ಬೆಂಗಳೂರು: ಕಳೆದ ಮೂರೂವರೆ ದಶಕಗಳಿಂದ ತನ್ನದೆ ಸಾಮರ್ಥ್ಯವನ್ನು ಉಳಿಸಿಕೊಂಡು ಬರುತ್ತಿರುವ `ಉದಯ ವಾಹಿನಿ’ಯು ಈಗ ’ಶ್ರೀಮದ್ ರಾಮಾಯಣ’ (Shrimad Ramayana) ಧಾರವಾಹಿಯನ್ನು ವೀಕ್ಷಕರಿಗೆ ಉಣಬಡಿಸಲು ಸಿದ್ದತೆ ಮಾಡಿಕೊಂಡಿದೆ. ಅದ್ಭುತ ಕಾವ್ಯವನ್ನು ಹೊಸ ತಲೆಮಾರಿಗೆ ತಲುಪಿಸಲು ಮುಂದಾಗಿದೆ.
ʻರಾಮಾಯಣʼ ಭಾರತೀಯ ಸಂಸ್ಕ್ರತಿ, ಪರಂಪರೆ ಪ್ರತಿಬಿಂಬಿಸಲಿರುವುದು ವಿಶೇಷ. ರಾಮನ ಜೀವನ ಬಹುತೇಕ ಭಾರತೀಯರಿಗೆ ಮಾದರಿಯಾಗಿದೆ. ಆತನ ರಾಜ್ಯ ಪರಿಪಾಲನೆಯು ಇಂದಿಗೂ ರಾಮರಾಜ್ಯ ಅನ್ನುವ ಪದ ಈಗಲೂ ಬಳಸಲಾಗುತ್ತಿದೆ. ರಾಮ ಮತ್ತು ಸೀತೆಯ ಪವಿತ್ರ ಪ್ರೇಮ, ಕಥೆಯಲ್ಲಿ ಧರ್ಮದ ಪಾಲನೆಯ ಮಾರ್ಗದಲ್ಲಿ ಎದುರಿಸಿದ ಅನೇಕ ಸವಾಲುಗಳು ಕುತೂಹಲಕಾರಿಯಾಗಿದೆ. ಸಂಪೂರ್ಣ ನೂತನ ದೃಶ್ಯ ವೈಭವಗಳು, ವೈವಿಧ್ಯಮಯ ನಟರ ತಂಡವು ಪೌರಾಣಿಕ ಪಾತ್ರಗಳಿಗೆ ಹೊಸ ಜೀವ ತುಂಬಲಿದೆ.
ಪ್ರತಿ ಸಂಚಿಕೆಯ 250 ವೀಕ್ಷಕರಿಗೆ ಒಟ್ಟು 2.5 ಲಕ್ಷ ರೂಪಾಯಿ ನಗದು ಬಹುಮಾನ ಗೆಲ್ಲುವ ಅವಕಾಶವನ್ನು ಕಲ್ಪಿಸಿದೆ. ಸೀರಿಯಲ್ ವೀಕ್ಷಿಸಿ ಕೊನೆಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಮಿಸ್ಡ್ ಕಾಲ್ ಮೂಲಕ ಸರಿ ಉತ್ತರ ನೀಡಬೇಕು. ಸರಿ ಉತ್ತರ ನೀಡಿದವರಿಗೆ ನೀಡಿದವರಿಗೆ ತಲಾ ಒಂದು ಸಾವಿರ ಬಹುಮಾನವನ್ನು ನೀಡಲಾಗುತ್ತದೆ. ಸೀರಿಯಲ್ ಸೋಮವಾರದಿಂದ ಶನಿವಾರದವರೆಗೆ ಮೇ 20ರಿಂದ ಸಂಜೆ 6 ಗಂಟೆಗೆ ಉದಯ ಟಿವಿದಲ್ಲಿ ಪ್ರಸಾರವಾಗಲಿದೆ.
‘ಶ್ರೀಮದ್ ರಾಮಾಯಣ’ ಹಿಂದಿ ಭಾಷೆಯಿಂದ ಕನ್ನಡ ಡಬ್ ಮಾಡಿ ಪ್ರಸಾರ ಮಾಡಲಾಗುತ್ತಿದೆ. ಭಾಷೆ ಅರ್ಥ ಆಗದವರಿಗೆ ಕನ್ನಡದಲ್ಲಿಯೇ ಈ ಬಿಗ್ ಬಜೆಟ್ ಧಾರಾವಾಹಿಯನ್ನು ವೀಕ್ಷಣೆ ಮಾಡಬಹುದಾಗಿದೆ. 2024ರ ಆರಂಭದಲ್ಲಿಯೇ ‘ಶ್ರೀಮದ್ ರಾಮಾಯಣ’ ಮಹಾ ಧಾರಾವಾಹಿಯನ್ನು ಹಿಂದಿಯ ಸೋನಿ ಸಂಸ್ಥೆ ಪ್ರಸಾರ ಮಾಡಿತ್ತು. ಆರಂಭದಲ್ಲಿ ಈ ಧಾರಾವಾಹಿ ಮೆಚ್ಚುಗೆ ವ್ಯಕ್ತವಾಗಿತ್ತು.
ಇದನ್ನೂ ಓದಿ: Lok Sabha Election 2024: ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುಗೆ ಬೆಂಬಲ ನೀಡಿ: ಶಾಸಕ ಉದಯ್
‘ಶ್ರೀಮದ್ ರಾಮಾಯಣ’ ಧಾರಾವಾಹಿಯನ್ನು ಹೊಸ ದೃಷ್ಟಿಕೋನದಿಂದ ಪ್ರಸಾರ ಮಾಡಲು ಸಿದ್ಧವಾಗಿದೆ. ರಾಮಾಯಣವನ್ನು ಹೊಸ ಆಯಾಮದಿಂದ ತೋರಿಸುವ ಮೂಲಕ ಕಿರುತೆರೆ ವೀಕ್ಷಕರಿಗೆ ಹೊಸ ಅನುಭವವನ್ನು ನೀಡಲು ಹೊರಟಿದೆ. ಸಂಪೂರ್ಣ ನೂತನ ದೃಶ್ಯ ವೈಭವಗಳು ಮತ್ತು ವೈವಿಧ್ಯಮಯ ನಟರ ತಂಡವು ಈ ಪೌರಾಣಿಕ ಪಾತ್ರಗಳಿಗೆ ಹೊಸ ಜೀವ ತುಂಬಿದೆ.