Site icon Vistara News

BBK SEASON 10: ʻಬಿಗ್‌ ಬಾಸ್‌ʼ ಮುಗಿದ ಮೇಲೆ ಮುಂದೇನು? ವೀಕ್ಷಕರಿಗಿದೆ ಹೊಸ ಸರ್‌ಪ್ರೈಸ್‌!

Srigowri Karimani Serial And Nannamma Super Star Reality Show To After Bigg Boss colors Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) ಫಿನಾಲೆ  ಜನವರಿ 27 ಹಾಗೂ 28ರಂದು ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಸ್ಪರ್ಧಿಗಳ ಮಧ್ಯೆ ಪೈಪೋಟಿ ಹೆಚ್ಚಾಗಿದೆ. ಇದೀಗ ಬಿಗ್ ಬಾಸ್ ಮುಗಿದ ಬಳಿಕ ಸಾಲು ಸಾಲು ಧಾರಾವಾಹಿಗಳು ಬರಲು ಸಜ್ಜಾಗಿದೆ. ‘ಶ್ರೀಗೌರಿ’ ಧಾರಾವಾಹಿ ಡಿಸೆಂಬರ್ 28ರಂದು ಪ್ರಸಾರ ಆರಂಭಿಸಲಿದೆ. ಕರಿಮಣಿ’ ಹೆಸರಿನ ಧಾರಾವಾಹಿ ಕೂಡ ಪ್ರಸಾರ ಆರಂಭಿಸಲಿದೆ. ಈ ಧಾರಾವಾಹಿ ರಾತ್ರಿ 9:30ಕ್ಕೆ ಪ್ರಸಾರ ಕಾಣಲಿದೆ. ನಮ್ಮಮ್ಮ ಸೂಪರ್ ಸ್ಟಾರ್’ ಈ ಮೊದಲು ಎರಡು ಸೀಸನ್ ಪ್ರಸಾರ ಕಂಡು ಯಶಸ್ವಿ ಆಗಿದೆ.ಫೆಬ್ರವರಿ 3ರಿಂದ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಈ ರಿಯಾಲಿಟಿ ಶೋ ಪ್ರಸಾರ ಕಾಣಲಿದೆ.

‘ಶ್ರೀಗೌರಿ’ ಧಾರಾವಾಹಿ

ಮುಖ್ಯ ಭೂಮಿಕೆಯಲ್ಲಿ ‘ಕಮಲಿ’ ಧಾರಾವಾಹಿಯ ಅಮೂಲ್ಯ ಗೌಡ ಅಭಿನಯ ಮಾಡಿದ್ದಾರೆ. ಅಮೂಲ್ಯ ಮೊದಲು ʻಅನುರಾಗ ಸಂಗಮʼ ಎನ್ನುವ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು. ʻಸ್ವಾತಿ ಮುತ್ತುʼ, ʻಪುನರ್ ವಿವಾಹʼ, ʻಅರಮನೆʼ, ಧಾರಾವಾಹಿಯಲ್ಲಿ ಅಭಿನಯ ಮಾಡಿದ್ದಾರೆ. ಅಮೂಲ್ಯ ಗೌಡಗೆ ಹೆಚ್ಚು ಖ್ಯಾತಿ ತಂದುಕೊಟ್ಟ ಧಾರಾವಾಹಿ ಕಮಲಿ. ‘ಬಿಗ್ ಬಾಸ್ ಒಟಿಟಿ’ ಮೂಲಕ ಜನಪ್ರಿಯತೆ ಪಡೆದ ಅಮೂಲ್ಯ ಗೌಡ ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: BBK SEASON 10:  ಕಾರ್ತಿಕ್ ವಿರುದ್ಧ ತಿರುಗಿ ಬಿದ್ರಾ ನಮ್ರತಾ? ಸ್ನೇಹಕ್ಕೆ ಫುಲ್‌ಸ್ಟಾಪ್‌!

‘ಯಶೋದೆ’ ಧಾರಾವಾಹಿಯಲ್ಲಿ ನಟಿಸಿ ನಂತರ ಚಿತ್ರರಂಗದಿಂದ ದೂರವೇ ಇದ್ದ ಕಾರ್ತಿಕ್ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ತಂದೆ ಪಾತ್ರದಲ್ಲಿ ಸುನೀಲ್ ಪುರಾಣಿಕ್ ಅಭಿನಯಿಸಿದ್ದಾರೆ. ರಾತ್ರಿ 8.30ಕ್ಕೆ ‘ಅಂತರಪಟ’ ಪ್ರಸಾರ ಆಗುತ್ತಿತ್ತು. ಇದರ ಸಮಯ 10 ಗಂಟೆ ಆಗಿದೆ.

