ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʻಪುಟ್ಟಕ್ಕನ ಮಕ್ಕಳುʼ (Puttakkana Makkalu) ಧಾರಾವಾಹಿಯಲ್ಲಿ ಸದ್ಯ ಸಹನಾ ಮೃತಪಟ್ಟಿದ್ದಾಳೆ. ಸಹನಾ ಅಂತ್ಯಕ್ರಿಯೆಯ ದೃಶ್ಯ ಪ್ರೇಕ್ಷಕರಲ್ಲಿ ಕಣ್ಣೀರು ತರಸಿವಂತೆ ಇತ್ತು.
ಮಗಳನ್ನು ಕಳೆದುಕೊಂಡ ಪುಟ್ಟಕ್ಕ ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ, ಅವರ ಅದ್ಭುತ ನಟನೆ ನೋಡಿ ವೀಕ್ಷಕರು ಕಣ್ತುಂಬಿಕೊಂಡಿದ್ದಾರೆ.
ಈ ಎಪಿಸೋಡ್ ನೋಡಿದ ಪ್ರೇಕರೊಬ್ಬರು ಹೀಗೆ ಕಮೆಂಟ್ ಮಾಡಿದ್ದಾರೆ. ʻʻದಯವಿಟ್ಟು ತಂದೆ ತಾಯಿ ಗಮನಿಸಿ. ನಿಮ್ಮ ಹೆಣ್ಣು ಮಕ್ಕಳು ಗಂಡನ ಮನೆಯಲ್ಲಿ ತೊಂದರೆ ಎಂದು ಬಂದಾಗ ಅವಳಿಗೆ ಸ್ವಲ್ಪ ಸಮಯ ಕೊಡಿ ಯೊಚನೆ ಮಾಡೋಕೆ. ಮನೆಯ ಮಾನ ಮರ್ಯಾದೆ ಹೋಗುತ್ತೆ ಅಂತ ಗಂಡನ ಮನೆಗೆ ಹೋಗು ಅಂತ ಬಲವಂತ ಮಾಡಬೇಡಿ. ಅಕ್ಕಪಕ್ಕದ ಮನೆಯವರು ಏನೋ ಹೇಳ್ತಾರೆ ಅಂತ ಮನೆ ಮಗಳಿಗೆ ಹಿಂಸೆ ನೀಡಬೇಡಿ ಪ್ಲೀಸ್ʼʼಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ʻʻಉಮಾಶ್ರೀ ಅಮ್ಮ ನಿಮ್ಮ ನಟನೆ ಬೇರೆ ಲೆವೆಲ್! ಎಷ್ಟು ನ್ಯಾಚುರಲ್ ಆಗಿ ಅಭಿನಹಿಸುತ್ತಿದ್ದೀರಾ. ನಿಮಗೆ ನನ್ನ ಕೋಟಿ ಕೋಟಿ ನಮನಗಳುʼʼಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Puttakkana Makkalu: ಸಹನಾಳ ಸಾವಿನ ಸುದ್ದಿ ಕೇಳಿ ಮುಗಿಲುಮುಟ್ಟಿತು ಪುಟ್ಟಕ್ಕನ ಆಕ್ರಂದನ
ಹಿರಿಮಗಳು ಸಹನಾಳನ್ನು ಕಳೆದುಕೊಂಡ ಪುಟ್ಟಕ್ಕನ ಆಕ್ರಂದನ ಮುಗಿಲು ಮುಟ್ಟಿದೆ. ಒಂದೇ ಒಂದು ಸಲ ʻʻಓ ಅನ್ನು ಮಗಳೆ, ನಾನೇ ಪಾಪಿ, ಆ ಮಗುನ ಅತ್ತೆ ಮನೆಗೆ ಹೋಗು ಹೋಗು ಅಂತ ಹೇಳಿ ಹೇಳಿ ಈಗ ನಾನೇ ನನ್ನ ಮಗುವನ್ನ ಬೆಂಕಿಗೆ ಹಾಕಿದೆʼʼ ಎಂದು ಎದೆ ಬಡಿದುಕೊಂಡು ಅಳುತ್ತಿದ್ದಾಳೆ ಪುಟ್ಟಕ್ಕ. ಉಮಾಶ್ರೀ ಅವರ ಈ ದೃಶ್ಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಗಂಡನ ಮನೆಬಿಟ್ಟು ಅಮ್ಮನ ಮನೆ ಸೇರಿರುವ ಸಹನಾ, ಕೊನೆಗೆ ತಾನು ಅಮ್ಮನಿಗೆ ಭಾರವಾಗಿರೋದು ಬೇಡ ಎಂದು ಬೇಸರದಲ್ಲಿ ಮನೆಯನ್ನೇ ಬಿಟ್ಟು ಹೊರಟಿರುತ್ತಾಳೆ. ರಾತ್ರೋ ರಾತ್ರಿ ಬ್ಯಾಗ್ ಹಿಡಿದು ಮನೆಯಿಂದ ಹೊರಟಿದ್ದ ಸಹನಾಳಿಗಾಗಿ ಎಲ್ಲೆಡೆಯೂ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಆಕೆ ಸಿಕ್ಕಿದ್ದು, ಶವವಾಗಿ. ಜಜ್ಜಿದ ಮುಖದ, ಗುರುತಿಸಲಾರದ ಸ್ಥಿತಿಯಲ್ಲಿ ಸಹನಾ ಶವ ಪತ್ತೆಯಾಗಿದ್ದು, ಅದರ ಪಕ್ಕ ಸಹನಾ ಐಡೆಂಟಿಟಿ ಕಾರ್ಡ್ ಕೂಡ ಲಭ್ಯವಾಗಿರುತ್ತದೆ. ಸಹನಾಳದ್ದೆ ಸಾವಾಗಿದೆ ಎಂದು ಎಲ್ಲರೂ ಒಪ್ಪಿಕೊಂಡು ಬಳಿಕ ಅಂತ್ಯಕ್ರಿಯೆ ನೆರವೇರಿಸಿದರು. ಇಂದಿನ ಪ್ರೋಮೊದಲ್ಲಿ ಸಹನಾ ಜೀವಂತವಾಗಿರುವ ಬಗ್ಗೆ ಜೀ ವಾಹಿನಿ ಪೋಸ್ಟ್ ಮಾಡಿದೆ. ಮುಂದೆ ಸಹನಾಳ ಕಥೆ ಏನು ಎಂಬುದು ಇಂದಿನ ಎಪಿಸೋಡ್‌ನಲ್ಲಿ ಪ್ರಸಾರ ಆಗಲಿದೆ.