Site icon Vistara News

Amruthadhare Serial: ಸಾರಾ ಅಣ್ಣಯ್ಯ ಹೊಸ ಧಾರಾವಾಹಿಯಲ್ಲಿ ಪ್ರತ್ಯಕ್ಷ; ʻನಮ್ಮ ಲಚ್ಚಿ’ಗೆ ಬೈ ಬೈ ಹೇಳಿದ್ಯಾಕೆ?

Sara annaiah In Amruthadhare Serial

ಬೆಂಗಳೂರು: ಕನ್ನಡತಿ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದರುವ ಸಾರಾ ಅಣ್ಣಯ್ಯ (Sara Annaiah) ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ನಮ್ಮ ಲಚ್ಚಿ ಧಾರಾವಾಹಿಯಲ್ಲಿ ರಿಯಾಳ ತಾಯಿ ದೀಪಿಕಾರ ಪಾತ್ರವನ್ನು ನಿಭಾಯಿಸುತ್ತಿದ್ದ ಸಾರಾ ಅಣ್ಣಯ್ಯ ಸೀರಿಯಲ್‌ನಿಂದ ಹಠಾತ್‌ ಆಗಿ ಹೊರಗಡೆ ಬಂದಿದ್ದರು. ಆ ಜಾಗಕ್ಕೆ ನಟಿ ಐಶ್ವರ್ಯಾ ಶಿಂಧೋಗಿ ಎಂಟ್ರಿ ಕೊಟ್ಟರು. ಇದಾದ ಬೆನ್ನಲ್ಲೇ ಸಾರಾ ಅಣ್ಣಯ್ಯಗೆ ನಮ್ಮ ಲಚ್ಚಿ ಧಾರಾವಾಹಿ ಜತೆ ವೈಮನಸ್ಸು ಇತ್ತು. ಆ ಕಾರಣಗಳಿಂದ ಹೊರನಡೆದರು ಎಂಬ ಗಾಸಿಪ್‌ಗಳು ವೈರಲ್‌ ಆಗಿತ್ತು. ಇದೀಗ ಮತ್ತೆ ಸಾರಾ ಹೊಸ ಧಾರಾವಾಹಿಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ‘ನಮ್ಮ ಲಚ್ಚಿ’ಯಿಂದ ಹೊರ ಬಂದ ಕೆಲವೇ ದಿನಗಳಲ್ಲೇ ಜೀ ಕನ್ನಡದ ಹೊಸ ಧಾರಾವಾಹಿ ‘ಅಮೃತಧಾರೆ’ಯಲ್ಲಿ (Amruthadhare Serial) ಸಾರಾ ಕಾಣಿಸಿಕೊಂಡಿದ್ದಾರೆ .

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ ‘ಅಮೃತಧಾರೆ’ಯಲ್ಲಿ ಮಹಿಮಾ ಪಾತ್ರದಲ್ಲಿ ಸಾರಾ ಕಾಣಿಸಿಕೊಳ್ಳಲಿದ್ದಾ. ನಟಿ ಸಾರಾ ಅಣ್ಣಯ್ಯ ಹಠಮಾರಿ ಹೆಣ್ಣು. ಮಹಿಮಾ ‘ಅಮೃತಧಾರೆ’ ಧಾರಾವಾಹಿಯಲ್ಲಿ ನಾಯಕ ಗೌತಮ ದಿವಾನ್ ಅವರ ಮುದ್ದಿನ ತಂಗಿ ಮಹಿಮಾ ಪಾತ್ರದಲ್ಲಿ ಸಾರಾ ನಟಿಸಲಿದ್ದಾರೆ.

ಫ್ಯಾಷನ್ ಡಿಸೈನಿಂಗ್ ಲೋಕದ ಕ್ವೀನ್ ಆಗಿರುವ ಮಹಿಮಾಗೆ ಬಯಸಿದ್ದೆಲ್ಲಾ ತನಗೆ ಸಿಗಬೇಕು ಎಂಬ ಹುಚ್ಚು ಹಠ. ಮಹಿಮಾ ಮನಸ್ಸಿನಲ್ಲಿ ಈಗಾಗಲೇ ಪ್ರೀತಿಯೊಂದು ಮೂಡಿದ್ದು ಅವಳ ಹಠದಿಂದ ಆ ಪ್ರೀತಿಯನ್ನು ಗೆಲ್ಲುವುದಕ್ಕೆ ಆಗುತ್ತಾ ಎಂದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.

ಇದನ್ನೂ ಓದಿ: Amruthadhare Serial : ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಸಮಯದಲ್ಲಿ‘ಅಮೃತಧಾರೆ’; ಬೇರೆ ಧಾರಾವಾಹಿಗಳ ಸಮಯವೇನು?

ಅಮೃತಧಾರೆ ಧಾರಾವಾಹಿಯಲ್ಲಿ ಛಾಯಾ ಸಿಂಗ್‌ ಜತೆ ನಟ ರಾಜೇಶ್‌ ಕಾಣಿಸಿಕೊಂಡಿದ್ದಾರೆ. ಅಮೃತಧಾರೆ ಧಾರಾವಾಹಿ ʻಬಢೇ ಅಚ್ಚೇ ಲಗತೇ ಹೈʼ(Bade Acche Lagte Hain) ಹಿಂದಿ ಧಾರಾವಾಹಿಯ ರಿಮೇಕ್‌ ಆಗಿದೆ. ನಟ ರಾಜೇಶ್ ಅವರು ಗೌತಮ್ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Exit mobile version