Site icon Vistara News

Reels Reshma: ‘ಹಾಯ್ ಫ್ರೆಂಡ್ಸ್’ ಎನ್ನುತ್ತ ರೀಲ್ಸ್‌ ಸ್ಟಾರ್‌ ರೇಷ್ಮಾ ರಿಯಾಲಿಟಿ ಶೋಗೆ ಎಂಟ್ರಿ! ಡ್ರೋನ್‌ ಪ್ರತಾಪ್‌ ಎಲ್ಲಿ?

Reels Reshma entry to Gicchi Giligili 3
‘ಹಾಯ್ ಫ್ರೆಂಡ್ಸ್’ ಎನ್ನುತ್ತ ಸದಾ ರೀಲ್ಸ್ ಹಂಚಿಕೊಳ್ಳುತ್ತಿರುವ ರೇಷ್ಮಾ (Reels Reshma) ಇದೀಗ ಗಿಚ್ಚಿ ಗಿಲಿಗಿಲಿ-3 (Gicchi Giligili 3) ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಬಂದಿದ್ದಾರೆ.
‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ಡ್ರೋನ್ ಪ್ರತಾಪ್ ಕಾಣಿಸ್ತಿಲ್ಲ. ಈ ಬೆನ್ನಲ್ಲೇ ರೇಷ್ಮಾ ಆಗಮನವಾಗಿದೆ.

ಇನ್ಸ್ಟಾಗ್ರಾಂ ಖಾತೆಯಲ್ಲಿ ರೇಷ್ಮಾ 1 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಸಿನಿಮಾ ಹಾಡುಗಳಿಗೆ ರೀಲ್ಸ್ ಮೂಲಕ ಮತ್ತು ಇಂಗ್ಲಿಷ್ ಪದಗಳನ್ನು ತಪ್ಪಾಗಿ ಹೇಳುವ ಮೂಲಕ ಸಖತ್ ಟ್ರೋಲ್ ಆಗಿದ್ದರು.

ಇದನ್ನೂ ಓದಿ: Vijay Deverakonda: ಕೆಟ್ಟ ಬೈಗುಳಕ್ಕೆ ಸೆನ್ಸಾರ್ ಕತ್ತರಿ; ವಿಜಯ್‌-ಮೃಣಾಲ್‌ ಸಿನಿಮಾಗೆ ‘ಯು/ಎ’ ಸರ್ಟಿಫಿಕೇಟ್‌!

ರೇಷ್ಮಾ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ‘ಗಿಚ್ಚಿ ಗಿಲಿಗಿಲಿ’ ಸೆಟ್ ಫೋಟೊ, ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ‘ತುಕಾಲಿ ಸ್ಟಾರ್’ ಸಂತು ಪತ್ನಿ ಮಾನಸಾ ಜತೆಗೆ ಅವರು ರೀಲ್ಸ್ ಮಾಡಿದ್ದಾರೆ.

ರೇಷ್ಮಾ ಅವರು ಹಲವು ಸಿನಿಮಾಗಳ ಹಾಡಿಗೂ ರೀಲ್ಸ್‌ ಮಾಡಿದ್ದಾರೆ. ಇನ್ನು ಅವರ ರೀಲ್ಸ್‌ನಲ್ಲಿ ರೇಷ್ಮಾ ಪತಿ ಕೂಡ ಆಗಾಗ ಬಂದು ಹೋಗುತ್ತಿರುತ್ತಾರೆ.

Exit mobile version