Site icon Vistara News

Shreerastu Shubhamastu Serial: ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಿಂದ ಹೊರನಡೆದ ನೇತ್ರಾ ಜಾಧವ್: ʻಶಾರ್ವರಿʼ ಪಾತ್ರಕ್ಕೆ ಹೊಸ ಎಂಟ್ರಿ ಯಾರು?

Shreerastu Shubhamastu Serial Netra Jadhav out

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ (Shreerastu Shubhamastu Serial) ಇಷ್ಟು ದಿನಗಳವರೆಗೂ ಶಾರ್ವರಿ ಪಾತ್ರವನ್ನು ನಟಿ ನೇತ್ರಾ ಜಾಧವ್ (Netra Jadhav) ಅವರು ನಡೆಸಿಕೊಡುತ್ತಿದ್ದರು.

ಧಾರಾವಾಹಿಯಲ್ಲಿ ದೆಹಲಿಗೆ ಹೋಗಿ ಬರುತ್ತೇನೆ ಎಂದು ಹೊರಟʻ ಶಾರ್ವರಿʼ, ವಾಪಸ್ ಬಂದಿದ್ದು, ಸ್ವಪ್ನಾ ದೀಕ್ಷಿತ್ ಆಗಿ.

ಈಗ ನೇತ್ರಾ ಜಾಧವ್ ಅವರು ಧಾರಾವಾಹಿಯಿಂದ ಹೊರ ನಡೆದಿದ್ದು, ಸದ್ಯ ನಟಿ ಸ್ವಪ್ನ ದೀಕ್ಷಿತ್ ಅವರು ಶಾರ್ವರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: Kannada New Movie: ಸಿನಿಮಾ ಆಗುತ್ತಿದೆ ʼಪೆನ್‌ಡ್ರೈವ್ʼ! ಕುತೂಹಲಭರಿತ ಪೋಸ್ಟರ್

ರಥ ಸಪ್ತಮಿ, ಸುಂದರಿ, ಸಾಗುತ ದೂರ ದೂರ , ಆಕೃತಿ ಹೀಗೆ ಕನ್ನಡ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದರು ನೇತ್ರಾ.

ಶ್ರೀರಸ್ತು ಧಾರಾವಾಹಿಯಲ್ಲಿ ಶಾರ್ವರಿ ಪಾತ್ರ ಹೇಗೆಂದರೆ ಮುಂದೆ ಒಳ್ಳೆಯವರಂತೆ ನಟಿಸುತ್ತ, ಒಳಗೊಳಗೆ ಪಿತೂರಿ ಮಾಡುವ ಪಾತ್ರ. ಇಷ್ಟು ದಿನ ಶಾರ್ವರಿ ದೆಹಲಿಯಲ್ಲಿರುವ ತಮ್ಮ ಕಂಪನಿಯಲ್ಲಿ ಸಮಸ್ಯೆ ಆಗಿತ್ತು ಎಂಬ ಕಾರಣಕ್ಕೆ ಮಾಧವ್ ಬದಲು ತಾನು ಹೋಗಿರುತ್ತಾಳೆ. ಇದೀಗ ಮತ್ತೆ ಮನೆಗೆ ವಾಪಸ್‌ ಆಗಿದ್ದಾಳೆ.

Exit mobile version