎಂದು ಜೋರಾಗಿ ಅಳುತ್ತಾಳೆ.
ಸಹನಾಗೆ ಬಸ್ ಹತ್ತಿವಾಗ ಬಹಳ ಬೇಸರ ಆಗುತ್ತದೆ. ದೇವಿಪುರಕ್ಕೆ ಮತ್ತೆ ಬರುವುದಿಲ್ಲ ಎಂದು ಮನಸ್ಸಿನಲ್ಲಿ ಅಂದುಕೊಂಡು ಬಸ್ಸನ್ನು ಏರಿ, ಅಲ್ಲಿಂದ ಹೊರಟು ಹೋಗುತ್ತಾಳೆ. ಅತ್ತ ತಂಗಿ ಸ್ನೇಹಾಗೆ ತನ್ನ ಅಕ್ಕನದ್ದೇ ಚಿಂತೆ. ಆದರೀಗ ಸಹನಾ ಎಲ್ಲರನ್ನೂ ಬಿಟ್ಟು ದೂರದ ಊರಿಗೆ ಪ್ರಯಾಣ ಬೆಳೆಸಿದ್ದಾಳೆ. ಈ ಸಂಚಿಕೆ ಕಂಡು ವೀಕ್ಷಕರು ಸಹನಾ ನಿರ್ಧಾರಕ್ಕೆ ಸಾಥ್ ಕೊಟ್ಟಿದ್ದಾರೆ.
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (puttakkana makkalu Serial) ಶುರುವಾಗಿ ಎರಡು ವರ್ಷಗಳು ಸಂದಿವೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.