Site icon Vistara News

Sahana Shetty: ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ನನ್ನರಸಿ ರಾಧೆ’ ಧಾರಾವಾಹಿ ಖ್ಯಾತಿಯ ಸಹನಾ ಶೆಟ್ಟಿ

Sahana Shetty Marriage Vibes

‘ನನ್ನರಸಿ ರಾಧೆ’ ಧಾರಾವಾಹಿ ಖ್ಯಾತಿಯ ಸಹನಾ ಶೆಟ್ಟಿ (Sahana Shetty) ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ.

ನನ್ನರಸಿ ರಾಧೆ ಧಾರಾವಾಹಿಯಲ್ಲಿ  ಅಗಸ್ತ್ಯನ ತಂಗಿ ಊರ್ವಿಯಾಗಿ ಅಭಿನಯಿಸಿದ್ದ ಸಹನಾ ಶೆಟ್ಟಿ, ಗುರುಹಿರಿಯರು ನಿಶ್ಚಿಯಿಸಿದ ವರ ಪ್ರತಾಪ್ ಶೆಟ್ಟಿ ಜತೆ ಸಪ್ತಪದಿ ತುಳಿದಿದ್ದಾರೆ.

ಸಹನಾ ಶೆಟ್ಟಿ ಮದುವೆಯಲ್ಲಿ, ‘ಗೀತಾ’ ಧಾರಾವಾಹಿಯ ಜೋಡಿ ಭವ್ಯಾ ಗೌಡ- ಧನುಷ್ ಗೌಡ, ನಟಿ ಅಮೂಲ್ಯ, ಬಿಗ್ ಬಾಸ್ ಖ್ಯಾತಿಯ ಜಯಶ್ರೀ ಆರಾಧ್ಯ ಸೇರಿದಂತೆ ಹಲವರು ಪಾಲ್ಗೊಂಡು, ನವದಂಪತಿಗೆ ಶುಭಕೋರಿದ್ದಾರೆ.

ಸಹನಾ ಶೆಟ್ಟಿ ಅವರ ನಿಶ್ಚಿತಾರ್ಥ ಇದೇ ವರ್ಷ ಫೆಬ್ರವರಿ 14, ಪ್ರೇಮಿಗಳ ದಿನದಂದು ನಡೆದಿತ್ತು.

ಸ್ವಲ್ಪ ದಿನಗಳ ಹಿಂದಷ್ಟೇ ಸಹನಾ ಶೆಟ್ಟಿ ಮತ್ತು ಪ್ರತಾಪ್ ಶೆಟ್ಟಿ ಪ್ರಿ ವೆಡ್ಡಿಂಗ್‌ ಫೋಟೊಶೂಟ್‌ ಮೂಲಕ ಗಮನಸೆಳೆದಿದ್ದರು.

Exit mobile version