Site icon Vistara News

Paaru Serial: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಾರು ಧಾರಾವಾಹಿಯ ಖ್ಯಾತ ನಟ ಶರತ್ ಪದ್ಮನಾಭ್

Paaru Serial sharath padmanabh marriage

ಬೆಂಗಳೂರು : ಪಾರು ಧಾರಾವಾಹಿಯ (Paaru Serial) ಖ್ಯಾತ ನಟ ಶರತ್ ಪದ್ಮನಾಭ್ ಬಹುಕಾಲದ ಗೆಳತಿ ದಿವ್ಯಶ್ರೀ ಜತೆ ಹಸೆಮಣೆ ಏರಿದ್ದಾರೆ. ಹಿರಿಯ ನಟಿ ವಿನಯಾ ಪ್ರಸಾದ್‌, ನಾಗೇಶ್‌ ಯಾದವ್‌, ಮೋಕ್ಷಿತಾ, ಪವಿತ್ರಾ, ಸಿದ್ದು ಮೂಲಿಮನಿ, ಸಿತಾರಾ, ನಾಗೇಂದ್ರಷಾ ಸೇರಿದಂತೆ ʻಪಾರುʼ ಧಾರಾವಾಹಿಯ ಕಲಾವಿದರು ಶರತ್‌ ಅವರ ಮದುವೆಯಲ್ಲಿ ಭಾಗವಹಿಸಿ ನವ ದಂಪತಿಗೆ ಶುಭ ಕೋರಿದ್ದಾರೆ.

ಶರತ್‌ ಪದ್ಮನಾಭ್‌, ತಮ್ಮ ಮದುವೆಗೆ ಕೆಲವರನ್ನು ಮಾತ್ರ ಆಹ್ವಾನಿಸಿದ್ದರು. ‘ಪಾರು’ ತಂಡದ ಜತೆಗೆ ನಟ ಅನಿರುದ್ಧ್‌ , ಗಟ್ಟಿಮೇಳ ಖ್ಯಾತಿಯ ರಕ್ಷಿತ್‌, ಹಿಟ್ಲರ್‌ ಕಲ್ಯಾಣ ಖ್ಯಾತಿಯ ದಿಲೀಪ್‌ ರಾಜ್‌ ಹಾಗೂ ಪತ್ನಿ ವಿದ್ಯಾ ಕೂಡಾ ಭಾಗಿಯಾಗಿದ್ದರು. ಶರತ್‌ ನಿಶ್ಚಿತಾರ್ಥ,ಮದುವೆ ಫೋಟೊಗಳನ್ನಾಗಲೀ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ. ಶರತ್‌ ಸಹ ಕಲಾವಿದರು, ಸ್ನೇಹಿತರು, ಶರತ್‌ ಮದುವೆ ಆರತಕ್ಷೆಯ ಫೋಟೊಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ನವದಂಪತಿಗೆ ಮದುವೆಯ ಶುಭ ಕೋರುತ್ತಿದ್ದಾರೆ.

ಇದನ್ನು ಓದಿ:Zee Kutumba Awards | ಜೀ ಕನ್ನಡ ಕುಟುಂಬ ಅವಾರ್ಡ್ಸ್‌ 2022: ಇಲ್ಲಿದೆ ಪ್ರಶಸ್ತಿ ಪಡೆದವರ ಪಟ್ಟಿ

Paaru Serial sharath padmanabh marriage

ಇದನ್ನೂ ಓದಿ: Kantara Movie | ಕಿರುತೆರೆಯಲ್ಲಿ ಕಾಂತಾರ: ಡೇಟ್‌ ರಿವೀಲ್‌, ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಸಿನಿಮಾ ಅಬ್ಬರ

ಸದ್ಯಕ್ಕೆ ಶರತ್‌, ‘ಪಾರು’ ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿ ಮೊದಲ ಪುತ್ರ ಆದಿತ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಧೃತಿ ಕ್ರಿಯೇಷನ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಪಾರು’ ಧಾರಾವಾಹಿಗೆ ನಟ, ನಿರ್ಮಾಪಕ ದಿಲೀಪ್ ರಾಜ್ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಪುಟ್ಮಲ್ಲಿ’ ಎಂಬ ಧಾರಾವಾಹಿಯಲ್ಲೂ ಪ್ರಮುಖ ಪಾತ್ರದಲ್ಲಿ ಶರತ್‌ ಅಭಿನಯಿಸಿದ್ದಾರೆ.

Exit mobile version