Site icon Vistara News

Casting Couch | ಅಡ್ಜೆಸ್ಟ್‌ ಆಗಬೇಕು ಅಂದಿದ್ದ ನಿರ್ಮಾಪಕ: ರತನ್‌ ರಜಪೂತ್‌ ಕಾಸ್ಟಿಂಗ್‌ ಕೌಚ್‌ ಬಗ್ಗೆ ಹೇಳಿದ್ದೇನು?

Casting Couch

ಬೆಂಗಳೂರು: ಕಾಸ್ಟಿಂಗ್‌ ಕೌಚ್‌ (ಅವಕಾಶ ಕೊಡುವುದಾಗಿ ದುರ್ಬಳಕೆ ಮಾಡಿಕೊಳ್ಳುವುದು) ಸಿನಿರಂಗದಲ್ಲಿ ಸರ್ವೇ ಸಾಮಾನ್ಯ. ಅವಕಾಶ ಬೇಕು ಎಂದರೆ ನಿರ್ದೇಶಕ, ನಿರ್ಮಾಪಕರು ಹೇಳಿದಂತೆ ಅಡ್ಜೆಸ್ಟ್‌ ಆಗಬೇಕು. ಈ ವಿಚಾರಕ್ಕೆ ನಟಿಯರು ಮೀಟೂ ಅಭಿಯಾನ ಮಾಡಿದರು. ಅದೆಷ್ಟೋ ಕನಸು ಹೊತ್ತ ನಟಿಯರು ಕಾಸ್ಟಿಂಗ್‌ ಕೌಚ್‌ಗೆ (Casting Couch) ಸಿಲುಕಿದ್ದಾರೆ. ಇದೀಗ ಈ ತರಹದ್ದೇ ಪ್ರಕರಣ ಸಂಬಂಧ ತಮ್ಮ ಅನುಭವವನ್ನು ಖ್ಯಾತ ಹಿಂದಿ ಕಿರುತೆರೆ ನಟಿ ರತನ್‌ ರಜಪೂತ್‌ ಹಂಚಿಕೊಂಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆ್ಯಕ್ಟಿವ್‌ ಆಗಿರುವ ರತನ್‌ ತಮ್ಮ ʻವಿ ಲಾಗ್‌ʼನಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ʻʻಹಳ್ಳಿಗಳಿಂದ, ಸಣ್ಣ ಊರಿನಿಂದ ಅನೇಕ ಕನಸುಗಳನ್ನು ಹೊತ್ತು ಮುಂಬೈಗೆ ಬರುತ್ತಾರೆ. ಆದರೆ ಅವರು ಕಾಸ್ಟಿಂಗ್‌ ಕೌಚ್‌ ಎದುರಿಸಬೇಕಾಗುತ್ತದೆ. ಇಂಡಸ್ಟ್ರಿಯಲ್ಲಿ ಬ್ಯಾಗ್ರೌಂಡ್‌ ಇಲ್ಲದೇ ಬರುವ ನಟಿಯರು ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆʼʼ ಎಂದು ರತನ್‌ ಹೇಳಿದ್ದಾರೆ.

ಇದನ್ನೂ ಓದಿ | MeToo Case | ರೋಡ್‌ ರೋಮಿಯೊ ಸಿನಿಮಾ ಖ್ಯಾತಿಯ ಆಶಿತಾಗೂ ಮೀಟು ಕಾಟ!

Casting Couch

ʻʻನಾನು ಮುಂಬೈ ಬಂದ ಪ್ರಾರಂಭದಲ್ಲಿ ನನಗೆ ಹೆಚ್ಚು ತಿಳಿದಿರಲಿಲ್ಲ. ಕೆಲಸ ಇಲ್ಲದೇ ಇದ್ದಾಗ ಒಂದು ನಿರ್ಮಾಣ ಸಂಸ್ಥೆಗ ಸೇರಿದೆ. ಅಲ್ಲಿ 60ರಿಂದ 65 ವರ್ಷದ ನಿರ್ಮಾಪಕ ಕುಳಿತಿದ್ದ. ಆಗ ನನಗೆ ನಿಮ್ಮನ್ನು ನೀವು ತುಂಬಾ ಬದಲಾಯಿಸಿಕೊಳ್ಳಬೇಕು ಎಂದು ಹೇಳಿದ. ನಿಮ್ಮ ಕೂದಲು, ಸ್ಕಿನ್‌ ಬದಲಾಗಬೇಕು. ನಿಮಗೆ ಡ್ರೆಸ್‌ ಸೆನ್ಸ್‌ ಇಲ್ಲ. ನನ್ನನ್ನು ಗಾಡ್‌ ಫಾದರ್‌ ಮಾಡಿಕೊ, ನನ್ನ ಜತೆ ಕ್ಲೋಸ್‌ ಇರು ಎಂದು ಹೇಳಿದʼʼ ಎಂದರು.

ಈ ವಿಚಾರವಾಗಿ ನಾನು ʻʻನೀವು ನನ್ನ ತಂದೆ ವಯಸ್ಸಿನವರು. ನಾನು ನಿಮ್ಮನ್ನು ತುಂಬಾ ಗೌರವಿಸುತ್ತೇನೆʼʼ ಎಂದಾಗ ಆತ ಕೋಪದಿಂದ ʻʻನಿಮಗೆ ಬಿಟ್ಟಿ ಮಾರ್ಗದರ್ಶನ ಮಾಡಲು ಯಾರೂ ಇಲ್ಲ. ನೀವು ನಟಿಯಾಗಬೇಕಾದರೆ ಸ್ಮಾರ್ಟ್‌ ಇರಬೇಕುʼʼ ಎಂದು ಹೇಳಿದ್ದಾಗಿ ವಿ ಲಾಗ್‌ನಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Tanushree Dutta | ಮೀಟೂ ನಂತರ ಕೊಲೆ ಯತ್ನದ ಬಗ್ಗೆ ಭಯಾನಕ ಸತ್ಯ ಬಾಯ್ಬಿಟ್ಟ ನಟಿ ತನುಶ್ರೀ ದತ್ತಾ!

Exit mobile version