ಬೆಂಗಳೂರು: ‘ಪುಟ್ಟಕ್ಕನ ಮಕ್ಕಳು’ (Puttakkana Makkalu Serial) ಧಾರಾವಾಹಿಯು ಟಿಆರ್‌ಪಿಯಲ್ಲಿ (Kannada Serials TRP) ಮೊದಲ ಸ್ಥಾನದಲ್ಲಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ಧಾರಾವಾಹಿಯ ಟಿಆರ್‌ಪಿ ಹೆಚ್ಚಿದೆ. ಈ ಬಾರಿ ಜೀ ಕನ್ನಡ ಧಾರಾವಾಹಿಗಳಾದ ಸೀತಾ ರಾಮ ಹಾಗೂ ಗಟ್ಟಿಮೇಳ ನಡುವೆ ಭರ್ಜರಿ ಪೈಪೋಟಿ ಇದೆ. ಈ ವಾರದ ಟಿಆರ್‌ಪಿ ಡಿಟೇಲ್ಸ್ ಇಲ್ಲಿದೆ.
ಪುಟ್ಟಕ್ಕನ ಮಕ್ಕಳು
ಉಮಾಶ್ರೀ ಮೊದಲಾದವರು ನಟಿಸುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಟಿಆರ್‌ಪಿ ಹೆಚ್ಚಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಈ ವಾರ ಕೊಂಚ ಸುಧಾರಿಸಿದೆ. ಪುಟ್ಟಕ್ಕನ ಕಿರಿಯ ಮಗಳು ಸುಮ ಸದ್ಯ ಕಾಲೇಜಿಗೆ ಎಂಟ್ರಿ ಕೊಟ್ಟಿದ್ದಾಳೆ. ಕಾಲು ಕೆರೆದುಕೊಂಡು ಜಗಳಕ್ಕೆ ನಿಂತ ಪ್ಯಾಟೆ ಹುಡುಗಿ ಶಿವಾನಿಗೆ ಬೆವರಿಳಿಸಿದ್ದಾಳೆ. ರಮೇಶ್ ಪಂಡಿತ್, ಉಮಾಶ್ರೀ, ಅಕ್ಷರಾ, ಸಂಜನಾ ಬುರ್ಲಿ, ಮಂಜು ಭಾಷಿಣಿ, ಹಂಸ, ಧನುಷ್, ಸೂರಜ್ ಹೊಳ್ಳ, ಪವನ್ ಕುಮಾರ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ.
ಗಟ್ಟಿಮೇಳ-ಸೀತಾ ರಾಮ
‘ಗಟ್ಟಿಮೇಳ’ ಹಾಗೂ ‘ಸೀತಾ ರಾಮ’ ಧಾರಾವಾಹಿಗಳು ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿವೆ. ಈ ಧಾರಾವಾಹಿಗಳಿಗೆ ಭರ್ಜರಿ ಟಿಆರ್‌ಪಿ ಸಿಗುತ್ತಿದೆ. ‘ಸೀತಾ ರಾಮ’ ಧಾರಾವಾಹಿಯಲ್ಲಿ ಗಗನ್ ಚಿನ್ನಪ್ಪ, ವೈಷ್ಣವಿ ಗೌಡ ಮೊದಲಾದವರು ನಟಿಸಿದ್ದಾರೆ. ಸದ್ಯ ಸಹಾಯ ಬೇಡ ಎಂದು ಹೇಳುವ ರೀತಿಯಲ್ಲೂ.. ರಾಮನ ಮನಸ್ಸು ಗೆದ್ದಿದ್ದಾಳೆ ಸೀತಾ. ರಾಮನಿಗೆ ಸೀತಾ ಮೇಲೆ ಪ್ರೀತಿವಾಗುತ್ತಾ ಎಂಬುದು ಕಾದು ನೋಡಬೇಕಿದೆ. ಗಟ್ಟಿಮೇಲದಲ್ಲಿ ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್, ಸುಧಾ ನರಸಿಂಹರಾಜು ಮೊದಲಾದವರು ನಟಿಸಿದ್ದಾರೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.
ಇದನ್ನೂ ಓದಿ: Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!
ಶ್ರೀರಸ್ತು ಶುಭಮಸ್ತು
ತುಳಸಿ ಕೊಟ್ಟ ಉತ್ತರ ಎಲ್ಲರ ಬಾಯಿ ಕಟ್ಟಿಹಾಕಿದೆ. ತುಳಸಿ ಈಗ ಮುಂಚಿನಂತಲ್ಲ. ಅವಿನಾಶ್ ತುಳಸಿ ಹತ್ತಿರವಾಗುತ್ತಿದ್ದಾರೆ. ಈ ಧಾರಾವಾಹಿ ಇದೀಗ ಮೂರನೇ ಸ್ಥಾನದಲ್ಲಿದೆ.
ಸತ್ಯ
ಸತ್ಯ ಧಾರಾವಾಹಿ ಈ ನಡುವೆ ಒಳ್ಳೆಯ ಟಿಆರ್‌ಪಿ ಪಡೆದು ಮುನ್ನುಗ್ಗುತ್ತಿದೆ. ಸತ್ಯ ಮತ್ತು ಅತ್ತೆಯ ನಡುವೆ ಬಾಂಧವ್ಯ ಹೆಚ್ಚಾಗಿದೆ. ಅಷ್ಟೇ ಅಲ್ಲದೇ ಲಕ್ಷ್ಮಣ ಇನ್ನೊಂದು ಮದುವೆಯಾಗಿರುವ ಬಗ್ಗೆ ಕಥೆಯೂ ಸಾಗುತ್ತಿದೆ. ಇದೀಗ ಧಾರಾವಾಹಿ ನಾಲ್ಕನೇ ಸ್ಥಾನದಲ್ಲಿದೆ.
ಇದನ್ನೂ ಓದಿ: Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್!
ಅಮೃತಧಾರೆ
ಒಂಟಿ ಜೀವಗಳ ಜಂಟಿ ಪಯಣ ಒಲವ ‘ಅಮೃತಧಾರೆ’ಗೆ 100 ಸಂಚಿಕೆಗಳ ಸಂಭ್ರಮ. ಧಾರಾವಾಹಿ ಐದನೇ ಸ್ಥಾನದಲ್ಲಿದೆ. ಗೌತಮ್ ಹಾಗೂ ಭೂಮಿಕಾ ಅರ್ಥ ಮಾಡಿಕೊಳ್ಳಲು ಶುರು ಮಾಡಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.