Site icon Vistara News

SRGMPS20: ಸಪ್ತ ಸಾಗರ ದಾಟುತಿದೆ ಸ್ವರ ಸಂಚಾರ; ಈ ಬಾರಿಯ ಸರಿಗಮಪ ವಿಶೇಷತೆ ಏನು?

saregamapa worldwide audition

ಬೆಂಗಳೂರು: ಸರಿಗಮಪ ಲಿಟಲ್​ ಚಾಂಪ್ಸ್​ ಸೀಸನ್ 19 (SRGMPS20) ಪ್ರಗತಿ ಬಡಿಗೇರ್ ವಿಜೇತರಾಗಿ ಹೊರಹೊಮ್ಮಿದರು. ಸೀಸನ್‌ 19ರಲ್ಲಿ ಗ್ರಾಮೀಣ ಪ್ರತಿಭೆ ವಿಜೇತರಾಗಿದ್ದು, ಹಲವರು ಸಂತಸ ಹೊರಹಾಕಿದ್ದರು. ಈ ಬಾರಿಯ ಸರಿಗಮಪ ಸೀಸನ್ 20 ಬಹಳ ವಿಶೇಷತೆಯಿಂದ ಕೂಡಿರಲಿದೆ. ಈಗಾಗಲೇ ಜೀ ವಾಹಿನಿ ಪ್ರೋಮೊ ಹಂಚಿಕೊಂಡಿದೆ. ಇಷ್ಟೂ ದಿನ ಕರ್ನಾಟಕ ರಾಜ್ಯದಲ್ಲಿ ಆಡಿಶನ್ ಮಾಡಲಾಗುತ್ತಿತ್ತು. ಬೇರೆ ರಾಜ್ಯದ ಪ್ರತಿಭೆಗಳು ಸಹ ಬಂದು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿ ಸಿಂಗರ್ ಆಗಿ ಹೊರಹೊಮ್ಮಿದ್ದಾರೆ. ಆದರೀಗ ಸರಿಗಮಪ ಸಪ್ತ ಸಾಗರವನ್ನು ದಾಟುತ್ತಿದೆ.  ಈ ಬಾರಿಯ ಸರಿಗಮಪ ಸೀಸನ್ 20 ವಿದೇಶಗಳಲ್ಲೂ ಆಡಿಶನ್‌ ನಡೆಸಲಿದೆ.

ಈ ಬಾರಿ ವರ್ಲ್ಡ್ ವೈಡ್ ಆಡಿಷನ್ ಮಾಡುವ ಮೂಲಕ ಸರಿಗಮಪ ಹೊಸ ಇತಿಹಾಸವನ್ನು ದಾಖಲಿಸಲಿದೆ. ಸೀಸನ್ 20 ವರ್ಲ್ಡ್ ವೈಡ್ ಆಡಿಶನ್ ನಡೆಸಲಿದೆ ಎಂದು ಪ್ರೋಮೊವನ್ನ ಬಿಡುಗಡೆ ಮಾಡಿದೆ ಜೀ ವಾಹಿನಿ. ಆದರೆ ಈ ಬಗ್ಗೆ ಕೆಲವರು ಅಸಮಾಧಾನ ಹೊರ ಹಾಕಿದ್ದಾರೆ. ʻಯಾಕೆ ಕರ್ನಾಟಕದಲ್ಲಿ ಕನ್ನಡಿಗರು ಇಲ್ವ ವಿದೇಶಕ್ಕೆ ಬೇರೆ ಹೋಗಬೇಕʼಎಂದು ಕಮೆಂಟ್‌ ಮೂಲಕ ಪ್ರಶ್ನೆ ಕೇಳುತ್ತಿದ್ದಾರೆ. ʻʻನಮ್ಮ ದೇಶದ ಪ್ರತಿಭೆಗಳನ್ನ ಗುರುತಿಸುವುದು ಬಿಟ್ಟು, ಬೇರೆ ದೇಶದ ಪ್ರತಿಭೆಗಳಿಗೆ ಚಾನ್ಸ್ ಕೊಡಲು ಹೋಗುತ್ತಿದ್ದೀರಾ ಇದು ಯಾಕೋ ಸರಿ ಕಾಣುತ್ತಿಲ್ಲʼʼಎಂತಲೂ ಕಮೆಂಟ್‌ ಮಾಡಿದ್ದಾರೆ. ʻಕೆಲವರು ನಾವು ಮತ್ತೊಮ್ಮೆ ವೇದಿಕೆಯಲ್ಲಿ ಗಾಯಕ ರಾಜೇಶ್ ಕೃಷ್ಣನ್ ಅವರನ್ನು ಜಡ್ಜ್‌ ಆಗಿ ನೋಡಬೇಕುʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: Saregamapa Lil Champs-19 | ರಂಜಿಸಲು ಬರುತ್ತಿದ್ದಾರೆ ಲಿಟಲ್‌ ಚಾಂಪ್ಸ್‌: ಸೀಸನ್‌ 19ರ ಆಡಿಷನ್‌ ಶುರು

ಈ ಹಿಂದೆ ಸ್ಪರ್ಧಿಗಳಿಗೆ ಹಿರಿಯ ಹಾಡುಗಾರರನ್ನು ಮೆಂಟರ್ ಆಗಿ ನೇಮಕ ಮಾಡಿದ್ದರು. ಸ್ಪರ್ಧಿಗಳನ್ನು ಆಯಾ ವಾರಕ್ಕೆ ತಕ್ಕಂತೆ ರೆಡಿ ಮಾಡಬೇಕಿತ್ತು. ಸಂಗೀತದ ತರಬೇತಿ ನೀಡಬೇಕಿತ್ತು. ಈ ಬಾರಿ ಕೂಡ ಹೀಗಿರಲಿದೆಯಾ ಇಲ್ಲವಾ ಎಂಬುದು ಕಾದು ನೋಡಬೇಕಿದೆ.

Exit mobile version