Site icon Vistara News

Sagar Biligowda: ವೈವಾಹಿಕ ಜೀವನಕ್ಕೆ ಕಾಲಿಟ್ಟ ʻಸತ್ಯʼ ಧಾರಾವಾಹಿಯ ಅಮುಲ್ ಬೇಬಿ ಕಾರ್ತಿಕ್

sathya serial Sagar Biligowda marriage

ಬೆಂಗಳೂರು: ಕಿರುತೆರೆಯ ʻಸತ್ಯʼ ಧಾರಾವಾಹಿ ಮೂಲಕ ಅಮುಲ್‌ ಬೇಬಿ ಎಂತಲೇ ಪ್ರಖ್ಯಾತಿ ಪಡೆದ ನಟ ಸಾಗರ್‌ ಬಿಳಿಗೌಡ (Sagar Biligowda) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಗರ್ ಬಿಳಿಗೌಡ ಮತ್ತು ಸಿರಿ  ಜನವರಿ 26ರಂದು ಹಸೆಮಣೆ ಏರಿದ್ದಾರೆ. ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್‌ ಪಾತ್ರಧಾರಿ ಆಗಿರುವ ನಟ ಸಾಗರ್‌ ಮಾಡೆಲ್‌ ಆಗಿರುವ ಸಿರಿ ಅವರನ್ನು ವರಿಸಿದ್ದಾರೆ.

ಕಳೆದ ತಿಂಗಳು ಜೋಡಿ ಎಂಗೇಜ್‌ಮೆಂಟ್‌ ಮಾಡಿಕೊಂಡಿತ್ತು. ಸಾಗರ್‌ ಮತ್ತು ಸಿರಿರಾಜು ಅವರು ತಮ್ಮ ಕ್ಯೂಟ್‌ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದರು. ಖಾಸಗಿ ವಾಹಿನಿಯ ಇವೆಂಟ್‌ನಲ್ಲಿ ಸಾಗರ್- ಸಿರಿ ಪರಿಚಯವಾಯ್ತು ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Sagar Biligowda | ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ʻಸತ್ಯʼ ಧಾರಾವಾಹಿ ಖ್ಯಾತಿಯ ಅಮುಲ್ ಬೇಬಿ ಕಾರ್ತಿಕ್!

ಇದನ್ನೂ ಓದಿ: Shrirasthu Shubhamasthu Serial: ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿಯ ಮಾಧವ್‌ ಕಿರುತೆರೆಗೆ ಹೊಸಬರಲ್ಲ!

ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಾಗರ್ ಬಿಳಿಗೌಡ ನಟನೆಯಲ್ಲಿ ಆಸಕ್ತಿ ಹೊಂದಿದ್ದರು. ‘ಕಿನ್ನರಿ’ ಧಾರಾವಾಹಿಯಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದ್ದರು. ‘ಮನಸಾರೆ’ ಸೀರಿಯಲ್‌ನಲ್ಲಿ ಯುವರಾಜ್ ಎಂಬ ಪಾತ್ರದಲ್ಲಿ ಮಿಂಚಿದ್ದರು. ಸಿರಿರಾಜು ಕೂಡ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೋಡಿಗೆ ಸೆಲೆಬ್ರಿಟಿಗಳು, ಅವರ ಅಭಿಮಾನಿಗಳು ಶುಭಹಾರೈಸಿದ್ದಾರೆ.

Exit mobile version