ಬೆಂಗಳೂರು: ‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ (Taarak Mehta Ka Ooltah Chashmah) ಧಾರಾವಾಹಿಯ ನಟ ಗುರುಚರಣ್ ಸಿಂಗ್ (Gurucharan Singh ) ನಾಪತ್ತೆಯಾಗಿದ್ದಾರೆ. ಕೆಲಸದ ನಿಮಿತ್ತ ದೆಹಲಿಯಿಂದ ಮುಂಬೈ ತೆರಳಿದ ನಟ ನಾಪತ್ತೆಯಾಗಿದ್ದಾರೆ ಎಂದು ಗುರುಚರಣ್ ಸಿಂಗ್ ತಂದೆ ಹರ್ಜಿತ್ ಸಿಂಗ್ ದೂರು ದಾಖಲಿಸಿದ್ದಾರೆ.
ಎಪ್ರಿಲ್ 22ರಂದು ಗುರುಚರಣ್ ಸಿಂಗ್ ಶೂಟಿಂಗ್ ಸೇರಿದಂತೆ ಇತರ ಕೆಲಸದ ನಿಮಿತ್ತ ದೆಹಲಿಯ ತಮ್ಮ ನಿವಾಸದಿಂದ ಮುಂಬೈಗೆ ತೆರಳಲು ವಿಮಾನ ನಿಲ್ದಾಕ್ಕೆ ತೆರಳಿದ್ದಾರೆ. 50 ವರ್ಷದ ಗುರುಚರಣ್ ಸಿಂಗ್ ಬೆಳಗ್ಗೆ 8.30ಕ್ಕೆ ಮನೆಯಿಂದ ತೆರಳಿದ್ದಾರೆ. ನಟ ಮುಂಬೈಗೆ ತಲುಪಿಲ್ಲ ಎನ್ನಲಾಗಿದೆ. ʻʻಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಮನೆಗೂ ಕೂಡ ಹಿಂತಿರುಗಿಲ್ಲ. ಗುರುಚರಣ್ ಸಿಂಗ್ ಸಂಪರ್ಕಕ್ಕೆ ಸಿಕ್ಕಿಲ್ಲʼʼ ಎಂದು ತಂದೆ ಹರ್ಜಿತ್ ಸಿಂಗ್ ದೂರು ದಾಖಲಿಸಿದ್ದಾರೆ.
ಡಿಸಿಪಿ ರೋಹಿತ್ ಮೀನಾ ಈ ಬಗ್ಗೆ ಮಾಹಿತಿ ಹಂಚಿಕೊಂಡು ʻʻಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ. ಪ್ರಮುಖ ಸುಳಿವುಗಳು ಸಿಕ್ಕಿವೆʼʼ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಗುರುಚರಣ್ ಅವರ ತಂದೆ ಪೊಲೀಸರಿಗೆ ಮಗ ಮಾನಸಿಕವಾಗಿ ಸ್ಥಿರವಾಗಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Snake Bite: ತೋಟದ ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿಯ ಕಚ್ಚಿದ ಹಾವು; ಕ್ಷಣಾರ್ಧದಲ್ಲೆ ಹಾರಿಹೋಯ್ತು ಪ್ರಾಣ
#WATCH | Delhi: On actor Gurucharan Singh aka Roshan Singh Sodhi missing since 22 April, DCP South-west Rohit Meena says, "Gurucharan Singh's family lodged a complaint with us that he left for Mumbai on 22 April at 8:30 pm. He has been missing since then. We have registered a… pic.twitter.com/CJKv0y5Fp6
— ANI (@ANI) April 27, 2024
ಕೆಲ ವರ್ಷಗಳ ಹಿಂದೆ ಗುರುಚರಣ್ ಸಿಂಗ್ ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಧಾರವಾಹಿಯಿಂದ ಹೊರಬಂದಿದ್ದರು. ತಂದೆಯ ಅನಾರೋಗ್ಯ, ಕುಟುಂಬದ ನಿರ್ವಹಣೆ ಕಾರಣದಿಂದ ಸೀರಿಯಲ್‌ನಿಂದ ಹೊರಬಂದು ಕುಟುಂಬದ ಜತೆ ಹೆಚ್ಚಿನ ಸಮಯ ಕಳೆಯುತ್ತಿದ್ದರು. ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಧಾರಾವಾಹಿ 2022 ಜುಲೈ 2ಕ್ಕೆ 3500 ಸಂಚಿಕೆಗಳನ್ನು ಕಂಡಿದೆ.