Site icon Vistara News

Sagar Biligowda: ತಂದೆಯಾಗ್ತಿದ್ದಾರೆ ‘ಸತ್ಯ’ ಧಾರಾವಾಹಿ ನಟ ಸಾಗರ್ ಬಿಳಿಗೌಡ!

Sathya Serial Actor Sagar Biligowda Expecting Their First Child

ಕಿರುತೆರೆಯ ʻಸತ್ಯʼ ಧಾರಾವಾಹಿ ಮೂಲಕ ಅಮುಲ್‌ ಬೇಬಿ ಎಂತಲೇ ಪ್ರಖ್ಯಾತಿ ಪಡೆದ ನಟ ಸಾಗರ್‌ ಬಿಳಿಗೌಡ (Sagar Biligowda ) ಅವರು  ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಸಾಗರ್ ದಂಪತಿ ಸ್ಪೆಷಲ್ ಫೋಟೊಶೂಟ್ ಹಂಚಿಕೊಳ್ಳುವ ಮೂಲಕ ಸಿಹಿಸುದ್ದಿ ನೀಡಿದ್ದಾರೆ.

ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಸಾಗರ್‌ ದಂಪತಿಗೆ ಆಪ್ತರು, ಅಭಿಮಾನಿಗಳು ಶುಭಕೋರುತ್ತಿದ್ದಾರೆ.

ಕಳೆದ ವರ್ಷ ಜ.26ರಂದು ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಸಾಗರ್- ಸಿರಿ ರಾಜು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು.

ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಾಗರ್ ಬಿಳಿಗೌಡ ನಟನೆಯಲ್ಲಿ ಆಸಕ್ತಿ ಹೊಂದಿದ್ದರು. ‘ಕಿನ್ನರಿ’ ಧಾರಾವಾಹಿಯಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದ್ದರು. ‘ಮನಸಾರೆ’ ಸೀರಿಯಲ್‌ನಲ್ಲಿ ಯುವರಾಜ್ ಎಂಬ ಪಾತ್ರದಲ್ಲಿ ಮಿಂಚಿದ್ದರು. ಸಿರಿರಾಜು ಕೂಡ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

Exit mobile version