Site icon Vistara News

Udaya Tv Kannada | ಆಗಸ್ಟ್‌ 15ರಿಂದ ಬರುತ್ತಿದೆ ಹೊಚ್ಚ ಹೊಸ ಧಾರಾವಾಹಿ ಜನನಿ

Udaya Tv Kannada

ಬೆಂಗಳೂರು : ಉದಯ ವಾಹಿನಿಯು ಸೇವಂತಿ, ಸುಂದರಿ, ನೇತ್ರಾವತಿ, ಗೌರಿಪುರದ ಗಯ್ಯಾಳಿಗಳು, ನಯನತಾರ, ರಾಧಿಕಾದಂತಹ ಹಲವಾರು ವಿಭಿನ್ನ ಕುತೂಹಲಕಾರಿ ಕಥೆಗಳನ್ನು ಒಳಗೊಂಡ ಧಾರಾವಾಹಿಗಳನ್ನು ನೀಡಿ ಜನರನ್ನು ಸೆಳೆದಿದೆ. ಇದೀಗ ಉದಯ ವಾಹಿನಿ ʻಜನನಿʼ ಎಂಬ ಹೊಚ್ಚ ಹೊಸ ಧಾರಾವಾಹಿಯನ್ನು ವೀಕ್ಷಕರಿಗೆ ನೀಡಲಿದೆ.

“ಜನನಿ” ಕೌಟುಂಬಿಕ ಆಧಾರಿತ ಧಾರಾವಾಹಿ. ಹೆಣ್ಣು ಮಗಳೊಬ್ಬಳು ಸಮಾಜದಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾಳೆ, ಹಾಗೇ ಹೇಗೆ ಸ್ಫೂರ್ತಿ ಆಗುತ್ತಾಳೆ ಎಂಬ ಕಥಾಹಂದರವನ್ನು ಹೊಂದಿದೆ.

ಕಥಾನಾಯಕಿ ಜನನಿಯ ತಂದೆ ರಾತ್ರಿ ಹಗಲೆನ್ನದೆ ಬಹಳ ಕಷ್ಟ ಪಟ್ಟು ತನ್ನ ಮಗಳು ದೊಡ್ಡ ಸಾಧಕಿಯಾಗಬೇಕೆಂದು ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸುತ್ತಾರೆ. ವಿದ್ಯಾಭ್ಯಾಸ ಮುಗಿದ ತಕ್ಷಣವೇ ಕಾರಣಾಂತರಗಳಿಂದ ಅವಳ ಮದುವೆಯಾಗುತ್ತದೆ. ಅವಳು ಬಹಳ ನಿರೀಕ್ಷೆಯಿಂದ ತನ್ನ ಗುರಿಯನ್ನು ಹೊತ್ತು ಮದುವೆ ಮಾಡಿಕೊಂಡು ಹೋಗುತ್ತಾಳೆ. ಈ ಕಥೆಯಲ್ಲಿ ಒಂದು ಹೆಣ್ಣು ತನ್ನಲ್ಲಿರುವ ಪ್ರತಿಭೆಯಿಂದ ತನ್ನ ಗುರಿಯನ್ನು ಮುಟ್ಟಲು ತನ್ನ ಮನೆಯಲ್ಲಿ, ಗಂಡನ ಮನೆಯಲ್ಲಿ ಹಾಗೂ ಈ ಸಮಾಜದಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಿ, ಹೋರಾಡಿ ಸಾಧನೆ  ಮಾಡುವುದರ ಜತೆಗೆ ತನ್ನಂತಹ ಇತರ ಹೆಣ್ಣು ಮಕ್ಕಳಿಗೆ ಹೇಗೆ ಸ್ಫೂರ್ತಿ ಆಗುತ್ತಾಳೆ, ಹೆಣ್ಣಿನ ಸಾಧನೆ ಮತ್ತು ಅದರ ಹಿಂದೆ ಇರುವ ವೇದನೆ ಎಲ್ಲವನ್ನು ಬಹಳ ವಿವರವಾಗಿ ಕುತೂಹಲಕರವಾಗಿ ವಿವರಿಸಲಾಗಿದೆ.

ಚಿ.ಗುರುದತ್ ನಿರ್ಮಾಣ ಸಂಸ್ಥೆಯಾದ ಶಾರದಾಸ್ ಸಿನಿಮಾಸ್ ಮೂಲಕ ಹೊನ್ನೇಶ್ ರಾಮಚಂದ್ರಯ್ಯ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಕಥಾ ನಾಯಕಿಯಾಗಿ ವರ್ಷಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯ ತಂದೆ ತಾಯಿ ಪಾತ್ರದಲ್ಲಿ ಪ್ರದೀಪ್ ತಿಪಟೂರ್ ಮತ್ತು ದಿವ್ಯಾ ಗೋಪಾಲ್ ಹಾಗೂ ಕಥಾ ನಾಯಕನಾಗಿ ಹೊಸ ಪರಿಚಯ ಮಂಗಳೂರು ಪ್ರತಿಭೆ ಕಿರಣ್‌ ನಟಿಸಲಿದ್ದಾರೆ.

ಇದನ್ನೂ ಓದಿ | Buddies : ಕಿರುತೆರೆ ನಟ ಕಿರಣ್‌ರಾಜ್ ಈಗ ಸ್ಯಾಂಡಲ್‌ವುಡ್‌ಗೆ

ನಾಯಕನ ತಂದೆ ತಾಯಿ ಪಾತ್ರವನ್ನು ಪುಷ್ಪ ಸ್ವಾಮಿ ಮತ್ತು ಮಾಂಗಲ್ಯ ಧಾರಾವಾಹಿ ಖ್ಯಾತಿಯ ಮುನಿ ಅವರು ವಹಿಸಲಿದ್ದಾರೆ. ನಾಯಕನ ಅಣ್ಣನಾಗಿ ಬಹು ಮುಖ್ಯ ಪಾತ್ರದಲ್ಲಿ ಲಕ್ಷ್ಮಣ್ , ಅರುಣ್ ನಟಿಸುತ್ತಿದ್ದಾರೆ.

ಇತರ ತಾರಾಗಣದಲ್ಲಿ ಶ್ವೇತಾ , ರೂಪ , ಶಿಲ್ಪ ಅಯ್ಯರ್ ನಟಿಸಲಿದ್ದಾರೆ. ಜನನಿ ಧಾರಾವಾಹಿ ಆಗಸ್ಟ್ 15ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ ಎಂದು ತಂಡ ಹೇಳಿಕೊಂಡಿದೆ.

ಇದನ್ನೂ ಓದಿ | Ismart Jodi | ಕಿರುತೆರೆಗೆ ಬರಲು ಸಜ್ಜಾಗಿದೆ ʻಇಸ್ಮಾರ್ಟ್‌ ಜೋಡಿʼ: ಸ್ಪರ್ಧಿಗಳು ಯಾರು?

Exit mobile version