Site icon Vistara News

Rashami Desai: ಡಿವೋರ್ಸ್‌ ಬಳಿಕ ಮನೆ ಇಲ್ಲದೆ, ರೋಡ್‌ ಸೈಡ್‌ ಊಟ ತಿಂದು ಕಾರಿನಲ್ಲಿ ಮಲಗಿದ್ದರಂತೆ ʻಮುದ್ದು ಬಂಗಾರʼ ಖ್ಯಾತ ನಟಿ!

Rashami Desai Homeless Rashami Desai lived in an Audi

ಬೆಂಗಳೂರು: ಹಿಂದಿ ಕಿರುತೆರೆ ಜನಪ್ರಿಯ ನಟಿ, ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ ʻಮುದ್ದು ಬಂಗಾರʼ ಖ್ಯಾತಿಯ ನಟಿ ರಶ್ಮಿ ದೇಸಾಯಿ (Rashami Desai) ಬಿಗ್ ಬಾಸ್ ಹಿಂದಿ ಸೀಸನ್‌ 13ರಲ್ಲಿ ಭಾಗವಹಿಸಿದ್ದರು. ಕಿರುತೆರೆಯ ಸೂಪರ್ ಹಿಟ್ ನಟಿಯಾಗಿದ್ದರೂ ಕೂಡ ರಶ್ಮಿ ದೇಸಾಯಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವು ಕಂಡಿದ್ದಾರೆ. ಡಿವೋರ್ಸ್‌ ಮತ್ತು ಬಾಯ್‌ಫ್ರೆಂಡ್‌ ಜತೆ ಬ್ರೇಕಪ್‌, ಎರಡರ ಬಗ್ಗೆ ತಮ್ಮ ಮನಸ್ಸಿನ ನೋವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ನಟಿ ನಂದೀಶ್ ಸಂಧು ಅವರ ಜತೆ ವಿಚ್ಛೇದನದ ನಂತರ, ಭಾರಿ ಆರ್ಥಿಕ ತೊಂದರೆಗಳನ್ನು ಎದುರಿಸಿದರು. ಮದ್ದು ಬಂಗಾರ ಧಾರಾವಾಹಿಯಲ್ಲಿ ವೀರ್ ಪಾತ್ರದಲ್ಲಿ ನಟಿಸಿರುವ ನಂದೀಶ್​ ಸಿಂಗ್​ ಸಂಧು ಅವರನ್ನೇ ನಿಜ ಜೀವನದಲ್ಲೂ ಮದುವೆಯಾಗಿದ್ದರು. ಪ್ರೀತಿಸಿ ವಿವಾಹವಾಗಿದ್ದ ಈ ಜೋಡಿಯ ವೈವಾಹಿಕ ಜೀವನ ತುಂಬಾ ಸಮಯ ಉಳಿಯಲಿಲ್ಲ.
3.5 ಕೋಟಿ ರೂ. ಸಾಲ ಸೇರಿದಂತೆ, ಮನೆಯಿಲ್ಲದೇ ಅವರ ಕಾರಿನಲ್ಲಿ ಮಲಗಬೇಕಾದ ಪರಿಸ್ಥಿತಿ ನಿರ್ಮಾಣ ಆಗಿತ್ತು. ಮದುವೆ ಸಮಯದಲ್ಲಿ ಕಿರುತೆರೆ ನಟಿಯಾಗಿದ್ದರು. ಮದುವೆ ನಂತರ ಕೊಂಚ ಫೇಮ್ ಕಡಿಮೆ ಆಗಿತ್ತು. ಮೂರು ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿಬಿಟ್ಟರು. ಅದಾದ ಮೇಲೆ ಬಾಯ್‌ಫ್ರೆಂಡ್‌ ಉದ್ಯಮಿ ಅರ್ಹಾನ್ ಖಾನ್‌ ಜೊತೆಗಿದ್ದರು…ಅದು ಕೂಡ ವರ್ಕೌಟ್ ಆಗುತ್ತಿಲ್ಲ ಎಂದು ಬ್ರೇಕಪ್ ಮಾಡಿಕೊಂಡರು.

