Site icon Vistara News

Paaru Serial | ʻಗಟ್ಟಿಮೇಳʼ ಪ್ರಿಯಾ ಜತೆ ನಿಶ್ಚಿತಾರ್ಥ ಮಾಡಿಕೊಂಡ ʻಪಾರುʼ ಸಿದ್ದು ಮೂಲಿಮನಿ

Paaru Serial

ಬೆಂಗಳೂರು : ʻಪಾರುʼ ಧಾರಾವಾಹಿ (Paaru Serial ) ಖ್ಯಾತಿಯ ಸಿದ್ದು ಮೂಲಿಮನಿ ಅವರು ʻಗಟ್ಟಿಮೇಳʼ ಧಾರಾವಾಹಿ ಖ್ಯಾತಿಯ ಪ್ರಿಯಾ ಜೆ ಆಚಾರ್ ಅವರೊಂದಿಗೆ ನವೆಂಬರ್‌ 20ರಂದು ಭಾನುವಾರ ದಾವಣಗೆರೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಡ್ಯಾನ್ಸ್‌ ಶೋ ಒಂದರಲ್ಲಿ ಪರಿಚಿತರಾದ ಸಿದ್ದು ಹಾಗೂ ಪ್ರಿಯಾ ಜೆ ಆಚಾರ್ ಅವರು ಆ ನಂತರ ʻಧಮಾಕ’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.  

ಈ ವೇಳೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿದೆ. ಆ ನಂತರದಲ್ಲಿ ಗುರುಹಿರಿಯರ ಒಪ್ಪಿಗೆ ಪಡೆದು, ಇದೀಗ ಪ್ರಿಯಾ ಹಾಗೂ ಸಿದ್ದು ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯ ಈ ಜೋಡಿ ಹಸೆಮಣೆ ಏರಲಿದೆ. ಈ ಜೋಡಿಯ ನಿಶ್ಚಿತಾರ್ಥದಲ್ಲಿ ಭಾಗಿಯಾಗಿರುವ ಪೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ. ಇತ್ತೀಚೆಗೆ ಪ್ರಿಯಾ ಅವರು ಯುಟ್ಯೂಬ್ ಲೋಕಕ್ಕೂ ಕಾಲಿಟ್ಟಿದ್ದಾರೆ. ದಿನಚರಿ, ಹಬ್ಬ, ಫ್ಯಾಷನ್ ಅಡುಗೆ ಹೀಗೆ ವಿಭಿನ್ನ ಕಾನ್ಸೆಪ್ಟ್‌ಗಳನ್ನು ವೀಕ್ಷಕರ ಜತೆ ಹಂಚಿಕೊಳ್ಳುತ್ತಿರುತ್ತಾರೆ. ಪರಭಾಷೆ ಧಾರಾವಾಹಿಯಲ್ಲೂ ಪ್ರಿಯಾ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ | Vistara News Launch | ಧಾರಾವಾಹಿಗಳ ಮೂಲಕ ಕಿರುತೆರೆಯಲ್ಲಿ ಇತಿಹಾಸ ಸೃಷ್ಟಿಸಿದ ಟಿ. ಎನ್. ಸೀತಾರಾಮ್‌: ಕಾಯಕ ಯೋಗಿ ಪ್ರಶಸ್ತಿಗೆ ಭಾಜನ 

ಸಿದ್ದು ಮೂಲಿಮನಿ ಕೂಡ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ʻವಿಕ್ರಾಂತ್‌ ರೋಣʼ, ʻರಂಗಿತರಂಗʼ ಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | Sagar Biligowda | ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ʻಸತ್ಯʼ ಧಾರಾವಾಹಿ ಖ್ಯಾತಿಯ ಅಮುಲ್ ಬೇಬಿ ಕಾರ್ತಿಕ್!

Exit mobile version