ಬೆಂಗಳೂರು: ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19ರ (SaReGaMaPa19) ಫಿನಾಲೆ ಏಪ್ರಿಲ್ 15 ಹಾಗೂ 16ರಂದು ಪ್ರಸಾರವಾಗಿದೆ. ಈ ಸೀಸನ್‌ನಲ್ಲಿ ಪ್ರಗತಿ ಬಡಿಗೇರ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಶಿವಾನಿ ಮೊದಲ ರನ್ನರ್ ಅಪ್ ಆದರೆ, ಮಂಗಳೂರಿನ ಪ್ರತಿಭೆ ತನುಶ್ರೀ ಎರಡನೇ ರನ್ನರ್ ಅಪ್ ಆಗಿದ್ದಾರೆ. ಸೀಸನ್ ಶುರುವಾದ ಹೊಸದರಲ್ಲಿ ಸಾಕಷ್ಡು ಮಂದಿ ಹಾಡುಗಾರರಿದ್ದರು. ಶಿವಾನಿ, ತನುಶ್ರೀ, ಪ್ರಗತಿ ಮಾತ್ರ ಫಿನಾಲೆಗೆ ಬಂದು ತಲುಪಿದ್ದರು. ಕೊಪ್ಪಳದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಗೆ ಜನರೆಲ್ಲರೂ ಸಾಕ್ಷಿಯಾಗಿದ್ದರು.
ಬಹುಮಾನವೇನು?
ವಿಜೇತರಾದ ಪ್ರಗತಿ ಬಡಿಗೇರ್ ಅವರಿಗೆ ನೆಲಮಂಗಲ ಪ್ರಾಜೆಕ್ಟ್ನಲ್ಲಿ 30-40 ಅಡಿಯ ಸೈಟ್ ಸಿಕ್ಕಿದೆ. 21 ಲಕ್ಷ ರೂ. ಇದರ ಮೌಲ್ಯ. ಇದರ ಜತೆ 4 ಲಕ್ಷ ರೂಪಾಯಿ ನಗದು ದೊರೆತಿದೆ. ಮೊದಲ ರನ್ನರ್ಅಪ್ ಶಿವಾನಿಗೆ 20 ಲಕ್ಷ ರೂ. ಕ್ಯಾಶ್ ಪ್ರೈಸ್ ಸಿಕ್ಕಿದೆ. ಎರಡನೇ ರನ್ನರ್ ಅಪ್ ತನುಶ್ರೀಗೆ ಐದು ಲಕ್ಷ ರೂ. ಎಲೆಕ್ಟ್ರಿಕ್ ವಾಹನ ಹಾಗೂ ಐದು ಲಕ್ಷ ರೂಪಾಯಿ ನಗದು ದೊರೆತಿದೆ. ಶಿವಶಂಕರಿ ಹಾಡನ್ನು ತನುಶ್ರೀ ಹಾಡಿ ಎಲ್ಲರನ್ನೂ ರಂಜಿಸಿದರೆ, ಮಹಾಪ್ರಾಣ ದೀಪಂ ಹಾಡು ಹಾಡಿ ಶಿವಾನಿ ಭಕ್ತಿ ಹೆಚ್ಚಿಸಿದರು. ಪ್ರಗತಿ ಬಡಿಗೇರ್ ಜಯಗೌರಿ ಜಗದೀಶ್ವರಿ ಹಾಡು ಹಾಡಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಶಿವಾನಿ ಅವರು ಗೆಲ್ಲಬೇಕಿತ್ತು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು, ‘ಶಿವಾನಿ ನಮ್ಮ ವಿನ್ನರ್’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ; Lakkundi Festival: ಫೆ.10ರಿಂದ ಲಕ್ಕುಂಡಿ ಉತ್ಸವ; ಸಿಎಂ ಬೊಮ್ಮಾಯಿ ಚಾಲನೆ, ಕುನಾಲ ಗಾಂಜಾವಾಲ, ಅನನ್ಯಾ ಭಟ್ ರಸಮಂಜರಿ
ಹೇಗಿತ್ತು ತರಬೇತಿ?
ಸ್ಪರ್ಧಿಗಳಿಗೆ ಹಿರಿಯ ಹಾಡುಗಾರರನ್ನು ಮೆಂಟರ್ ಆಗಿ ನೇಮಕ ಮಾಡಿದ್ದರು. ಸ್ಪರ್ಧಿಗಳನ್ನು ಆಯಾ ವಾರಕ್ಕೆ ತಕ್ಕಂತೆ ರೆಡಿ ಮಾಡಬೇಕಿತ್ತು. ಸಂಗೀತದ ತರಬೇತಿ ನೀಡಬೇಕಿತ್ತು. ಮೆಂಟರ್ಸ್ ಪರಿಶ್ರಮವೂ ಕೂಡ ಇಂದಿನ ಫೈನಲ್ ತಲುಪುವುದಕ್ಕೆ ಕಾರಣವಾಗಿದೆ ಎಂದು ವಿಜೇತೆ ಪ್ರಗತಿ ಬಡಿಗೇರ್ ಅಭಿಪ್ರಾಯ ಹಂಚಿಕೊಂಡರು.
ವೇದಿಕೆ ಮೇಲೆ ಅನುಶ್ರೀ ಅವರು ಆ್ಯಂಕರಿಂಗ್ ಮಾಡಿದರು. ಹಂಸಲೇಖ. ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಮೊದಲಾದವರು ಜಡ್ಜ್ ಸ್ಥಾನದಲ್ಲಿದ್ದರು.