Site icon Vistara News

Shrirasthu Shubhamasthu | ದುಡಿದು, ದಣಿವ ಅಮ್ಮಂದಿರ ದನಿಯಾಗಿ ಬರುತ್ತಿದೆ ಹೊಸ ಕಥೆ: ಶ್ರೀರಸ್ತು ಶುಭಮಸ್ತು!

Shrirasthu Shubhamasthu

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ʻನಾಗಿಣಿ-2ʼ, ಹಾಗೂ ʻಕಮಲಿʼ ಧಾರಾವಾಹಿ ಅಂತ್ಯವಾಗುತ್ತಿದೆ. ʻಶ್ರೀರಸ್ತು ಶುಭಮಸ್ತುʼ ಹೊಸ ಧಾರಾವಾಹಿ (Shrirasthu Shubhamasthu ) ಶೀಘ್ರವೇ ಪ್ರಸಾರ ಕಾಣಲಿದೆ. ಈ ಹಿಂದೆ ಇದೇ ಹೆಸರಿನಲ್ಲಿ ಧಾರಾವಾಹಿ ಮೂಡಿ ಬಂದಿತ್ತು. ಇದೀಗ ಅದೇ ಶೀರ್ಷಿಕೆಯಲ್ಲಿ ಮತ್ತೊಂದು ಧಾರಾವಾಹಿ ಶುರುವಾಗುತ್ತಿದೆ. ಪ್ರಸಾರವಾಗುತ್ತಿರುವ ಸಮಯ ಮತ್ತು ದಿನವನ್ನು ಜೀ ಹಂಚಿಕೊಂಡಿದೆ.

ಹಿಂದಿನ ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ಆರು ಅತ್ತೆಯಂದಿರ ಮುದ್ದಿನ ಸೊಸೆಯ ಕಥೆಯನ್ನು ಪ್ರಸಾರ ಮಾಡಲಾಗಿತ್ತು. ಈ ಬಾರಿ ಅತ್ತೆ -ಸೊಸೆಯ ಕಥೆ ವಿಭಿನ್ನವಾಗಿದ್ದು, ಗೃಹಿಣಿಯಾಗಿ ಮಹಿಳೆಯ ಮನಸ್ಥಿತಿ, ಆಕೆ ಇತರ ಸದಸ್ಯರನ್ನು ನೋಡಿಕೊಳ್ಳುವ ಹಲವು ವಿಚಾರ ಈ ಧಾರಾವಾಹಿಯಲ್ಲಿ ಇರುವಂತಿದೆ. ಜೀ ಕನ್ನಡ ಈಗಾಗಲೇ ಪ್ರೋಮೊ ಹಂಚಿಕೊಂಡಿದ್ದು, ಸುಧಾರಾಣಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಜೀ ಕನ್ನಡ ಧಾರಾವಾಹಿಯ ʻಜೊತೆ ಜೊತೆಯಲಿʼ ಧಾರಾವಾಹಿಯಲ್ಲಿ ನಟಿ ಸುಧಾರಾಣಿ ಗೆಸ್ಟ್‌ ರೋಲ್‌ ಮಾಡಿದ್ದರು. ಇದೀಗ ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ಸೊಸೆಯ ಪಾತ್ರ ನಿರ್ವಹಿಸುತ್ತಿದ್ದಾರೆ. ತುಳಸಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ | Zee Kutumba Awards | ಜೀ ಕನ್ನಡ ಕುಟುಂಬ ಅವಾರ್ಡ್ಸ್‌ 2022: ಇಲ್ಲಿದೆ ಪ್ರಶಸ್ತಿ ಪಡೆದವರ ಪಟ್ಟಿ

ಈ ಧಾರಾವಾಹಿಯ ಪ್ರೋಮೊವನ್ನು ಜೀ ವಾಹಿನಿ ನಾಲ್ಕು ತಿಂಗಳ ಹಿಂದೆಯೇ ಪ್ರಸಾರ ಮಾಡಿತ್ತು. ಇದರ ಪ್ರಸಾರದ ಸಮಯ ಮತ್ತು ದಿನವನ್ನು ರಿವೀಲ್‌ ಮಾಡಿದೆ. ಹೊಸ ಪ್ರೋಮೊ ಹಂಚಿಕೊಂಡ ವಾಹಿನಿ ಅಕ್ಟೋಬರ್‌ 31ರಿಂದ ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ. ಈ ಸಮಯದಲ್ಲಿ ಮೂಡಿ ಬರುತ್ತಿದ್ದ ʻಜೊತೆ ಜೊತೆಯಲಿ ಧಾರಾವಾಹಿಯʼ ಸಮಯ ಬದಲಾಗಿದೆ.

ಇದನ್ನೂ ಓದಿ | Puneeth Parva | ನನಗೆ ಡಾನ್ಸ್‌ ಕಲಿಸಿದ್ದೇ ಅಪ್ಪು, ಅವರು ಎಂದಿಗೂ ಜೀವಂತ: ಒಡನಾಟ ನೆನೆದ ರಮ್ಯಾ

Exit mobile version