`ಮನಸಾರೆ’, ‘ಮನಸೆಲ್ಲಾ ನೀನೆ’ ಧಾರಾವಾಹಿಯ ಖ್ಯಾತ ನಟ ಸುಜಯ್ ಹೆಗಡೆ ಅವರು ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಪ್ರೇರಣಾ (Prerana) ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಆಗಸ್ಟ್‌ನಲ್ಲಿ ಮದುವೆ ನೆರವೇರಲಿದೆ ಎಂದಿದ್ದಾರೆ. ಈ ಮೂಲಕ ಸುಜಯ್ ಬಾಳಿನಲ್ಲಿ ‘ಬಾಳ ಸಂಗಾತಿ’ ಆಗಮನ ಆಗಿದೆ.
ಸುಜಯ್ ಹೆಗಡೆ ಅವರು ‘ಆಕಾಶ ದೀಪ’, ‘ಗೋಕುಲದಲ್ಲಿ ಸೀತೆ’, ‘ಶನಿ’, ‘ಮನಸಾರೆ’, ‘ಮನಸೆಲ್ಲಾ ನೀನೆ’, ಕಥೆಯೊಂದು ಶುರುವಾಗಿದೆ‘’ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ‘ಮಾಣಿಕ್ಯ’, ‘ವಜ್ರಕಾಯ’, ‘ಮಿ ಎಲ್‌ಎಲ್ ಬಿ’ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ
ಮಾಧ್ಯಮವೊಂದಕ್ಕೆ ಸುಜಯ್ ಹೆಗಡೆ ಮಾಹಿತಿ ನೀಡಿ ‘ನಮ್ಮದು ಪ್ರೇಮ ವಿವಾಹವಲ್ಲ, ಅರೇಂಜ್ಡ್ ಮ್ಯಾರೇಜ್. ನನ್ನ ಪ್ರೇರಣಾ ನಮ್ಮ ಫ್ಯಾಮಿಲಿ ಫ್ರೆಂಡ್ʼʼಎಂದು ಹೇಳಿಕೊಂಡಿದ್ದಾರೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾದ ಸುಜಯ್ ಹೆಗಡೆ ಸದ್ಯಕ್ಕೆ ಬೆಂಗಳೂರು ನಿವಾಸಿ.