ಬೆಂಗಳೂರು: ಜೀ ವಾಹಿನಿಯ `ಸೀತಾ ರಾಮ’ ಧಾರಾವಾಹಿ (Seetha Raama Serial) ಪ್ರೋಮೊ ಈಗಾಗಲೇ ಪ್ರಸಾರ ಕಂಡಿದೆ. ಇದೀಗ ಈ ಹಾಡಿಗೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಈ ಹಾಡಿಗೆ ಅದ್ಭುತವಾದ ಸಾಲುಗಳನ್ನು ಬರೆದು ಜನರ ಮನಸ್ಸನ್ನು ಕದ್ದಿದವರು ಬೇರೆ ಯಾರು ಅಲ್ಲ ʻಕಾಂತಾರʼ ಸಿನಿಮಾದ ಸಿಂಗಾರ ಸಿರಿಯೇ ಹಾಡು ಬರೆದ ಪ್ರಮೋದ್ ಮರವಂತೆ.
ಸೀತಾ ರಾಮ ಧಾರಾವಾಹಿ ಹಾಡು ಎಲ್ಲರ ಮನ ಗೆಲ್ಲುತ್ತಿದೆ. ಸೀತಾ ರಾಮ ಧಾರಾವಾಹಿ ಪ್ರಸಾರ ಆಗುವುದು ತಡವಾಗಿದೆ. ಈ ಬಗ್ಗೆ ಕ್ರಿಯೇಟಿವ್ ಪ್ರೋಮೊ ಕೂಡ ಹಂಚಿಕೊಂಡಿತ್ತು ಧಾರಾವಾಹಿ ತಂಡ. ಜುಲೈ 17ರಂದು ಈ ಧಾರಾವಾಹಿ ಪ್ರಸಾರ ಆಗಲಿದೆ.ಸೀತಾ ರಾಮ’ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಹಾಗೂ ಗಗನ್ ಚಿನ್ನಪ್ಪ ಮುಖ್ಯ ಭೂಮಿಕೆ ನಿರ್ವಹಿಸುತ್ತಿದ್ದಾರೆ. ರೀತು ಸಿಂಗ್ ಹೆಸರಿನ ಬಾಲಕಿ ವೈಷ್ಣವಿ ಗೌಡ ಮಗಳಾಗಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾಳೆ.
ಗಾಯಕ ಶಶಾಂಕ್ ಶೇಷಗಿರಿ ಸಂಯೋಜನೆಯ ಈ ಹಾಡನ್ನು ಕಾಂತಾರ ಚಿತ್ರದ ಸಿಂಗಾರಿ ಸಿರಿಯೇ ಖ್ಯಾತಿಯ ಲಿರಿಕ್ ರೈಟರ್ ಪ್ರಮೋದ್ ಮರವಂತೆ ಬರೆದಿದ್ದಾರೆ. ಪ್ರಮೋದ್ ಬರೆದ ಈ ಸಾಲುಗಳನ್ನು ಅಷ್ಟೇ ಅದ್ಭುತವಾಗಿಯೇ ಗಾಯಕ ಕಲ್ಯಾಣ್ ಮಂಜುನಾಥ್ ಹಾಡಿದ್ದಾರೆ.
ನೆಟ್ಟಿಗರೊಬ್ಬರು ʻʻಸೀತಾರಾಮ ಟೈಟಲ್ ಸಾಂಗ್ ತುಂಬಾ ಚೆನ್ನಾಗಿದೆ. ಏನೋ ಒಂಥರಾ ಸೆಳೆತ ಇದೆ ಈ ಹಾಡಿನಲ್ಲಿ. ಕನ್ನಡವೇ ಒಂದು ಅದ್ಭುತ. ನಿರ್ದೇಶನ ಛಾಯಾಗ್ರಹಣ ಸಾಹಿತ್ಯ ಸಂಗೀತ ಗಾಯನ ಸೂಪರ್. ಅಂತು ಇಂತು ಸೀತಾರಾಮ ಬರೋ ಸಮಯ ಬಂದೆ ಬಿಡ್ತು. ಗಗನ್ ಸರ್ ವೈಷು ಸೀತಾರಾಮ ತಂಡಕ್ಕೆ ಶುಭವಾಗಲಿʼʼಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Seetha Raama Serial: ಸೀತಾ ರಾಮ ಧಾರಾವಾಹಿ ರಿಲೀಸ್ ಡೇಟ್ ಯಾವಾಗ? ಗೊತ್ತಾಗೋವರೆಗೂ ನಟಿಸಲ್ಲ ಎಂದ ರೀತು ಸಿಂಗ್!
ʻಅಗ್ನಿಸಾಕ್ಷಿʼ ಧಾರಾವಾಹಿ ಖ್ಯಾತಿಯ ವೈಷ್ಣವಿ ಗೌಡ (Vaishnavi Gowda) ಮತ್ತೆ ಟಿವಿ ಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ʻʻಸೀತಾರಾಮʼʼ ಧಾರಾವಾಹಿ ಮೂಲಕ ವೈಷ್ಣವಿಗೌಡ ಮತ್ತೆ ಕಿರುತೆರೆಗೆ ಬರುತ್ತಿದ್ದಾರೆ. ಇದರಿಂದ ಅವರ ಅಭಿಮಾನಿಗಳು ಸಂತಸಗೊಂಡಿದ್ದಾರೆ .