Site icon Vistara News

Tripura Sundari Serial | ʻಸ್ಪರ್ಶʼ ಸಿನಿಮಾ ಖ್ಯಾತಿಯ ನಟಿ ರೇಖಾ ಧಾರಾವಾಹಿಗೆ ಎಂಟ್ರಿ!

Tripura Sundari Serial

ಬೆಂಗಳೂರು: ಕಿಚ್ಚ ಸುದೀಪ್‌ ಜತೆ ʻಸ್ಪರ್ಶʼ ಸಿನಿಮಾದಲ್ಲಿ ನಟಿಸಿ ಸೈ ಎನೆಸಿಕೊಂಡಿರುವ ಸ್ಯಾಂಡಲ್‌ವುಡ್‌ ನಟಿ ರೇಖಾ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ʻತ್ರಿಪುರ ಸುಂದರಿʼ (Tripura Sundari Serial) ಎನ್ನುವ ಧಾರಾವಾಹಿ ಮೂಲಕ ರೇಖಾ ಕನ್ನಡ ಕಿರುತೆರೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ತ್ರಿಪುರ ಸುಂದರಿ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಜನವರಿ 2 ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ನಟ ಶಿವರಾಜ್‌ಕುಮಾರ್‌ ಅಭಿನಯದ ʻವೇದʼ ಸಿನಿಮಾದಲ್ಲಿಯೂ ನಟಿಸಿರುವ ರೇಖಾ ಅವರು ಇದೀಗ ಧಾರಾವಾಹಿಗೆ ಗ್ರ್ಯಾಂಡ್‌ ಎಂಟ್ರಿ ಕೊಡಲಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ರೇಖಾ ʻನಾನು ಯಾವಾಗಲೂ ಕಾಲ್ಪನಿಕ ಕಥೆಗಳಿಗೆ ಅಭಿಮಾನಿ. ಈ ಸಿನಿಮಾದ ನಿರ್ಮಾಪಕರು ನನ್ನನ್ನು ಸಂಪರ್ಕಿಸಿದಾಗ ಈ ಧಾರಾವಾಹಿ ಕಥೆ ತುಂಬಾ ವಿಭಿನ್ನವಾಗಿದೆ ಎನ್ನುವುದು ಗೊತ್ತಾಯಿತು. ಧಾರಾವಾಹಿಗಳು ನಮ್ಮನ್ನು ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿಸುತ್ತದೆ ಮತ್ತು ಪ್ರೇಕ್ಷಕರು ನನ್ನನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇನೆ’ ಎಂದು ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | Divya Suresh | ʻತ್ರಿಪುರ ಸುಂದರಿʼಯಾಗಿ ಬಂದ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್‌: ನಾಯಕ ಇವರೆ!

ʻತ್ರಿಪುರ ಸುಂದರಿʼ ಧಾರಾವಾಹಿಯ ಪ್ರೋಮೊ ಕಲರ್ಸ್‌ ಕನ್ನಡ ಈಗಾಗಲೇ ಹಂಚಿಕೊಂಡಿದೆ. ಪ್ರೋಮೊ ನೋಡಿ ಭಾರಿ ಕುತೂಹಲವಿದೆ ಎಂದು ನೋಡುಗರು ಕಮೆಂಟ್‌ ಮೂಲಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Vaishnavi Gowda | ಕಿರುತೆರೆ ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡ್ರಾ? ಶಂಕರ್​ ಬಿದರಿಯೂ ಇದ್ದಾರೆ ಫೋಟೋದಲ್ಲಿ!

 

Exit mobile version