ಬೆಂಗಳೂರು: ಇತ್ತೀಚೆಗೆ ಗೋವಾದಲ್ಲಿ ಕುಟುಂಬದವರ ಸಮ್ಮುಖದಲ್ಲಿ ರಿಯಲ್ (Deepika Das Reception) ಎಸ್ಟೇಟ್ ಮತ್ತು ಐಟಿ ಉದ್ಯಮದಲ್ಲಿ ತೊಡಗಿಕೊಂಡಿರುವ ದೀಪಕ್ ಜತೆ ದೀಪಿಕಾ ದಾಸ್ (Deepika Das) ಮದುವೆಯಾಗಿದ್ದಾರೆ. ಸ್ನೇಹಿತರು ಮತ್ತು ಆಪ್ತರಿಗಾಗಿ ರಿಸೆಪ್ಷನ್ ಕೂಡ ಮಾಡಲಾಗಿತ್ತು. ಮದುವೆಗೂ ಮುಂಚೆ ದೀಪಿಕಾ ದಾಸ್ ಅವರು ಶೈನ್ ಶೆಟ್ಟಿ (Shyne Shetty) ಅವರ ಜತೆ ಬಿಗ್ ಬಾಸ್ ಮನೆಯಲ್ಲಿ ತುಂಬ ಕ್ಲೋಸ್ ಆಗಿದ್ದರು. ಬಿಗ್ ಬಾಸ್ ಮನೆಯಿಂದ ಆಚೆ ಬಂದ ನಂತರವೂ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಜನ ಅಂದುಕೊಳ್ಳುತ್ತಿದ್ದರು. ರಿಸೆಪ್ಷನ್‌ನಲ್ಲಿ (Deepika Das Update) ಕೂಡ ಶೈನ್ ಶೆಟ್ಟಿ ಭಾಗಿಯಾಗಿಲ್ಲ. ಆದರೆ ಅವರು ಇನ್‌ಸ್ಟಾದಲ್ಲಿ ʻʻಅವರದ್ದು ಆಯ್ತಂತೆ..ನಿಂದ್ಯಾವಾಗ… ಮರ್ಯಾದೆ ಪ್ರಶ್ನೆʼ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
ಬಿಗ್ ಬಾಸ್ ಸಂದರ್ಭದಲ್ಲಿ ಈ ಜೋಡಿಗೆ ಜನರೇ ‘ಶಿನಿಕಾ’ ಎಂದು ಹೆಸರಿಟ್ಟು, ತುಂಬಾ ಮುದ್ದಾದ ಜೋಡಿ ಎಂದು ಹೇಳುತ್ತಿದ್ದರು. ಇವರಿಬ್ಬರು ಕೂಡ ಬಿಗ್ ಬಾಸ್ ಮುಗಿದ ಮೇಲೂ ಉತ್ತಮ ಸ್ನೇಹ ಮುಂದುವರಿಸಿಕೊಂಡು ಬಂದಿದ್ದರು. ಇವರ ಮದುವೆ ಘೋಷಣೆ ಒಂದಲ್ಲ ಒಂದು ದಿನ ಬರುತ್ತದೆ ಎಂದು ಫ್ಯಾನ್ಸ್ ಕಾಯುತ್ತಲೇ ಬಂದಿದ್ದರು. ಆದರೆ, ನಂತರದಲ್ಲಿ ದೀಪಿಕಾ ಅವರು ದೀಪಕ್ ಜತೆ ಮದುವೆಯಾದರು. ಇದಾದ ಬಳಿಕ ಶೈನ್ ಶೆಟ್ಟಿಗೆ ದೊಡ್ಡದೊಂದು ಪ್ರಶ್ನೆ ಎಡೆಬಿಡದೆ ಎದುರಾಗುತ್ತಿದೆಯಂತೆ. ಹೌದು, ಶೈನ್ ಶೆಟ್ಟಿ ತಮ್ಮ ಇನ್ಸ್ಟಾ ಖಾತೆಯಲ್ಲಿ ‘ಅವರದ್ದು ಆಯ್ತಂತೆ, ನಿಂದ್ಯಾವಾಗ- ಮರ್ಯಾದೆ ಪ್ರಶ್ನೆ’ ಎಂದು ಹಾಕಿಕೊಂಡಿದ್ದಾರೆ ಇದು ದೀಪಿಕಾ ದಾಸ್ ಮದುವೆಗೆ ಸಂಬಂಧಪಟ್ಟಿರುವ ಪೋಸ್ಟ್ ಆಗಿದೆ ಎಂದು ಫ್ಯಾನ್ಸ್ ಊಹಿಸಿದ್ದಾರೆ.
ಇದನ್ನೂ ಓದಿ: Deepika Das Reception: ಸದ್ದಿಲ್ಲದೆ ಮದುವೆಯಾದ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ದೀಪಿಕಾ ದಾಸ್!
ಸದ್ದಿಲ್ಲದೆ ಮದುವೆಯಾದ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ದೀಪಿಕಾ ದಾಸ್!
ಕಳೆದ ಒಂದು ವರ್ಷದಿಂದ ದೀಪಕ್ ಹಾಗೂ ದೀಪಿಕಾ ದಾಸ್ ಡೇಟಿಂಗ್ ಮಾಡುತ್ತಿದ್ದರು. ಮಾಧ್ಯಮದ ಜತೆ ದೀಪಿಕಾ ಮಾತನಾಡಿ ʻʻದೀಪಕ್ ಅವರು ಪಕ್ಕಾ ಗೌಡ, ದೇಸಿ ಹುಡುಗ. ನಾನೇ ಸೈಲೆಂಟ್ ಅಂದರೆ ಅವರು ಇನ್ನೂ ಸೈಲೆಂಟ್. ದೀಪಕ್ ಧ್ವನಿ ಜೋರಾಗಿ ಬರಲ್ಲ. ಅವರನ್ನು ಮಾತಾಡಿಸಬೇಕು ಎಂದರೆ ನಾನೇ ಹತ್ತು ಸಲ ಕೇಳಬೇಕು. ನನ್ನ ಬೆಳವಣಿಗೆಯಲ್ಲಿ ಅವರ ಬೆಂಬಲ ಇದ್ದೇ ಇರುತ್ತದೆ ಎಂಬ ನಂಬಿಕೆ ನನಗೆ ಇದೆ. ಅದು ಮಾಡಬೇಡ ಇದು ಮಾಡಬೇಡ ಎಂದು ದೀಪಕ್ ಡೇಟ್ ಮಾಡುವಾಗಲೂ ಹೇಳಲಿಲ್ಲ. ಪರ್ಸನಲ್ ಬೇರೆ, ಪ್ರೊಫೆಷನಲ್ ಬೇರೆ ಅಂತ ನಾವು ಇಟ್ಟುಕೊಂಡಿದ್ದೇವೆ. ಪ್ರೊಡಕ್ಷನ್ ಮಾಡೋಣ ಎಂಬ ಆಲೋಚನೆ ಇದೆ. ಏನಾಗತ್ತೋ ನೋಡೋಣ. ನಿಮ್ಮೆಲ್ಲರ ಬೆಂಬಲ ಇರಲಿ’ ಎಂದು ದೀಪಿಕಾ ದಾಸ್ ಹೇಳಿದ್ದರು.