Site icon Vistara News

Raja Rani Show: ‘ರಾಜಾ ರಾಣಿ’ ಶೋನಲ್ಲಿ ಕುಣಿದು ಕುಪ್ಪಳಿಸಿದ ‘ಕರ್ನಾಟಕ ಜೋಡಿ’; ಹುಣಸೆ ಮರ ಮುಪ್ಪಾದರೆ, ಹುಳಿ ಮುಪ್ಪಾ?

Raja Rani Show performance Karnataka Jodi in colors

ಬೆಂಗಳೂರು: ಸೋಷಿಯಲ್‌ ಮೀಡಿಯಾದಲ್ಲಿ ʻಕರ್ನಾಟಕ ಜೋಡಿʼ (Karnataka Jodi) ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟಿದೆ. ಈ ಮಧ್ಯವಯಸ್ಕ ಗೋವಿಂದರಾಜ್ ದಂಪತಿ ‘ ಯಾಮಿನಿ ಯಾಮಿನಿ’ ಹಾಡಿನ ಗುಂಗು ಹಿಡಿಸಿತ್ತು. ಈ ದಂಪತಿ ‘ಕದಂಬ’ ಚಿತ್ರದ ‘ಯಾಮಿನಿ ಯಾರಮ್ಮ ನೀನು ಯಾಮಿನಿ..’ ಸಾಂಗ್‌ಗೆ ಇವರು ಡ್ಯಾನ್ಸ್‌ ಮಾಡಿದಾಗ ಅದು ತುಂಬ ದೊಡ್ಡಮಟ್ಟದಲ್ಲಿ ವೈರಲ್ ಆಯ್ತು (Raja Rani Show). ಆನಂತರ ಇವರ ಫಾಲೋವರ್ಸ್ ಸಂಖ್ಯೆ ಕೂಡ ಜಾಸ್ತಿ ಆಗಿತ್ತು. ಇದೀಗ ಜೋಡಿ  ‘ರಾಜಾ ರಾಣಿ’ ರೀಲೋಡೆಡ್‌ ಶೋನಲ್ಲಿ ಬಂದು ಹೆಜ್ಜೆ ಹಾಕಿದೆ.

ರಾಜಾ ರಾಣಿ ಶೋಗೆ ‘ಕರ್ನಾಟಕ ಜೋಡಿ’ ಬಂದಿರುವ ಕುರಿತ ಪ್ರೋಮೋ ರಿಲೀಸ್ ಆಗಿದೆ. ಅದರಲ್ಲಿ ಇಬ್ಬರು ಕೂಡ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.  “ನಮಗೆ 51 ವಯಸ್ಸು ಆದಮೇಲೆ ನಮ್ಮ ಕೆಲಸ ಶುರುವಾಗಿದೆ. ನಾವು ಇಲ್ಲಿವರೆಗೂ ಬರ್ತಿವಿ ಎಂದು ಗೊತ್ತಿರಲಿಲ್ಲ..” ಎಂದು ಗೋವಿಂದರಾಜ್‌ ಹೇಳಿದ್ದಾರೆ. “ಈ ವಯಸ್ಸಿನಲ್ಲೂ ಇಷ್ಟೊಂದು ರೊಮ್ಯಾನ್ಸ್ ಹೇಗೆ” ಎಂದು ನಿರೂಪಕಿ ಅನುಪಮಾ ಗೌಡ ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಗೋವಿಂದರಾಜ್, “ಹುಣಸೆಮರ ಮುಪ್ಪಾದ್ರೂ, ಹುಳಿ ಮುಪ್ಪಾಗುತ್ತಾ” ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: Toyota Kirloskar Motor: ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನಿಂದ ಪರಿಸರ ಮಾಸಾಚರಣೆ

