ಬೆಂಗಳೂರು: ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ರಶ್ಮಿ ಪ್ರಭಾಕರ್ (Rashmi Prabhakar) ಇದೀಗ ಗಂಡನಿಗೋಸ್ಕರ ಮೂಗು ಚುಚ್ಚಿಸಿಕೊಂಡಿದ್ದಾರೆ. ಮದುವೆಯಾದ ಬಳಿಕ ಯಾವುದೇ ಧಾರಾವಾಹಿಯಲ್ಲಿ ರಶ್ಮಿ ಕಾಣಿಸಿಕೊಂಡಿಲ್ಲ. ರಶ್ಮಿ ಅವರು ಮೂಗುತಿ ಹಾಕಿಕೊಳ್ಳಬೇಕೆಂದು ಅವರ ಪತಿ ಆಸೆಯಂತೆ ಹೀಗಾಗಿ ಅವರು ಮೂಗು ಚುಚ್ಚಿಸಿಕೊಂಡಿದ್ದಾರೆ. ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೊ ಶೇರ್ ಮಾಡಿ ʻಕೊನೆಗೂ ಪತಿಗೋಸ್ಕರʼ ಎಂದು ಬರೆದುಕೊಂಡಿದ್ದಾರೆ. ಮೂಗು ಚುಚ್ಚಿಸಿಕೊಂಡ ಬಳಿಕ ಕಣ್ಣೀರು ಹಾಕುತ್ತಿದ್ದ ರಶ್ಮಿಯನ್ನು ಪತಿ ನಿಖಿಲ್ ಭಾರ್ಗವ್ ತಬ್ಬಿಕೊಂಡು ಸಮಾಧಾನ ಮಾಡಿದರು. ಈ ವಿಡಿಯೊ ಈಗ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ಕಮೆಂಟ್ ಮಾಡುತ್ತಿದ್ದು, ʻʻತುಂಬಾ ಸುಂದರವಾಗಿ ಕಾಣಿಸುತ್ತೀರಿʼʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: Kannada Movie Actresses: ಕಿರುತೆರೆಯಿಂದ ಬಂದ ಕನ್ನಡ ಸಿನಿಮಾ ನಟಿಯರು
ರಶ್ಮಿ ಪ್ರಭಾಕರ್ ಪೋಸ್ಟ್ ಮಾಡಿರುವ ವಿಡಿಯೊ
ಇದನ್ನೂ ಓದಿ: Actor Chandan | ಹೊಸ ಹೋಟೆಲ್ ಓಪನಿಂಗ್ ಮಾಡಿದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ಕವಿತಾ-ಚಂದನ್!
ರಶ್ಮಿ ಪ್ರಭಾಕರ್ ಮದುವೆಗೆ ನೇಹಾ ಗೌಡ, ಕಾವ್ಯಾ ಶಾಸ್ತ್ರಿ ಮುಂತಾದವರು ಆಗಮಿಸಿದ್ದರು. ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಮದುವೆ ನಡೆದಿತ್ತು.