ನಟಿ ಮಾತನಾಡಿ ʻʻನಾನು ಮನೆ ಖರೀದಿಸಿದೆ. ಸುಮಾರು 3.25-3.5 ಕೋಟಿ ರೂ, ಸಾಲ ಇತ್ತು. ಮೊದ ಮೊದಲು ಎಲ್ಲವೂ ಚೆನ್ನಾಗಿತ್ತು. ಬಳಿಕ ನಾಲ್ಕು ದಿನ ನಾನು ರಸ್ತೆ ಬದಿಯಲ್ಲಿ ಮಲಗುವ ಪರಿಸ್ಥಿತಿ ಎದುರಾಗಿತ್ತು. ನನ್ನ ಬಳಿ ಇದ್ದ ಆಡಿ 6 ಕಾರಿನಲ್ಲಿ ಮಲಗುವ ಪರಿಸ್ಥಿತಿ ಎದುರಾಗಿತ್ತು ಅಲ್ಲದೆ ಊಟ ಹಣವಿಲ್ಲದ ಕಾರಣ ರಸ್ತೆಯಲ್ಲಿ ಸಿಗುವ 20 ರೂಪಾಯಿ ಊಟವನ್ನು ತಿನ್ನುತ್ತಿದ್ದೆ. ನನ್ನ ಕುಟುಂಬದಿಂದ ಸಂಪೂರ್ಣವಾಗಿ ದೂರವಿದ್ದೆ. ಆಟೋ ಡ್ರೈವರ್‌ಗಳು ತಿನ್ನುತ್ತಿದ್ದ ಜಾಗದಲ್ಲಿ ತಿನ್ನುತ್ತಿದ್ದೆ. ನನ್ನ ಬಟ್ಟೆಗಳಿಗೆ ಜಾಗವಿಲ್ಲದ ಕಾರಣ ನನ್ನ ಮ್ಯಾನೇಜರ್‌ ಮನೆಯಲ್ಲಿ ಇಟ್ಟಿದೆ. ನಾನು ನಿದ್ದೆ ಮಾಡುತ್ತಿರಲಿಲ್ಲ.”ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Wayanad Tragedy: ವಯನಾಡ್ ಭೂಕುಸಿತ; ದಕ್ಷಿಣ ಭಾರತದ ಸಿನಿಮಾ ನಟರಿಂದ ಸಂತ್ರಸ್ತರಿಗೆ ನೆರವಿನ‌ ಮಹಾಪೂರ

ʻʻವಿಚ್ಛೇದನದ ಸಮಯದಲ್ಲಿ 3 ರಿಂದ 3.5 ಕೋಟಿ ರೂಪಾಯಿ ಸಾಲವಿತ್ತು ಅದನ್ನು ತೀರಿಸಲು ಸಹಾಯ ಮಾಡಿದ್ದು ದಿಲ್ ಸೇ ದಿಲ್ ತಕ್ ಎನ್ನುವ ಧಾರಾವಾಹಿ. ಅಲ್ಲಿಂದ ನನ್ನ ಜರ್ನಿ ಅದ್ಭುತವಾಗಿ ಇತ್ತು. ಬಿಗ್ ಬಾಸ್‌ವರೆಗೂ ಬಂದು ನಿಂತಿದೆʼʼ ಎಂದು ರಶ್ಮಿ ದೇಸಾಯಿ ಮಾತನಾಡಿದ್ದಾರೆ.

ರಶ್ಮಿ ದೇಸಾಯಿ ಅವರು ಅಸ್ಸಾಮಿಯಲ್ಲಿ ಅತಿಥಿ ಪಾತ್ರದ ಮೂಲಕ ನಟನೆಗೆ ಬಂದರು. ಕನ್ಯಾದಾನ (2002).ಧಾರಾವಾಹಿ ಮೂಲಕ ಖಯಾತಿ ಪಡೆದರು. ದಿಲ್ ಸೆ ದಿಲ್ ತಕ್, ಜರಾ ನಚ್ಕೆ ದಿಖಾ ಮುಂತಾದ ರಿಯಾಲಿಟಿ ಶೋಗಳಲ್ಲೂ ದೇಸಾಯಿ ಭಾಗವಹಿಸಿದ್ದರು

Exit mobile version