ಗೋವಿಂದರಾಜ್ ಹಾಗೂ ವೈಲಾ ದಂಪತಿ ಇದೀಗ ಕರ್ನಾಟಕ ಜೋಡಿ ಎಂದೇ ನೆಟ್ಟಿಗರಿಗೆ ಹೆಚ್ಚು ಪರಿಚಿತರಾಗಿಬಿಟ್ಟಿದ್ದಾರೆ. ಸೂಪರ್ ಹಿಟ್ ಸಿನಿಮಾ ಗೀತೆಗಳಿಗೆ ಡ್ಯಾನ್ಸ್ ಮಾಡುತ್ತಾ, ರೀಲ್ಸ್ ಮಾಡುತ್ತಾ ಈ ಜೋಡಿ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದೆ. ಹಾಡಿಗೆ 50ರ ಹರೆಯದ ಜೋಡಿಯ ಸ್ಟೆಪ್ಸ್, ಹಾವಭಾವ ನೋಡಿದವರು ಫಿದಾ ಆಗಿದ್ದರು. ಮುಖ್ಯವಾಗಿ ಕ್ಯಾಮರಾ ವರ್ಕ್ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿತ್ತು. ಪ್ರೀತಿಸಿ ಮದುವೆ ಆಗಿರುವ ಗೋವಿಂದರಾಜ್- ವೈಲಾ ಜೋಡಿ ಬಹಳ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದಾರೆ. 26 ವರ್ಷಗಳ ಹಿಂದೆ ವೈಲಾ ಅವರನ್ನು ಮೊದಲ ಬಾರಿ ನೋಡಿದಾಗಲೇ ಗೋವಿಂದರಾಜ್ ಪ್ರೀತಿಲಿ ಬಿದ್ದಿದ್ದರಂತೆ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಇಬ್ಬರು ಮದುವೆ ಆಗಿ ಸದ್ಯ ಬೆಂಗಳೂರಿನ ಇಂದಿರಾನಗರದಲ್ಲಿ ವಾಸವಾಗಿದ್ದಾರೆ.ಗೋವಿಂದರಾಜ್ ಅವರಿಗೆ 50 ವಯಸ್ಸು ಇನ್ನು ವೈಲಾ ಅವರಿಗರ 48 ವರ್ಷ ಎಂದು ಹೇಳಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ರಾಜಾರಾಣಿ’ ರಿಯಾಲಿಟಿ ಶೋ ಈಗಾಗಲೇ ಎರಡು ಸೀಸನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.ರಾಜರಾಣಿ ಸೀಸನ್ 1’ರಲ್ಲಿ ನಟಿ ನೇಹಾ ಗೌಡ ಹಾಗೂ ಅವರ ಪತಿ ಚಂದನ್ ವಿನ್ನರ್ಸ್ ಆಗಿದ್ದರು. ಅಂತೆಯೇ ಸೀಸನ್ 2 ನಲ್ಲಿ ನಟಿ ಕಾವ್ಯಾ ಮಹದೇವ್ ಹಾಗೂ ಕುಮಾರ್ ದಂಪತಿ ಗೆದ್ದಿದ್ದರು. ಇದರ ಬೆನ್ನಲ್ಲೇ ಇದೀಗ ‘ರಾಜ ರಾಣಿ ರೀಲೋಡೆಡ್’ ಎಂಬ ಶೀರ್ಷಿಕೆ ಅಡಿ ಸೀಸನ್‌ 3 ಬರುತ್ತಿದೆ.ವಿಶಿಷ್ಟ ಜೋಡಿಗಳ ಸಮಾಗಮದ ‘ರಾಜ ರಾಣಿ’ (Raja Rani) ಶೋನಲ್ಲಿ ಅದಿತಿ ಪ್ರಭುದೇವ ಜಡ್ಜ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಸೃಜನ್ ಲೋಕೇಶ್, ಹಿರಿಯ ನಟಿ ತಾರಾ ಜೊತೆ ಅದಿತಿ ಕೂಡ ಜಡ್ಜ್ ಆಗಿ ಸಾಥ್ ನೀಡುತ್ತಿದ್ದಾರೆ.

ಈಗಾಗಲೇ ಈ ಶೋನ ಹಲವು ಪ್ರೋಮೋಗಳು ರಿಲೀಸ್‌ ಆಗಿದ್ದು, ಮೆಚ್ಚುಗೆ ಪಡೆದುಕೊಂಡಿದೆ. ಈಗಾಗಲೇ ದಿವ್ಯಶ್ರೀ ಜಿಜಿ ದಂಪತಿ, ರಂಜಿತಾ ಸೀರುಂಡೆ ರಘು, ಬಿಗ್‌ ಬಾಸ್‌ ಖ್ಯಾತಿಯ ವಿನಯ್‌ ಗೌಡ ಮತ್ತು ಅಕ್ಷತಾ ಸೇರಿ ಇನ್ನೂ ಹಲವು ಜೋಡಿಗಳು ಈ ಸಲದ ಶೋನಲ್ಲಿರಲಿದ್ದಾರೆ.

Exit mobile version