ಬೆಂಗಳೂರು: ʻಸುಫಿಯಾನಾ ಇಷ್ಕ್ ಮೇರಾʼ ಖ್ಯಾತಿಯ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ (Siddhanth Suryavanshi) ಅವರು ಹೃದಯಾಘಾತದಿಂದ ನವೆಂಬರ್ 11 ಶುಕ್ರವಾರ ನಿಧನರಾಗಿದ್ದಾರೆ. ನಟ ಸಿದ್ಧಾಂತ್ ವೀರ್ ಸೂರ್ಯವಂಶಿ ಅವರಿಗೆ ಕೇವಲ 46 ವರ್ಷ ವಯಸ್ಸಾಗಿತ್ತು. ನಟ ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಕುಸಿದು ಬಿದ್ದಿದ್ದಾರೆ. ಪತ್ನಿಯಾದ ಸೂಪರ್ ಮಾಡೆಲ್ ಅಲೆಸಿಯಾ ರಾವುತ್ ಮತ್ತು ಇಬ್ಬರು ಮಕ್ಕಳನ್ನು ನಟ ಅಗಲಿದ್ದಾರೆ. ನಿರೂಪಕ ಜಯ್ ಭಾನುಶಾಲಿ ಅವರು ಸಿದ್ಧಾಂತ್ ಅವರ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ.
ಸೂಪರ್ ಮಾಡೆಲ್ ಆಗಿದ್ದ ಸಿದ್ಧಾಂತ್ ಸೂರ್ಯವಂಶಿ ಅವರು ಆನಂದ್ ಸೂರ್ಯವಂಶಿ ಎಂಬ ಹೆಸರನ್ನು ಕೂಡ ಹೊಂದಿದ್ದರು. ಸಾಕಷ್ಟು ಧಾರಾವಾಹಿಗಳಲ್ಲಿ ಅವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ʻಕಸೌಟಿ ಜಿಂದಗಿ ಕೆʼ, ʻಕೃಷ್ಣ ಅರ್ಜುನ್ʼ ʻಕ್ಯಾ ದಿಲ್ ಮೆ ಹೇʼ ಮುಂತಾದ ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು. ‘ಕ್ಯೂ ರಿಶ್ತೋ ಮೆ ಕಟ್ಟಿ ಬಟ್ಟಿ’, ‘ಜಿದ್ದಿ ದಿಲ್’ ಅವರ ಕೊನೆಯ ಟಿವಿ ಪ್ರಾಜೆಕ್ಟ್‌ಗಳಾಗಿವೆ.
ಇದನ್ನೂ ಓದಿ | ಜಿಮ್‌ಗಳಲ್ಲಿ ಪ್ರೋಟೀನ್ ಪೌಡರ್ ಸೇವಿಸಿ ಯುವಕ ಸಾವು: ವಿಧಾನಸಭೆಯಲ್ಲಿ ಸರ್ಕಾರದ ಎಚ್ಚರಿಕೆ`
ನಟ ಸಿದ್ಧಾಂತ್ ವೀರ್ ಸೂರ್ಯವಂಶಿ ಅಗಲಿಕೆಗೆ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ʻಇದು ಸುಳ್ಳಾಗಲಿ, ಅವರ ಆತ್ಮಕ್ಕೆ ಶಾಂತಿ ಸಿಗಲಿʼ ಎಂದು ತಾರೆಯರು ಕಮೆಂಟ್ ಮೂಲಕ ಹೇಳಿಕೊಂಡಿದ್ದಾರೆ. ʻದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದ್ದು, ಮೃತರಿಗೆ ಶಾಂತಿ ಕೋರಿದ್ದಾರೆ.
2015ರಲ್ಲಿ ನಟಿ ಇರಾಳರನ್ನು ನಟ ಸಿದ್ಧಾಂತ್ ಮದುವೆಯಾಗಿದ್ದರು. ಮೊದಲ ಮದುವೆಯಿಂದ ನಟ ಸಿದ್ಧಾಂತ್ ಅವರಿಗೆ ಮಗಳು ಇದ್ದಾಳೆ. ನಂತರ ವಿಚ್ಛೇದನ ಪಡೆದ ನಟ, 2017ರಲ್ಲಿ ಮಾಡೆಲ್ ಅಲೆಸಿಯಾ ರೌತ್ ಅವರನ್ನು ವಿವಾಹವಾದರು.
ಇದನ್ನೂ ಓದಿ | Raju Srivastava | ಫಲಿಸಲಿಲ್ಲ ಒಂದೂವರೆ ತಿಂಗಳ ಚಿಕಿತ್ಸೆ; ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ ನಿಧನ