ಇತ್ತೀಚೆಗೆ, ರಶ್ಮಿಕಾ ಮಂದಣ್ಣ, ಕಾಜೋಲ್ ಮತ್ತು ಕತ್ರಿನಾ ಕೈಫ್ ಸೇರಿದಂತೆ ಹಲವಾರು ನಟರು ಡೀಪ್‌ಫೇಕ್‌ಗೆ ಬಲಿಯಾಗಿದ್ದಾರೆ. ಡೀಪ್‌ಫೇಕ್ ವಂಚನೆಗೆ ಒಳಗಾದವರಲ್ಲಿ 57 ಪ್ರತಿಶತದಷ್ಟು (Vaishnavi Gowda) ಸೆಲೆಬ್ರಿಟಿಗಳಾಗಿದ್ದಾರೆ.
ಈಗ ಅಗ್ನಿಸಾಕ್ಷಿ, ಸೀತಾರಾಮ ಸೀರಿಯಲ್ ಖ್ಯಾತಿಯ ನಟಿ ವೈಷ್ಣವಿ ಗೌಡಗೆ (Vaishnavi Gowda) ಕಿಡಿಗೇಡಿಗಳಿಂದ ಡೀಪ್ ಫೇಕ್ ಕಾಟ ಎದುರಾಗಿದೆ.
ಇದನ್ನೂ ಓದಿ: Vaishnavi Gowda: ನಟಿ ವೈಷ್ಣವಿ ಗೌಡಗೆ ನೋಟಿಸ್ ಕೊಟ್ಟ ಟ್ರಾಫಿಕ್ ಪೊಲೀಸರು; ಸೀತಮ್ಮ ಮಾಡಿದ ತಪ್ಪೇನು?
ವೈಷ್ಣವಿ ಅವರು ರೆಡ್ ಕಲರ್ ಡ್ರೆಸ್‌ನಲ್ಲಿರುವ ಫೋಟೊವನ್ನು ಪೋಸ್ಟ್ ಮಾಡಿದ್ದರು. ಕೆಲ ಕಿಡಿಗೇಡಿಗಳು ಈ ಫೋಟೊಗೆ ಬೋಲ್ಡ್ ಆಗಿ ಎಡಿಟ್ ಮಾಡಿ ಇಂಟರ್‌ನೆಟ್‌ನಲ್ಲಿ ವೈರಲ್ ಆಗುವಂತೆ ಮಾಡಿದ್ದಾರೆ.
ಸದ್ಯ ಈ ಡೀಪ್ ಫೇಕ್ ಬಗ್ಗೆ ‘ಸೀತಾರಾಮ’ (Seetharama) ನಟಿ ವೈಷ್ಣವಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ
ಈ ವರ್ಷದ ಆರಂಭದಲ್ಲಿ, ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ ಅವರ ಡೀಪ್‌ಫೇಕ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದಕ್ಕೂ ಮೊದಲು, ರಣವೀರ್ ಸಿಂಗ್ ಅವರ ಡೀಪ್‌ಫೇಕ್ ವೀಡಿಯೊ ಕೂಡ ವೈರಲ್ ಆಗಿದ್ದು, ಇದರಲ್ಲಿ ನಟ ಸರ್ಕಾರವನ್ನು ಟೀಕಿಸಿರುವಂತೆ ವೈರಲ್ ಆಗಿತ್ತು.