Site icon Vistara News

Vaishnavi Gowda | ʻಸಾಕ್ಷಿ ಇಲ್ಲದೆ ಹೇಗೆ ಆಡಿಯೊ ನಂಬೋದು? ವಿದ್ಯಾಭರಣ್‌ ಡೀಸೆಂಟ್‌ ಹುಡುಗʼ: ವೈಷ್ಣವಿ ತಾಯಿ

Vaishnavi Gowda (engagement issue)

ಬೆಂಗಳೂರು : ನಟಿ ವೈಷ್ಣವಿ ಗೌಡ (Vaishnavi Gowda) ಅವರು ನಟ ವಿದ್ಯಾಭರಣ್ ಜತೆ ನಿಶ್ಚಿತಾರ್ಥ ಮುರಿದುಕೊಂಡಿದ್ದಾರೆ. ʻತಾವು ಈ ವಿಚಾರವನ್ನು ಇಲ್ಲಿಗೇ ಮುರಿದುಕೊಂಡಿದ್ದೇವೆʼ ಎಂದು ಸೋಷಿಯಲ್‌ ಮೀಡಿಯಾ ಮೂಲಕ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ವೈಷ್ಣವಿ ಗೌಡ ಅವರು ಈ ವಿಚಾರದ ಬಗ್ಗೆ ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ನಟಿಯ ತಂದೆ ತಾಯಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ನಟ ವೈಷ್ಣವಿ ಅವರ ತಾಯಿ ಭಾನು ಅವರು ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿ ʻʻವಿದ್ಯಾಭರಣ್‌ ನಟಿಸುತ್ತಿದ್ದ ʻಚಾಕಲೇಟ್ ಬಾಯ್ʼ ಚಿತ್ರದ ಮೂಲಕ ವೈಷ್ಣವಿ ಅವರಿಗೆ ಪರಿಚಯ ಆಗಿದ್ದು. ನಮ್ಮ ಮನಸಿನಲ್ಲಿ ಅವರಿಗೆ ಹೆಣ್ಣು ಕೊಡಬೇಕು ಎಂಬ ಆಲೋಚನೆ ಇರಲಿಲ್ಲ. ವೈಷ್ಣವಿ ಬಿಗ್‌ ಬಾಸ್‌ಗೆ ಹೋದಾಗ ವಿದ್ಯಾಭರಣ್ ಅವರಿಗೆ ಆಕೆಯ ಗುಣ ಇಷ್ಟ ಆಗಿತ್ತು. ನಂತರ ಆಕೆಯ ಜಾತಕ ಕೇಳಿದ್ದರು. ಜಾತಕ ಕೂಡಿ ಬಂತು. ಹಾಗಾಗಿ ಸಂಬಂಧಕ್ಕೆ ಒಪ್ಪಿಕೊಂಡೆವು. ವೈಷ್ಣವಿ ಸಮಯ ಕೇಳಿದ್ದಳು. ನವೆಂಬರ್ 11ಕ್ಕೆ ಹೆಣ್ಣು ನೋಡೊ ಕಾರ್ಯಕ್ರಮ ನೆರವೇರಿತು. ಎಲ್ಲಾ ಸರಿ ಇತ್ತು ಅಷ್ಟರಲ್ಲಿ ಹೀಗೆ ಆಯಿತು. ಆಡಿಯೊ ಹೇಗೆ ಬಂತು, ಹುಡುಗಿ ಯಾರು ಎಂಬುದು ನಮಗೆ ಗೊತ್ತಿಲ್ಲʼʼಎಂದಿದ್ದಾರೆ.

