Site icon Vistara News

Ramayan on Doordarshan: ಡಿಡಿ ಚಾನೆಲ್​ನಲ್ಲಿ ಮಾಡಿ ರಾಮನ ದರ್ಶನ!

Ramanand Sagar Ramayan to soon on Doordarshan National

ಬೆಂಗಳೂರು: 1987ರ ಜೂನ್ 25ರಿಂದ 1988ರ ಜುಲೈ 31ರವರೆಗೆ ಪ್ರತೀ ರವಿವಾರ ಮುಂಜಾನೆ ಪ್ರಸಾರವಾಗುತ್ತಿದ್ದ ರಮಾನಂದ ಸಾಗರ್ (Ramananda Sagar) ಅವರ ಮೆಗಾ ಧಾರಾವಾಹಿ‌ ʻರಾಮಾಯಣʼ (Mega serial) ಭಾರತದಲ್ಲಿ ಹೊಸ ಸಂಚಲನ ಹುಟ್ಟು ಹಾಕಿತ್ತು. ಇದೀಗ ಮತ್ತೆ ‘ರಾಮಾಯಣ’ ಶೀಘ್ರದಲ್ಲೇ (Ramayan on Doordarshan) ಮರು-ಪ್ರಸಾರವನ್ನು ಪ್ರಾರಂಭಿಸಲಿದೆ. ʻರಾಮಾಯಣʼವನ್ನು ಡಿಡಿ ನ್ಯಾಷನಲ್‌ ಫ.5ರಿಂದ ಮರು ಪ್ರಸಾರ ಮಾಡುತ್ತಿದೆ.

ಭಗವಾನ್ ರಾಮನಾಗಿ ಅರುಣ್ ಗೋವಿಲ್, ಸೀತೆಯಾಗಿ ದೀಪಿಕಾ ಚಿಖ್ಲಿಯಾ ಮತ್ತು ಲಕ್ಷ್ಮಣನಾಗಿ ಸುನಿಲ್ ಲಹ್ರಿ ಅಭಿನಯಿಸಿದ್ದರು. 1987-88ರ ಅವಧಿಯಲ್ಲಿ ಪ್ರತೀ ಆದಿತ್ಯವಾರ ಮುಂಜಾನೆ ಈ ಧಾರಾವಾಹಿಯನ್ನು ದೂರದರ್ಶನದ ಮೂಲಕ ಪ್ರಸಾರ ಆದಾಗ ಅದು ಜಾಗತಿಕ ದಾಖಲೆಯನ್ನು ಮಾಡಿತ್ತು. ಇದೀಗ ಡಿಡಿ ನ್ಯಾಷನಲ್‌ ಫ.5ರಿಂದ ಪ್ರತಿದಿನ ಸಂಜೆ 6ಗಂಟೆ ಹಾಗೂ ಮರುದಿನ ಮಧ್ಯಾಹ್ನ 12ಗಂಟೆಗೆ ಪ್ರಸಾರ ಮಾಡುವುದಾಗಿ ಹೇಳಿಕೊಂಡಿದೆ.

ಕೊರೊನಾ ಲಾಕ್‌ಡೌನ್‌ ವೇಳೆಯೂ ʻರಾಮಾಯಣʼ ಧಾರಾವಾಹಿ ಪ್ರಸಾರ ಕಂಡಿತ್ತು. ಲಕ್ಷಾಂತರ ಜನರನ್ನು ವೀಕ್ಷಿಸಿದ್ದರು. ʻಮತ್ತೆ ರಾಮಾಯಣ ಕಾರ್ಯಕ್ರಮವನ್ನು ಪ್ರಸಾರ ಮಾಡಿ ಎಂದು ಸಾರ್ವಜನಿಕರು ಬೇಡಿಕೆ ಇಟ್ಟಿದ್ದಾರೆ. ಪ್ರೇಕ್ಷಕರಿಗೆ ಆಕರ್ಷಕ ಮನರಂಜನೆಯನ್ನು ಒದಗಿಸುವ ದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆʼ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿಕೆ ನೀಡಿದೆ.

ಸಂಜಯ್ ಜೋಗ್ ಅವರು ಭರತ, ಅಂಜಲಿ ವ್ಯಾಸ್ ಅವರು ಊರ್ಮಿಳಾ, ಅರವಿಂದ ತ್ರಿವೇದಿ ಅವರು ರಾವಣ, ಲಲಿತಾ ಪವಾರ್ ಅವರು ಮಂಥರೆ ಪಾತ್ರದಲ್ಲಿ ನಟಿಸಿದ್ದರು. ಆಗಿನ ಕಾಲಕ್ಕೆ ಒಂದು ಸಂಚಿಕೆಗೆ (ಅವಧಿ 45 ನಿಮಿಷ) ಒಂಬತ್ತು ಲಕ್ಷ ಖರ್ಚು ಮಾಡಿದ್ದ ಈ ಧಾರಾವಾಹಿ ಅದ್ಧೂರಿಯ ಸೆಟ್ ಮತ್ತು ಮೇಕಿಂಗ್ ಮೂಲಕ ಜನಪ್ರಿಯತೆ ಪಡೆಯಿತು. ಪ್ರತೀ ಕಂತನ್ನು ಅಂದಾಜು 77 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದರು ಎಂದು ವರದಿಯಾಗಿದೆ. ಐದು ಖಂಡಗಳ 17 ದೇಶಗಳು ಈ ಧಾರಾವಾಹಿಯನ್ನು ಪ್ರಸಾರ ಮಾಡಿದವು.

ಇದನ್ನೂ ಓದಿ: Raja Marga Column : ನಿಮಗೂ ನೆನಪಿದೆಯಾ? ರಾಮಾಯಣ ಧಾರಾವಾಹಿಯ ರೋಮಾಂಚನ!

ಈ ಧಾರಾವಾಹಿಯ ಜನಪ್ರಿಯತೆಯಿಂದ ಪ್ರಭಾವಿತವಾಗಿ ರಮಾನಂದ್ ಸಾಗರ್ ಅವರು ಅದರ ಎರಡನೇ ಭಾಗವಾದ ರಾಮಾಯಣದ ಉತ್ತರ ಕಾಂಡದ ಲವ ಕುಶರ ಕತೆಯನ್ನು ಧಾರಾವಾಹಿ ಮಾಡಿದರು.‌ ಅದೂ ಪ್ರಸಾರವಾಗಿ ಜನಪ್ರಿಯವಾಯಿತು.

Exit mobile version