ಬೆಂಗಳೂರು: ವಾಣಿ ರಾಣಿ(Vani Rani) , ಕಲ್ಯಾಣಿ ಪರಿಸು, ಭಾರತಿ ಕಣ್ಣಮ್ಮ ಎಂದು ತಮಿಳು ಸೀರಿಯಲ್ ಮೂಲಕ ಮಗಗೆದ್ದ ಶ್ರುತಿ ಷಣ್ಮುಗ ಪ್ರಿಯಾ (Shruti Shanmuga Priya) ಅವರ ಪತಿ ಅರವಿಂದ್ ಶೇಖರ್ ಹೃದಯಾಘಾತದಿಂದ ಆಗಸ್ಟ್ 2ರಂದು ನಿಧನರಾದರು. ಅರವಿಂದ್ ಅವರಿಗೆ ಕೇವಲ 30ವರ್ಷ ವಯಸ್ಸಾಗಿತ್ತು. ಶ್ರುತಿ ಶಣ್ಮುಗ ಅವರ ಪತಿ ಅರವಿಂದ್ ಅವರು ಬಾಡಿ ಬಿಲ್ಡರ್ (Body Builder) ಆಗಿದ್ದರು. ದೇಹದ ತೂಕ ಇಳಿಸಿಕೊಳ್ಳಲು ಅವರು ಟ್ರೇನಿಂಗ್ ನೀಡುತ್ತಿದ್ದರು. 2022ರ ಮಿಸ್ಟರ್ ತಮಿಳುನಾಡು ಕೂಡ ಆಗಿದ್ದರು. ಫಿಟ್ನೆಸ್‌ಗೆ ಅವರು ಹೆಚ್ಚು ಒತ್ತು ನೀಡುತ್ತಿದ್ದರು. ಕಳೆದ ವರ್ಷ ಈ ಜೋಡಿ ಮದುವೆಯಾಗಿತ್ತು. ಈ ಜೋಡಿ ಇತ್ತೀಚೆಗೆ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತ್ತು.
ಹೃದಯಾಘಾತಕ್ಕೆ ಒಳಗಾದ ಅರವಿಂದ್ ಅವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ, ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಅರವಿಂದ್ ಅವರು ಫಿಟ್ನೆಸ್ ಕೋಚ್ ಆಗಿದ್ದರು. ಶ್ರುತಿ ಷಣ್ಮುಗ ಪ್ರಿಯಾ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಜೋಡಿ ರೀಲ್ಸ್ ಮೂಲಕ ಫೇಮಸ್ಸಾಗಿತ್ತು. ಈ ಜೋಡಿ ಇತ್ತೀಚೆಗೆ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಪ್ಯಾರಿಸ್‌ನಲ್ಲಿ ಆಚರಿಸಿಕೊಂಡಿತ್ತು.
ಇದನ್ನೂ ಓದಿ: Contaminated Water : ಕವಾಡಿಗರಹಟ್ಟಿ ದುರಂತದಲ್ಲಿ 5ನೇ ಸಾವು; ಆಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಬಲಿ ಬೇಕು?
ಶ್ರುತಿ ಹಾಗೂ ಅರವಿಂದ್ ಅವರು ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದರು. ಕಳೆದ ವರ್ಷ ಮೇ ತಿಂಗಳಲ್ಲಿ ಇಬ್ಬರೂ ಮದುವೆ ಆದರು. ಶ್ರುತಿ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ನಂತರ ಕಿರುತೆರೆಗೆ ಕಾಲಿಟ್ಟರು.
ಅರವಿಂದ್ ಶೇಖರ್ ನಿಧನದ ಸುದ್ದಿ ತಿಳಿದಾಗಿನಿಂದ ಜೋಡಿಯ ಫ್ಯಾನ್ಸ್ ಸಂತಾಪ ಸೂಚಿಸಿದೆ. ಹಲವರು ಅರವಿಂದ್ ಇನ್ನಿಲ್ಲ ಎಂಬುದು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಮೆಂಟ್ ಮೂಲಕ ಹೇಳಿಕೊಳ್ಳುತ್ತಿದ್ದಾರೆ.