Site icon Vistara News

Vaishnavi Gowda | ʻಸೀತಾರಾಮʼ ಧಾರಾವಾಹಿ ಮೂಲಕ ಮಿಂಚಲಿದ್ದಾರೆ ವೈಷ್ಣವಿ ಗೌಡ

Vaishnavi Gowda

ಬೆಂಗಳೂರು : ʻಅಗ್ನಿಸಾಕ್ಷಿʼ ಧಾರಾವಾಹಿ ಖ್ಯಾತಿಯ ವೈಷ್ಣವಿ ಗೌಡ (Vaishnavi Gowda) ಮತ್ತೆ ಟಿವಿ ಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ʻʻಸೀತಾರಾಮʼʼ ಧಾರಾವಾಹಿ ಮೂಲಕ ವೈಷ್ಣವಿಗೌಡ ಮತ್ತೆ ಕಿರುತೆರೆಗೆ ಬರುತ್ತಿದ್ದಾರೆ. ಇದರಿಂದ ಅವರ ಅಭಿಮಾನಿಗಳು ಸಂತಸಗೊಂಡಿದ್ದಾರೆ .

ʻಅಗ್ನಿಸಾಕ್ಷಿʼ ಧಾರಾವಾಹಿ ನಂತರ ವೈಷ್ಣವಿ ಅವರು ಬಿಗ್‌ ಬಾಸ್‌ ಮನೆಗೆ ಕಾಲಿಟ್ಟಿದ್ದರು. ಅಲ್ಲಿ ಸಾಕಷ್ಟು ಪ್ರಶಂಸೆಯನ್ನು ಪಡೆದುಕೊಂಡರು. ಇದೀಗ ʻಮಂಗಳಗೌರಿ ಮದುವೆʼ ಧಾರಾವಾಹಿ ಖ್ಯಾತಿಯ ಗಗನ್‌ ಜೋಡಿಯಾಗಿ ನಟಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ವಪ್ನ ಕೃಷ್ಣ ನಿರ್ದೇಶನದ ಸೀತಾರಾಮ ಧಾರಾವಾಹಿಯಲ್ಲಿ ನಾಯಕಿಯಾಗಿಯಾಗುತ್ತಿದ್ದಾರೆ ವೈಷ್ಣವಿ ಗೌಡ.

ಇದನ್ನೂ ಓದಿ | ವೈಷ್ಣವಿ ಗೌಡ ಜತೆ ಎಂಗೇಜ್‌ಮೆಂಟ್ ಆಗಿಲ್ಲ: ನಟಿಯ ವೈರಲ್‌ ಆಡಿಯೋ ಬಳಿಕ ಸ್ಪಷ್ಟನೆ ನೀಡಿದ ನಟ ವಿದ್ಯಾಭರಣ್‌

ಸದ್ಯದಲ್ಲಿಯೇ ʻಸೀತಾರಾಮʼ ಧಾರಾವಾಹಿ ಜೀ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಹಿಂದೆ ಅಷ್ಟೇ ವೈಷ್ಣವಿ ಅವರು ಉದ್ಯಮಿ ವಿದ್ಯಾಭರಣ್ ಜತೆ​ ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾದ ಫೋಟೊವೊಂದು ವೈರಲ್ ಆಗಿತ್ತು. ಬಳಿಕ ಕಾರಣಾಂತರಗಳಿಂದ ಆ ಸಂಬಂಧ ಮುರಿದು ಬಿದ್ದಿದೆ. ಈಗ ವೈಷ್ಣವಿಗೌಡ ಸ್ವಲ್ಪ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ.

ಇದನ್ನೂ ಓದಿ | Vaishnavi Gowda | ವೈಯಕ್ತಿಕ ಜಂಜಾಟ ಮರೆತು ಟ್ಯಾಟೂ ಹಾಕಿಸಿಕೊಂಡ ವೈಷ್ಣವಿ ಗೌಡ: ಏನಿದರ ಅರ್ಥ?

Exit mobile version