Site icon Vistara News

Sagar Biligowda | ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ʻಸತ್ಯʼ ಧಾರಾವಾಹಿ ಖ್ಯಾತಿಯ ಅಮುಲ್ ಬೇಬಿ ಕಾರ್ತಿಕ್!

Sagar Biligowda (marriage)

ಬೆಂಗಳೂರು : ಕಿರುತೆರೆಯ ʻಸತ್ಯʼ ಧಾರಾವಾಹಿ ಮೂಲಕ ಅಮುಲ್‌ ಬೇಬಿ ಎಂತಲೇ ಪ್ರಖ್ಯಾತಿ ಪಡೆದ ನಟ ಸಾಗರ್‌ ಬಿಳಿಗೌಡ (Sagar Biligowda ) ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್‌ ಪಾತ್ರಧಾರಿ ಆಗಿರುವ ನಟ ಸಾಗರ್‌ ಅವರನ್ನು ಮದುವೆಯಾಗುತ್ತಿರುವ ಹುಡುಗಿ ಸಿರಿ ರಾಜು. ಮಾಡೆಲ್‌ ಆಗಿರುವ ಇವರು ಉದ್ಯಮಿ ಕೂಡ ಹೌದು.

ವಿಜಯ್ ರಾಘವೇಂದ್ರ ಜತೆಗೆ ಸಿರಿ ರಾಜು ಅಭಿನಯಿಸುತ್ತಿದ್ದಾರೆ. ಸಾಗರ್‌ ಹಾಗೂ ಸಿರಿರಾಜು ಪ್ರೀತಿಸುತ್ತಿದ್ದರು. ಬೆಂಗಳೂರಿನಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ ಎಂದು ಜೋಡಿ ಹೇಳಿಕೊಂಡಿದೆ. ಸಾಗರ್‌ ಮತ್ತು ಸಿರಿರಾಜು ಅವರು ತಮ್ಮ ಕ್ಯೂಟ್‌ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಫೋಟೊಗೆ ಸಾಗರ್‌ ಅವರ ಅಭಿಮಾನಿಗಳು ಮತ್ತು ತಾರೆಯರು ಕಮೆಂಟ್‌ ಮೂಲಕ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ | Actor Taylor Lautner | ವೈವಾಹಿಕ ಜೀವನಕ್ಕೆ ಕಾಲಿಟ್ಟ ʻಟ್ವಿಲೈಟ್‌ ಸಾಗಾʼ ಖ್ಯಾತಿಯ ನಟ ಟೇಲರ್ ಲೌಟ್ನರ್!

Sagar Biligowda

ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಾಗರ್ ಬಿಳಿಗೌಡ ನಟನೆಯಲ್ಲಿ ಆಸಕ್ತಿ ಹೊಂದಿದ್ದರು. ‘ಕಿನ್ನರಿ’ ಧಾರಾವಾಹಿಯಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದ್ದರು. ‘ಮನಸಾರೆ’ ಸೀರಿಯಲ್‌ನಲ್ಲಿ ಯುವರಾಜ್ ಎಂಬ ಪಾತ್ರದಲ್ಲಿ ಮಿಂಚಿದ್ದರು. ಸಿರಿರಾಜು ಕೂಡ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | Kantara Movie | ಕಟೀಲು ದೇಗುಲಕ್ಕೆ ಸಪ್ತಮಿ ಗೌಡ ಭೇಟಿ; ತುಳು ಸಿನಿಮಾದಲ್ಲಿ ನಟಿಸಲೂ ರೆಡಿ ಎಂದ ನಟಿ

Exit mobile version