ಬೆಂಗಳೂರು: ವೀಕೆಂಡ್ ವಿತ್ ರಮೇಶ್ ಶೋ (weekend with ramesh) ಮೊದಲ ಸೀಸನ್ನಿಂದ ಐದನೇ ಸೀಸನ್ವರೆಗೆ ಒಟ್ಟೂ 100 ಸಾಧಕರು ಬಂದು ಹೋಗಿದ್ದಾರೆ. 100ನೇ ಸಾಧಕನಾಗಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಮಿಸಿದ್ದರು. ಮೋಹಕ ತಾರೆ ರಮ್ಯಾ ಅವರಿಂದ ಶುರುವಾಗಿದ್ದ 5 ನೇ ಸೀಸನ್ ವೀಕ್ಷಕರಿಗೆ ವಿಶಿಷ್ಟವಾದ ಮನರಂಜನೆ ಸಿಕ್ಕಿದೆ.
ಪ್ರತಿವಾರ ಸಿನಿಮಾ, ಸಾಹಿತ್ಯ, ವೈದ್ಯಕೀಯ ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಿಂದ ಸಾಧಕರನ್ನು ಕರೆ ತರಲಾಗಿತ್ತು. ಆದರೀಗ ಸೀಸನ್ 6 ಯಾವಾಗ ಎಂದು ವೀಕ್ಷಕರು ಕೇಳಲು ಆರಂಭಿಸಿದ್ದಾರೆ. ಇದೂವರೆಗೂ ಸುಮಾರು 5 ಸೀಸನ್‌ಗಳು ಬಂದಿದ್ದು, ನೂರು ಸಾಧಕರು ತಮ್ಮ ಸಾಧನೆಯನ್ನು ಅನಾವರಣ ಮಾಡಿದ್ದಾರೆ. ಹೀಗಿದ್ದೂ, ಇನ್ನೂ ನಾಲ್ಕೈದು ವರ್ಷ ‘ವೀಕೆಂಡ್ ವಿತ್ ರಮೇಶ್’ ಬೇಡ ಎನ್ನುವ ನಿರ್ಧಾರಕ್ಕೆ ಜೀ ಕನ್ನಡ ಬಂದಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ‘ವೀಕೆಂಡ್ ವಿತ್ ರಮೇಶ್’ ಸೀಸನ್ 5ಗೆ ಸಾಧಕರು ಸಿಕ್ಕಿರಲಿಲ್ಲ. ಕಾರ್ಯಕ್ರಮಕ್ಕೆ ಅತಿಥಿಗಳನ್ನು ಹುಡುಕುವುದೇ ದೊಡ್ಡ ತಲೆನೋವಾಗಿತ್ತು. ಅಲ್ಲದೆ, ಸೀಸನ್ 5ಗೆ ಬರಬೇಕಿದ್ದ ಕೆಲ ಸಾಧಕರೇ ಬರಲಿಲ್ಲ. ಹೀಗಾಗಿ 100ನೇ ಸಂಚಿಕೆ ಮೂಲವೇ ಈ ಸೀಸನ್ ಮುಕ್ತಾಯ ಮಾಡಲಾಗಿದೆ. ಇದೊಂದೇ ಕಾರಣಕ್ಕೆ ನಾಲ್ಕೈದು ವರ್ಷ ಬ್ರೇಕ್ ಕೊಟ್ಟು ಮತ್ತೊಂದಿಷ್ಟು ರಿಸರ್ಚ್ ಮಾಡಿ ಹೊಸ ರೂಪದೊಂದಿಗೆ ಮರಳುವ ಸಾಧ್ಯತೆಯಿದೆʼʼಎಂದು ಮಾಧ್ಯಮವೊಂದು ವರದಿ ಮಾಡಿದೆ.
ಇದನ್ನೂ ಓದಿ: Weekend With Ramesh: ಸಾಧಕರ ಕುರ್ಚಿ ಏರಿದ ಟ್ರಬಲ್ ಶೂಟರ್ ಡಿಕೆಶಿ; ಜೂ.10, 11ಕ್ಕೆ ಪ್ರಸಾರ
ಜೀ ಕನ್ನಡ ವಾಹಿನಿ ಈಗಾಗಲೇ ಹಲವಾರು ಹೊಸ ಧಾರಾವಾಹಿಗಳನು, ರಿಯಾಲಿಟಿ ಶೋಗಳನ್ನು ಪರಿಚಯಿಸುತ್ತಿದೆ. ಈಗಾಗಲೇ ‘ಭರ್ಜರಿ ಬ್ಯಾಚುಲರ್’ ರಿಯಾಲಿಟಿ ಶೋವನ್ನು ಪರಿಚಯ ಮಾಡುತ್ತಿದೆ. ಇದರೊಂದಿಗೆ ‘ಸರಿಗಮಪ’, ‘ಲಿಟಲ್ ಚಾಂಪ್ಸ್’, ‘ಕಾಮಿಡಿ ಕಿಲಾಡಿಗಳು’, ‘ಡ್ರಾಮ ಜೂನಿಯರ್ಸ್’ ಸೇರಿದಂತೆ ಹಲವು ಕಾರ್ಯಕ್ರಮಗಳು ರೆಗ್ಯೂಲರ್ ಆಗಿರುತ್ತದೆ. ಆದರೆ, ನಾಲ್ಕೈದು ವರ್ಷ ‘ವೀಕೆಂಡ್ ವಿತ್ ರಮೇಶ್’ ಸೀಸನ್ 6 ಬರೋದು ಮಾತ್ರ ಅನುಮಾನ ಎನ್ನಲಾಗಿದೆ.
ರಮ್ಯಾ,, ಪ್ರಭುದೇವ, ಸಿ ಎನ್ ಮಂಜುನಾಥ್, ದತ್ತಣ್ಣ, ಧನಂಜಯ, ಅವಿನಾಶ್, ಮಂಡ್ಯ ರಮೇಶ್, ಸಿಹಿ ಕಹಿ ಚಂದ್ರು, ಗುರುರಾಜ ಕರಜಗಿ, ಲವ್ಲಿ ಸ್ಟಾರ್ ಪ್ರೇಮ್, ಚಿನ್ನಿ ಪ್ರಕಾಶ್, ನಾ. ಸೋಮೇಶ್ವರ, ವಿ ನಾಗೇಂದ್ರ ಪ್ರಸಾದ್, ದೊಡ್ಡರಂಗೇಗೌಡ, ಜೈ ಜಗದೀಶ್, ಡಿ ಕೆ ಶಿವಕುಮಾರ್ ಸೀಸನ್ 5ರಲ್ಲಿ ಭಾಗಿಯಾಗಿದ್ದರು.