Site icon Vistara News

Shambhavi Serial Udaya: 100 ಎಪಿಸೋಡ್​ ಪೂರೈಸಿದ ಸಂಭ್ರಮದಲ್ಲಿ ’ಶಾಂಭವಿ’!

Shambhavi Serial Udaya compleated 100 episode

ಬೆಂಗಳೂರು: ʻಸಿಂಪಲ್ಲಾಗ್ ಒಂದ್ ಲವ್ ಸ್ಟೋರಿʼ ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಹೊಸ ಅನುಭವ ಎನ್ನುವಂತೆ ’ಶಾಂಭವಿ’ ಧಾರವಾಹಿಯನ್ನು (Shambhavi Serial Udaya) ʻಸುನಿ ಸಿನಿಮಾಸ್ʼ ಸಂಸ್ಥೆಯ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ರವಿತೇಜ ನಿರ್ದೇಶನದಲ್ಲಿ ಧಾರವಾಹಿಯು ಯಶಸ್ವಿಯಾಗಿ 100 ಕಂತುಗಳನ್ನು ಪೂರೈಸಿ ಮುನ್ನುಗುತ್ತಿದೆ. ಹೀಗಾಗಿ ಹೆಸರಘಟ್ಟದಲ್ಲಿರುವ ’ಕಾವೇರಿ ವನಿತಾ ಸೇವಾ ಶ್ರಮ’ಕ್ಕೆ ಭೇಟಿ ನೀಡಿ ಅನಾಥ ಮಕ್ಕಳೊಂದಿಗೆ ಕೇಕ್ ಕತ್ತರಿಸಿಕೊಂಡು ಸಂಭ್ರಮವನ್ನು ಆಚರಿಸಿಕೊಂಡಿದೆ.

ಈ ಸಂದರ್ಭದಲ್ಲಿ ಕಲಾವಿದರು ಸಂತಸವನ್ನು ಹಂಚಿಕೊಂಡರು. ಅಲ್ಲದೆ ಈ ಕನ್ನಡದ ಸೀರಿಯಲ್ ತೆಲುಗುವಿನಲ್ಲಿ ’ಭೈರವಿ’ ಮತ್ತು ಮರಾಠಿ ಭಾಷೆಯಲ್ಲಿ ಮೊಟ್ಟ ಮೊದಲ ಬಾರಿಗೆ ರಿಮೇಕ್ ಆಗುತ್ತಿರುವುದು ವಿಶೇಷ.
ಕಥೆಯ ಕುರಿತು ಹೇಳುವುದಾದರೆ ಶಿವಗಾಮಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಅಗರ್ಭ ಶ್ರೀಮಂತೆ. ಈಕೆಯ ಸಂಸ್ಥೆಗೆ ಶಿಕ್ಷಕನಾಗಿ ಸೇರುವ ನಾಯಕ ಅಶೋಕನನ್ನು ಪ್ರೀತಿಸಿ ಮದುವೆಯಾಗುತ್ತಾಳೆ. ಇಬ್ಬರಿಗೂ ಹುಟ್ಟಿದ ಆರು ವರ್ಷದ ಮಗುವೇ ಶಾಂಭವಿ. ತರುವಾಯ ಮಗು ಕಾಣೆಯಾಗುತ್ತದೆ. ಇದರಿಂದ ಅಮ್ಮ ಹುಚ್ಚಿಯಾಗುತ್ತಾಳೆ. ಅದೇ ಸಮಯಕ್ಕೆ ದೇವಿಯ ಪ್ರತಿಷ್ಠಾಪನೆ ಆಗುತ್ತದೆ. ಕಾಣೆಯಾದ ಮಗುವಿಗೂ ದೇವಿ ಇರುವ ಜಾಗಕ್ಕೂ ಸಂಬಂಧವಿರುತ್ತದೆ. ಮುಂದೆ ಅನೇಕ ತಿರುವುಗಳು ಪಡೆದುಕೊಳ್ಳುತ್ತದೆ. ಅದೇನೆಂದು ತಿಳಿಯಲು ಧಾರವಾಹಿ ವೀಕ್ಷಿಸಬೇಕು.

ಇದನ್ನೂ ಓದಿ: BBK SEASON 10: ವಿನಯ್ ನನ್ನ ಗಂಡನ ದವಡೆ ಮುರಿದಿದ್ದ; ಕಿರುತೆರೆ ನಟಿಯ ಆರೋಪ!

ಶಾಂಭವಿ ಮತ್ತು ಭೈರವಿ ಹೀಗೆ ಎರಡು ಪಾತ್ರದಲ್ಲಿ ಬೇಬಿ ರಚನಾ. ಟಿ.ಬಿ, ಅಮ್ಮನಾಗಿ ಐಶ್ವರ್ಯಸಿಂಧೋಗಿ, ಸೋನಂರೈ, ಅಂಬುಜಾಕ್ಷಿ, ಪೂಜಿತಾ, ಡಾಲಿರಾಜೇಶ್, ಸೂರ್ಯಕುಂದಾಪುರ, ರೋಹಿತ್ನಾಯರ್, ಶ್ಯಾಮಲಮ್ಮ ಮುಂತಾದವರು ನಟಿಸುತ್ತಿದ್ದಾರೆ.

ಸಾಹಿತ್ಯ ಮತ್ತು ಸಂಗೀತ ಡಾ.ವಿ.ನಾಗೇಂದ್ರ ಪ್ರಸಾದ್, ವೈಬಿಆರ್.ಮನು ಛಾಯಾಗ್ರಹಣ, ಪರಂ ಸಂಕಲನ, ಪುಗಳ್ಮಣಿ ರಚನೆ-ಚಿತ್ರಕಥೆ, ರಾಧಾವೆಂಕಟ್ ಸಂಭಾಷಣೆ ಇರಲಿದೆ. ಶಾಂಭವಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7.30ಕ್ಕೆ ’ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

Exit mobile version