Site icon Vistara News

Shrirasthu Shubhamasthu Serial: ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿಯ ಮಾಧವ್‌ ಕಿರುತೆರೆಗೆ ಹೊಸಬರಲ್ಲ!

Shrirasthu Shubhamasthu Serial

ಬೆಂಗಳೂರು : ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿ (Shrirasthu Shubhamasthu Serial) ಶುರುವಾಗಿ ಕೇವಲ ಮೂರೇ ತಿಂಗಳಾಗಿವೆ. ಈ ಧಾರಾವಾಹಿಯ ಪ್ರತಿ ಪಾತ್ರವನ್ನು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಇಷ್ಟಪಟ್ಟಿದ್ದಾರೆ. ಅದರಲ್ಲಿಯೂ ನಾಯಕ ಮಾಧವ್‌ ಪಾತ್ರದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಆಗುತ್ತಿವೆ. ಮಾಧವ್‌ ಅವರ ನಿಜವಾದ ಹೆಸರು ಅಜಿತ್‌ ಹಂದೆ. ರಂಗಭೂಮಿಯಲ್ಲಿ ಸಕ್ರಿಯರಾದ ಇವರು ಕಿರುತೆರೆ ಲೋಕದಲ್ಲಿ ಮಿಂಚುತ್ತಿದ್ದಾರೆ.

ಕಿರುತೆರೆಗೆ ಇವರು ಹೊಸಬರಲ್ಲ. ‘ಬಿದಿಗೆ ಚಂದ್ರಮ’, ‘ಗರ್ವ’, ‘ಮುಕ್ತ’ ಧಾರಾವಾಹಿಗಳಲ್ಲಿ ನಟಿಸಿದ್ದರು. ಇಷ್ಟೇ ಅಲ್ಲದೇ ಹಿಂದೆ ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದರು. ‘ಮುಕ್ತ’ ಧಾರಾವಾಹಿಯಲ್ಲಿ ಸ್ವಾಮೀಜಿ ಪಾತ್ರದಲ್ಲಿ ನಟಿಸಿದ್ದರು. ಆದರೆ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅವರ ಲುಕ್‌ ಕಂಡು ಹಿಡಿಯುವುದು ಕಷ್ಟವೇ ಸರಿ.

ಇದನ್ನೂ ಓದಿ: Actress Abhinaya | `ಹಿಟ್ಲರ್‌ ಕಲ್ಯಾಣ’ ಧಾರಾವಾಹಿಯ ಅಭಿನಯಾ ಪಾತ್ರಕ್ಕೆ ಹೊಸ ನಟಿ ಎಂಟ್ರಿ!

ಇದನ್ನೂ ಓದಿ: Shrirasthu Shubhamasthu | ದುಡಿದು, ದಣಿವ ಅಮ್ಮಂದಿರ ದನಿಯಾಗಿ ಬರುತ್ತಿದೆ ಹೊಸ ಕಥೆ: ಶ್ರೀರಸ್ತು ಶುಭಮಸ್ತು!

ಈ ಧಾರಾವಾಹಿಯಲ್ಲಿ ಮಧ್ಯ ವಯಸ್ಕನ ಪಾತ್ರವನ್ನು ಅಜಿತ್‌ ಹಿಂದೆ ನಿರ್ವಹಿಸಿದ್ದು, ಅವರಿಗೆ ನಾಲ್ಕು ವರ್ಷದ ಮಗ ಇದ್ದಾನೆ ಎಂದರೆ ನಂಬಲೇ ಬೇಕು. ಅಜಿತ್‌ ಹಿಂದೆ ಅವರ ಮಾತು, ಅವರ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ವಯಸ್ಸಿಗೂ ಮೀರಿದ ನಟನೆ ಮಾಡುವಲ್ಲಿ ಸೈ ಎನೆಸಿಕೊಂಡಿದ್ದಾರೆ ಅಜಿತ್‌.

ಸುಧಾರಾಣಿ ಅವರು ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ಸೊಸೆಯ ಪಾತ್ರ ನಿರ್ವಹಿಸುತ್ತಿದ್ದಾರೆ. ತುಳಸಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Exit mobile version