Site icon Vistara News

Sushmitha And Jagappa: ‘ಮಜಾಭಾರತ’ ಸುಶ್ಮಿತಾ – ಜಗಪ್ಪ ಮೆಹಂದಿ ಸಮಾರಂಭದ ಫೋಟೊಗಳು ವೈರಲ್‌!

Sushmitha And Jagappa mehendi celebration

‘ಮಜಾಭಾರತ ಹಾಗೂ ಗಿಚ್ಚಿ ಗಿಲಿ ಗಿಲಿ ಕಾಮಿಡಿ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ಸುಶ್ಮಿತಾ – ಜಗಪ್ಪ (Sushmitha And Jagappa) ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.

ಇದೀಗ ಪ್ರೀತಿಗೆ ಅಧಿಕೃತ ಮುದ್ರೆ ಇಡಲು ಜೋಡಿ ಸಜ್ಜಾಗಿದೆ. ಸುಶ್ಮಿತಾ ಹಾಗೂ ಜಗಪ್ಪ ಮದುವೆ ನಿಶ್ಚಯವಾಗಿದೆ. ಈಗಾಗಲೇ ವಿವಾಹ ಪೂರ್ವ ಶಾಸ್ತ್ರಗಳು ಆರಂಭವಾಗಿದ್ದು, ಮೆಹಂದಿ ಸಮಾರಂಭ ಅದ್ಧೂರಿಯಾಗಿ ಜರುಗಿದೆ. ಇದೀಗ ಈ ಪೋಟೊಗಳನ್ನು ಜೋಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಮಜಾ ಭಾರತ ಹಾಸ್ಯ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದ ಜಗಪ್ಪ ಮತ್ತು ಸುಶ್ಮಿತಾ 6 ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ವಿಚಾರವನ್ನು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್‌ ಕಾರ್ಯಕ್ರಮದಲ್ಲಿ ರಿವೀಲ್ ಮಾಡಿದ್ದರು. ಅಲ್ಲದೆ ಗುರು ಹಿರಿಯ ಮುಂದೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಇದೀಗ ವಿವಾಹಕ್ಕೆ ಜೋಡಿ ಸಜ್ಜಾಗಿದೆ.

ಇದನ್ನೂ ಓದಿ: Abhishek Ambareesh Wedding: ಅಭಿಷೇಕ್ ಅಂಬರೀಶ್‌ ಕೈಯಲ್ಲಿ ಮೆಹೆಂದಿ; ಪ್ರೀತಿಯಿಂದ ಬರೆಸಿಕೊಂಡ ಹೆಸರು ಇವು!

ಜಗಪ್ಪ ಭರ್ಜರಿ ಬ್ಯಾಚುಲರ್ಸ್‌ ಕಾರ್ಯಕ್ರಮದಲ್ಲಿ ಕೈಯಲ್ಲಿ 5 ಗುಲಾಬಿ ಹಿಡಿದ ಜಗಪ್ಪ ಡಿಫರೆಂಟ್ ಡಿಫರೆಂಟ್ ಆಗಿ ಪ್ರಪೋಸ್ ಮಾಡಿದ್ದರು.

ಈ ಹಿಂದೆ ಜೋಡಿ ಒಟ್ಟಿಗೆ ವಿಡಿಯೋಗಳನ್ನ ಮಾಡಿ ಪೋಸ್ಟ್‌ ಮಾಡುತ್ತಿತ್ತು. ನಿಜ ಜೀವನದಲ್ಲೂ ಈ ಜೋಡಿ ಒಂದಾಗ್ಲಿ ಎಂದು ಇಬ್ಬರ ಫ್ಯಾನ್ಸ್‌ ಕಮೆಂಟ್‌ ಮೂಲಕ ವ್ಯಕ್ತಪಡಿಸುತ್ತಿದ್ದರು.ನೀವಿಬ್ರು ಯಾಕೆ ಮದುವೆಯಾಗಬಾರದು ಎಂದು ಫ್ಯಾನ್ಸ್‌ ಕೇಳಿದಾಗ ಎಲ್ಲಿಯೂ ಸಣ್ಣ ಸುಳಿವನ್ನು ಬಿಟ್ಟುಕೊಡದೆ, ಕೊನೆಗೂ ಹಸೆಮಣೆ ಏರುತ್ತಿದೆ ಜೋಡಿ.

ಬ್ಯೂಟಿಫುಲ್ ಜೋಡಿಗೆ ಅಭಿನಂದನೆಗಳು ಎಂದು ಫ್ಯಾನ್ಸ್‌ ಶುಭ ಹಾರೈಸುತ್ತಿದ್ದಾರೆ.

Exit mobile version