ಬೆಂಗಳೂರು: ನೈಜ ಘಟನೆಗಳಿಂದ ಪ್ರೇರಿತವಾದ ಕ್ರೈಂ ಕತೆ ‘ಶಾಂತಂ ಪಾಪಂ’ (Shantham Papam) ಕಲರ್ಸ್ ಕನ್ನಡದಲ್ಲಿ ಮತ್ತೆ ಶುರುವಾಗುತ್ತಿದೆ. ಇದೇ ಸೋಮವಾರದಿಂದ (19 ಫೆಬ್ರವರಿ 20240), ರಾತ್ರಿ 10.30ಕ್ಕೆ ಪ್ರಸಾರವಾಗಲಿದೆ ಸೀಸನ್ 6 ಶಾಂತಂ ಪಾಪಂ. ಈಗಾಗಲೇ ಕಲರ್ಸ್ ಕನ್ನಡ ಹಲವು ಪ್ರೋಮೊ ಹಾಗೂ ಪೋಸ್ಟರ್‌ಗಳನ್ನು ಹಂಚಿಕೊಂಡಿದೆ. ಇದೇ ಮೊದಲ ಬಾರಿಗೆ ಅಂಡರ್ ವಾಟರ್ ಶೂಟ್ ಮಾಡಿದೆ ವಾಹಿನಿ. ಇದು ಕಲರ್ಸ್ ಕನ್ನಡದ ಹೊಸ ಪ್ರಯತ್ನ. ಸಾಕಷ್ಟು ಜನಪ್ರಿಯತೆ ಪಡೆದಿದ್ದ ಈ ಶೋ, ಇದೀಗ ಮತ್ತೆ ಪ್ರಸಾರ ಆಗಲಿದೆ.
ವೀಕ್ಷಕರು ಅದರಲ್ಲೂ ಮಹಿಳೆಯರು ಸುತ್ತಮುತ್ತಲಿನ ಅಪರಾಧ ಕೃತ್ಯಗಳ ಬಗ್ಗೆ ವಹಿಸಬೇಕಾದ ಜಾಗರೂಕತೆಯ ಬಗ್ಗೆ ಪಾಠ ಹೇಳುವುದು ಈ ಶೋನ ಹೆಗ್ಗಳಿಕೆ. ರಾತ್ರಿ 10.30ಕ್ಕೆ ಪ್ರಸಾರವಾಗಲಿರುವ ಈ ಶೋವನ್ನು ಹೆಚ್ಚಾಗಿ ಪುರುಷರೇ ನೋಡುತ್ತಾರೆ ಎಂಬ ಮಾತಿದೆ. ಕಿರುತೆರೆ ಕಲಾವಿದರು, ರಿಯಾಲಿಟಿ ಶೋ ಜನಪ್ರಿಯ ಸ್ಪರ್ಧಿಗಳು ಹಾಗೂ ರಿಯಲ್ ಲೈಫ್ ನಿರೂಪಕರು ಒಂದೊಂದು ಸಂಚಿಕೆಯ ನಿರೂಪಣಾ ಹೊಣೆ ಹೊರುತ್ತಾರೆ. ನಮ್ಮ ಸುತ್ತ ಯಾವ ರೀತಿಯಲ್ಲಿ ಕ್ರೈಂ ನಡೆಯುತ್ತದೆ, ಜನರನ್ನು ಹೇಗೆ ಮೋಸ ಮಾಡುತ್ತಾರೆ ಎಂದೆಲ್ಲ ಈ ಕ್ರೈಂ ಶೋನಲ್ಲಿ ತೋರಿಸಲಾಗುತ್ತದೆ. ಸಾಮಾಜಿಕ ಸಂದೇಶ ಸಾರುವ ಈ ಕಾರ್ಯಕ್ರಮದ ಅನೇಕ ಸಂಚಿಕೆಗಳನ್ನು ಪರ ಭಾಷೆಗಳಿಗೂ ಡಬ್ ಕೂಡ ಆಗಿವೆ.
ಅಂಡರ್ ವಾಟರ್ ಶೂಟ್
ಇದನ್ನೂ ಓದಿ: Rajkumar Santoshi: ಚೆಕ್ ಬೌನ್ಸ್: ಆಮೀರ್ ಖಾನ್ ಸಿನಿಮಾ ನಿರ್ದೇಶಕನಿಗೆ 2 ವರ್ಷ ಜೈಲು!
ನೈಜ ಘಟನೆ ಆಧಾರಿತ ಕಥೆಗಳನ್ನೇ ತಿರುಚಿ, ಹೆಸರು ಬದಲಾಯಿಸಿ ಪ್ರಸಾರ ಮಾಡಲಾಗುತ್ತದೆ. ಅಪರಾಧ, ಕಾನೂನು, ಅನ್ಯಾಯ-ನ್ಯಾಯಗಳ ಬಗ್ಗೆ ಸಮಾಜಕ್ಕೆ ತಿಳಿವಳಿಕೆ ನೀಡುವ ಉದ್ದೇಶ ಹೊಂದಿರುವ ಈ ಶೋ, ಇದೀಗ ಮತ್ತೆ 6ನೇ ಸೀಸನ್ ಮೂಲಕ ಕಿರುತೆರೆ ವೀಕ್ಷಕರ ಮುಂದೆ ಬರಲಿದೆ. ಎದೆ ಝಲ್ಲೆನಿಸೋ ನೈಜ ಘಟನೆಗಳ ದೃಶ್ಯಕಾವ್ಯ ಹೊಸ ರೂಪದಲ್ಲಿ ಬರಲಿದೆ ಎನ್ನಲಾಗುತ್ತಿದೆ.