ಇದನ್ನೂ ಓದಿ | ವೈಷ್ಣವಿ ಗೌಡ ಜತೆ ಎಂಗೇಜ್‌ಮೆಂಟ್ ಆಗಿಲ್ಲ: ನಟಿಯ ವೈರಲ್‌ ಆಡಿಯೋ ಬಳಿಕ ಸ್ಪಷ್ಟನೆ ನೀಡಿದ ನಟ ವಿದ್ಯಾಭರಣ್‌

ಮಾತು ಮುಂದುವರಿಸಿ ʻʻವಿದ್ಯಾಭರಣ್‌ ಕ್ಯಾರೆಕ್ಟರ್ ಸರಿ ಇಲ್ಲ ಅಂದಾಗ ನಾನು ನಂಬಿಲ್ಲ. ಸಾಕ್ಷಿ ಇಲ್ಲದೆ ಹೇಗೆ ಬೇರೆಯವರ ಆಡಿಯೊ ನಂಬೋದು. ವಿದ್ಯಾಭರಣ್‌ ಡೀಸೆಂಟ್ ಹುಡುಗ. ನಮ್ಮ ಜತೆ ಚೆನ್ನಾಗಿ ವರ್ತಿಸುತ್ತಿದ್ದ. ಹಾಗಾಗಿ ನಂಬಿದ್ದೇವೆ. ಮನೆ ದೇವರು, ಜಾತಕ ಎಲ್ಲಾ ಹೊಂದಾಣಿಕೆ ಬಂತು, ಹಾಗಾಗಿ ಮದುವೆ ಪ್ರಸ್ತಾಪ ಮಾಡಿದ್ದೇವೆ. ಸಾಕ್ಷಿ ಇಲ್ಲದೆ ನಾವು ನಂಬುವುದಿಲ್ಲ. ವೈಷ್ಣವಿ ಮೈಂಡ್ ಈ ವಿಚಾರ ಸಂಬಂಧಿಸಿದಂತೆ ಬ್ರೇಕ್ ಅಪ್ ರೀತಿ ಇದೆ. ಈ ಮದುವೆ ಮುಂದುವರಿಯುವ ಸಾಧ್ಯತೆ ಕಡಿಮೆ ಇದೆ, ಗೊಂದಲದಲ್ಲಿದ್ದೇವೆʼʼಎಂದು ಹೇಳಿಕೆ ನೀಡಿದ್ದಾರೆ.

ಆಗಿದ್ದೇನು?
ನವೆಂಬರ್‌ 25ರಂದು ವೈಷ್ಣವಿ ಗೌಡ ಹಾಗೂ ವಿದ್ಯಾಭರಣ್‌ ಹಾರ ಹಾಕಿಕೊಂಡು ಕುಟುಂಬಸ್ಥರ ಜತೆಗೆ ನಿಂತಿರುವ ಫೋಟೋ ವೈರಲ್ ಆಗಿತ್ತು. ಇದಾದ ಕೂಡಲೇ ವಿದ್ಯಾಭರಣ್ ತಮಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಒಬ್ಬರು ನಟಿ ಆಡಿಯೊ ಹರಿಬಿಟ್ಟಿದ್ದರು. ಇದರಿಂದ ಎಚ್ಚೆತ್ತುಕೊಂಡಿರುವ ವಿದ್ಯಾಭರಣ್‌ ಅವರು ವೈಷ್ಣವಿಗೂ ತಮಗೂ ಎಂಗೇಜ್‌ಮೆಂಟ್‌ ಆಗಿಯೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ವೈಷ್ಣವಿ ಗೌಡ ಅವರು ಕೂಡ ʻತಾವು ಈ ವಿಚಾರವನ್ನು ಇಲ್ಲಿಗೇ ಮುರಿದುಕೊಂಡಿದ್ದೇವೆʼ ಎಂದು ಸೋಷಿಯಲ್‌ ಮೀಡಿಯಾ ಮೂಲಕ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ | Vaishnavi Gowda | ನಿಶ್ಚಿತಾರ್ಥ ಮುರಿದುಕೊಂಡ ನಟಿ ವೈಷ್ಣವಿ ಗೌಡ : ನಟಿ ಹೇಳಿದ್ದೇನು?

Exit mobile version