ಕರಿಮಣಿ

‘ ‘ಕರಿಮಣಿ’ ಹೆಸರಿನ ಧಾರಾವಾಹಿ ಕೂಡ ಪ್ರಸಾರ ಆರಂಭಿಸಲಿದೆ. ಈ ಧಾರಾವಾಹಿ ರಾತ್ರಿ 9:30ಕ್ಕೆ ಪ್ರಸಾರ ಕಾಣಲಿದೆ.

ನನ್ನಮ್ಮ ಸೂಪರ್ ಸ್ಟಾರ್ 3

ಅಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ʻನನ್ನಮ್ಮ ಸೂಪರ್ ಸ್ಟಾರ್ʼ (Nannamma Super Star) ಮತ್ತೆ ಬರುತ್ತಿದೆ. ಮಕ್ಕಳ ಮುದ್ದು ಮಾತುಗಳು , ಅವರ ಆಟಗಳು ನೋಡುರನ್ನು ರಂಜಿಸುತ್ತಲೇ ಬರುತ್ತಿದೆ. ಎರಡು ಸೀಸನ್‌ ಪ್ರಸಾರವಾದ ಬಳಿಕ ಈಗ ಮೂರನೇ ಸೀಸನ್‌ ಶುರುವಾಗುತ್ತಿದೆ. ಸದ್ದಿಲ್ಲದೇ ಕಲರ್ಸ್‌ ಕನ್ನಡ ಮೂರನೇ ಸೀಸನ್‌ ಬರುತ್ತಿದೆ ಎಂದು ಪ್ರೋಮೊ ಹಂಚಿಕೊಂಡಿದೆ. ಮೊದಲ ಸೀಸನ್‍ನಲ್ಲಿ ವನ್ಷಿಕಾ ಮತ್ತು ಯಶಸ್ವಿನಿ ಭಾಗವಹಿಸಿದ್ದರು. ವಿಜೇತರಾಗಿ ಹೊರಹೊಮ್ಮಿದ್ದರು. ಎರಡನೇ ಸೀಸನ್‌ನಲ್ಲಿ ಗ್ರಾಮೀಣ ಭಾಗದ ಪ್ರತಿಭೆಗೆ ಅಂದರೆ ಚೈತ್ರಾ ಮತ್ತು ಅವರ ಅವಳಿ ಮಕ್ಕಳು ಚಿರಂತ್-ಚಿನ್ಮಯ್ ವಿಜೇತರಾಗಿದ್ದರು.

ಎರಡನೇ ಸೀಸನ್‌ನಲ್ಲಿ ನಮ್ಮಮ್ಮ ಸೂಪರ್‌ ಸ್ಟಾರ್ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಅಮ್ಮ ಮಕ್ಕಳ ಜತೆಗೆ ಕಿರುತೆರೆಯ ಚಿನಕುರುಳಿ ಎಂತಲೇ ಖ್ಯಾತಿ ಪಡೆದ ವನ್ಷಿಕಾ ನಿರೂಪಕಿಯಾಗಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಅಷ್ಟೇ ಅಲ್ಲದೇ ಎರಡನೇ ಸೀಸನ್‌ನಲ್ಲಿ ನಮ್ಮಮ್ಮ ಸೂಪರ್ ಸ್ಟಾರ್ ಶೋ ಬಹಳ ವಿಶೇಷವಾಗಿತ್ತು. ಏಕೆಂದರೆ ಶೋನಲ್ಲಿ ಸಾಮಾನ್ಯರಿಗೂ ಅವಕಾಶ ನೀಡಲಾಗಿತ್ತು. `ನನ್ನಮ್ಮ ಸೂಪರ್ ಸ್ಟಾರ್’ ಸೀಸನ್ 2 ಗ್ರ್ಯಾಂಡ್ ಫಿನಾಲೆಗೆ 6 ಜೋಡಿಗಳು ಸೆಲೆಕ್ಟ್ ಆಗಿದ್ದರು. ಅದರಲ್ಲಿ ಎಲ್ಲರನ್ನೂ ಹಿಂದಿಕ್ಕಿ ಚೈತ್ರಾ ನನ್ನಮ್ಮ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದರು.ಸೃಜನ್ ಲೋಕೇಶ್, ಅನು ಪ್ರಭಾಕರ್, ತಾರಾ ಇದರ ಜಡ್ಜ್ ಸ್ಥಾನದಲ್ಲಿದ್ದಾರೆ. ಫೆಬ್ರವರಿ 3ರಿಂದ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಈ ರಿಯಾಲಿಟಿ ಶೋ ಪ್ರಸಾರ ಕಾಣಲಿದೆ.

Exit mobile version