Site icon Vistara News

Sukrutha Nag: ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರಾ ಸುಕೃತಾ ನಾಗ್? ಅಸಲಿ ಸತ್ಯವೇನು?

Sukrutha Nag Marriage Gossip

ಬೆಂಗಳೂರು: ʻಅಗ್ನಿ ಸಾಕ್ಷಿʼ ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ಸುಕೃತಾ ನಾಗ್ (Sukrutha Nag) ಸದ್ಯ ಲಕ್ಷಣ ಧಾರಾವಾಹಿಯಲ್ಲಿ ಕೆಡಿ ಶ್ವೇತಾರಾಗಿ ಮಿಂಚುತ್ತಿದ್ದಾರೆ. ಇದೀಗ ನಟಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಕುಟುಂಬಸ್ಥರು ನೋಡಿರುವ ಸಿಡ್ನಿ ಹುಡುಗನ ಜತೆ ಸಪ್ತಪದಿ ತುಳಿಯುತ್ತಿರುವುದಾಗಿ ತಮ್ಮ ಯುಟ್ಯೂಬ್‌ ಚಾನಲ್‌ ಮೂಲಕ ಹೇಳಿದ್ದಾರೆ. ಆದರೆ ಈ ವಿಡಿಯೊ ಏಪ್ರಿಲ್‌ ಫೂಲ್‌ ದಿನವೇ ಪೋಸ್ಟ್‌ ಮಾಡಿದ್ದು, ನಟಿ ಮದುವೆಯಾಗುತ್ತಿದ್ದಾರಾ ಇಲ್ಲವಾ? ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.

ಸುಕೃತಾ ನಾಗ್‌ ತನ್ನ ಯುಟ್ಯೂಬ್‌ನಲ್ಲಿ ಎಲ್ಲೇ ಹೋದರು ನನಗೆ ಮದುವೆ ಯಾವಾಗ ಎಂದು ಕೇಳುತ್ತಲೇ ಇರುತ್ತಾರೆ. ಅದಕ್ಕಾಗಿ ಮದುವೆ ಬಗ್ಗೆ ಧ್ವನಿ ಎತ್ತಿರುವೆ ಎಂದರು. ಇದೀಗ ನಟಿ ತಾವು ಸೀರಿಯಲ್ ಫ್ರೆಂಡ್ಸ್, ಬೆಸ್ಟ್ ಫ್ರೆಂಡ್‌ಗೆ ಕಾಲ್ ಮಾಡಿ ಈ ವಿಚಾರ ತಿಳಿಸಿದ್ದಾರೆ. ಕರೆಯಲ್ಲಿ ಸ್ನೇಹಿತೆಯರೊಬ್ಬರಿಗೆ ʻʻತಾನು ಸಿಡ್ನಿ ಹುಡುಗನನ್ನು ಮದುವೆ ಆಗುತ್ತಿದ್ದೇನೆ. ಅಮ್ಮನೇ ನೋಡಿರುವ ಹುಡುಗ. ಈ ವರ್ಷದ ಕೊನೆಯಲ್ಲಿ ಮದುವೆ. ಅರೇಂಜ್ಡ್ ಮ್ಯಾರೇಜ್‌ ಇದುʼʼ ಎಂದು ಹೇಳಿದ್ದಾರೆ. ಫ್ರೆಂಡ್ಸ್ ಎಲ್ಲ ಸಖತ್‌ ಖುಷಿಯಾಗಿ ವಿಶ್ ಮಾಡಿದ್ದಾರೆ. ಆದರೆ ಒಬ್ಬ ಬೆಸ್ಟ್ ಫ್ರೆಂಡ್ ಮಾತ್ರ ಈ ವಿಚಾರಕ್ಕೆ ಚೆನ್ನಾಗಿಯೇ ಕ್ಲಾಸ್ ತಗೊಂಡಿದ್ದಾರೆ. ಸುಕೃತಾ ಕಾಲ್ ಮಾಡಿ ತನ್ನ ಮದುವೆ ವಿಚಾರ ತಿಳಿಸಿದ್ದು ‘ಲಕ್ಷಣ’ ಸೀರಿಯಲ್‌ನಲ್ಲಿ ಡೆವಿಲ್ ಭಾರ್ಗವಿ ಪಾತ್ರದಲ್ಲಿ ಮಿಂಚುತ್ತಿರುವ ಪ್ರಿಯಾ, ವಿಜಯಲಕ್ಷ್ಮಿ ಹಾಗೂ ಆಕೆಯ ಸ್ನೇಹಿತರಿಗೆ.

ಇದನ್ನೂ ಓದಿ: Vaishnavi Gowda: ಕಾನೂನು ಪದವಿ ಪಡೆದ ಕಿರುತೆರೆ ನಟಿ ವೈಷ್ಣವಿ ಗೌಡ ತಾಯಿ

ಸುಕೃತಾ ಈ ವಿಡಿಯೊ ಮಾಡಿರುವುದು ಏಪ್ರಿಲ್‌ 1ಕ್ಕೆ . ಹೀಗಾಗಿ ನಟಿ ಮದುವೆ ಎಂದು ಹೇಳಿ ಎಲ್ಲರಿಗೂ ಬಕ್ರಾ ಮಾಡಿದ್ದಾರೆ. ಎಲ್ಲರಿಗೂ ಫೂಲ್ ಮಾಡಿದ್ದಾರೆ. ನಟಿ ಈ ರೀತಿ ಪೋಸ್ಟ್‌ ಹಾಕುತ್ತಿದ್ದಂತೆ ನೆಟ್ಟಿಗರು ಕಾಮೆಂಟ್‌ ಮೂಲಕ ʻʻಸರಿಯಾಗಿ ಮಾಡಿದ್ದೀರಿ ಮೇಡಮ್‌, ಒಳ್ಳೆಯ ವಿಷಯ ಆಯ್ದುಕೊಂಡಿದ್ದೀರಿʼʼ ಎಂದಿದ್ದಾರೆ.

ಕಾದಂಬರಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸುಕೃತಾ ‘ಶಿವಲೀಲಾಮೃತ’, ‘ಮಹಾಭಾರತ’, ‘ಪಡುವಾರಳ್ಳಿ ಕಥೆಗಳು’, ‘ಪುರುಷೋತ್ತಮ’, ‘ಸರಸ್ವತಿ’ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇಲ್ಲಿಯವರೆಗೆ 26 ಸೀರಿಯಲ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Exit mobile version