ಬೆಂಗಳೂರು: ಕಿರುತೆರೆ ನಟಿ ಲಕ್ಷ್ಮೀ ಸಿದ್ದಯ್ಯ (Lakshmi Siddaiah) ಆ್ಯಕ್ಸಿಡೆಂಟ್ ಮಾಡಿ ಯುವತಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಟಿ ಹಾಗೂ ಆತನ ಸಹಚರನಿಂದ ಹಲ್ಲೆ ನಡೆದಿದ್ದು, ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ಈ ಘಟನೆ ಸಂಭವಿಸಿದೆ. ಕಳೆದ ಡಿಸೆಂಬರ್ 6ನೇ ತಾರೀಖು ಈ ಘಟನೆ ಸಂಭವಿಸಿದೆ.
ಮಾಧುರಿ ಎಂಬ ಯುವತಿ ತನ್ನ ಸೋದರಿ ಐಶ್ವರ್ಯ ಜತೆ ಯಮಹಾ ಫೆಸಿನೋ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಲಕ್ಷ್ಮಿ ಸಿದ್ದಯ್ಯ ಕಾರು ಡಿಕ್ಕಿ ಹೊಡಿದಿದೆ. ಇಷ್ಟಾದ ಬಳಿಕ ನಟಿ ಲಕ್ಷ್ಮೀ ಸಿದ್ದಯ್ಯ ಅವರು ಕಿರಿಕ್ ಮಾಡಿ ಮಾಧುರಿ ಹಾಗೂ ಐಶ್ವರ್ಯ ಮೇಲೆ ಹಲ್ಲೆ ನಡೆಸಿದ್ದಾರೆ. ಲಕ್ಷ್ಮಿ ಹಾಗೂ ಅವರ ಸಹಚರ ಆನಂದ್ ಕುಮಾರ್ ಎಂಬಾತನಿಂದ ಹಲ್ಲೆ ನಡೆದಿದ್ದಾಗಿ ಯುವತಿಯರು ಹೇಳಿಕೊಂಡಿದ್ದಾರೆ.
ಹಲ್ಲೆ ನಡೆಸಿ ಮಾಧುರಿ ಮೊಬೈಲ್ವನ್ನು ಆನಂದ್ ಕುಮಾರ್ ಕಸಿದು ಕೊಂಡಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಫ್ ಐ ಆರ್ ಕೂಡ ದಾಖಲಾಗಿತ್ತು. ಆದರೆ 3 ತಿಂಗಳಾದರೂ ಈ ಬಗ್ಗೆ ಪೊಲೀಸರು ಕ್ರಮ ಕೈಗೊಂಡಿಲ್ಲ. ಅಷ್ಟೇ ಅಲ್ಲದೇ ಮೊಬೈಲ್ ಸಹ ವಾಪಾಸ್ ಕೊಡಿಸಿಲ್ಲ ಎಂದು ಯುವತಿಯರು ಹೇಳಿಕೆ ನೀಡಿದ್ದಾರೆ. ಠಾಣೆಗೆ ಎಷ್ಟೇ ಅಲೆದಾರೂ ಪೊಲೀಸರು ಕ್ಯಾರೆ ಎನ್ನುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Karataka Damanaka: ಇಂದು ʻರಂಗನಾಯಕʼ-ʻಕರಟಕ ದಮನಕʼ ಒಂದೇ ದಿನ ರಿಲೀಸ್; ಯಾವ ಸಿನಿಮಾ ನೋಡುತ್ತೀರಿ?
ಲಕ್ಷ್ಮೀ ಸಿದ್ದಯ್ಯ ʻರಾಧಾ’ ಧಾರಾವಾಹಿಯಲ್ಲಿ ಇವರು ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಲ್ಲಿವಯವರೆಗೆ ಲಕ್ಷ್ಮೀ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ‘ಬಿದಿಗೆ ಚಂದ್ರಮ’, ‘ಮಾಂಗಲ್ಯ’, ‘ಕದನ’, ‘ಸಂಬಂಧ’ ಮುಂತಾದ ಧಾರಾವಾಹಿಗಳಲ್ಲಿ ಲಕ್ಷ್ಮೀ ನಟಿಸಿದ್ದರು. ಅಷ್ಟೇ ಅಲ್ಲದೆ ಇವರು 20ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ನಟನೆ ಕ್ಷೇತ್ರಕ್ಕೆ ಬಂದು 15 ವರ್ಷಗಳಾಯ್ತು. ಕೆಲ ವರ್ಷಗಳಿಂದ ಅವರು ಮೇಲಿಂದ ಮೇಲೆ ಧಾರಾವಾಹಿಗಳಲ್ಲಿ ತಾಯಿ ಪಾತ್ರದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ.